FLASH| ಐಪಿಎಲ್ 2021: ಮುಂದಿನ ಎಲ್ಲಾ ಪಂದ್ಯ ರದ್ದು!

0
321
Tap to know MORE!

ಮುಂಬೈ(ಮೇ.04): ದೇಶಾದ್ಯಂತ ಕೊರೋನಾ ಅಬ್ಬರ ದಿನೇ ದಿನೇ ಹೆಚ್ಚುತ್ತಿದೆ. ಈ ಆತಂಕದ ನಡುವೆಯೂ ಈ ಬಾರಿ ಐಪಿಎಲ್‌ ಕ್ರಿಕೆಟ್‌ ಪಂದ್ಯಾಟ ಆರಂಭಗೊಂಡಿದ್ದವು. ಆದರೀಗ ಕ್ರಿಕೆಟಿಗರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಮುಂದಿನ ಎಲ್ಲಾ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ. ಬಿಸಿಸಿಐ ಉಪಾಧ್ಯಕ್ಷ ರಾಹುಲ್ ಶುಕ್ಲಾ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ

ಆದರೆ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಅತ್ಯಂತ ಸುರಕ್ಷಿತ ಬಯೋ ಬಬಲ್‌ನೊಳಗೆ ನಡೆಯುತ್ತಿದ್ದ ಐಪಿಎಲ್‌ 14ನೇ ಆವೃತ್ತಿಗೂ ಕೊರೋನಾ ಕರಿ ನೆರಳು ಬಿದ್ದಿತ್ತು. ಕೆಕೆಆರ್‌ ಹಾಗೂ ಸಿಎಸ್‌ಕೆ ತಂಡದ ಆಟಗಾರರಿಗೆ ಸೋಂಕು ಕಾಣಿಸಿಕೊಂಡಿದ್ದು, ಐಪಿಎಲ್‌ ಆಟಗಾರರು ಆತಂಕಕ್ಕೆ ಸಿಲುಕಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಸದ್ಯ ಐಪಿಎಲ್‌ ಟಿ20 ಟೂರ್ನಿಯನ್ನು ರದ್ದುಗೊಳಿಸಲಾಗಿದೆ.

ಇದನ್ನೂ ಓದಿ: ಮಮೈಕ್ರೋಸಾಫ್ಟ್ ಮಾಜಿ ಸಿಇಒ ಬಿಲ್ ಗೇಟ್ಸ್ – ಮೆಲಿಂಡಾ 27 ವರ್ಷಗಳ ದಾಂಪತ್ಯ ಜೀವನಕ್ಕೆ ವಿಚ್ಛೇದನ!

ಯಾರಿಗೆಲ್ಲಾ ಸೋಂಕು?

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕೆಕೆಆರ್‌ನ ಸ್ಪಿನ್ನರ್‌ ವರುಣ್‌ ಚಕ್ರವರ್ತಿ, ವೇಗಿ ಸಂದೀಪ್‌ ವಾರಿಯರ್‌, ಚೆನ್ನೈನ ಬೌಲಿಂಗ್‌ ಕೋಚ್‌ ಲಕ್ಷ್ಮಿಪತಿ ಬಾಲಾಜಿ ಹಾಗೂ ತಂಡದ ಬಸ್‌ ಕ್ಲೀನರ್‌ನ ಕೋವಿಡ್‌ ಪರೀಕ್ಷಾ ವರದಿ ಪಾಸಿಟಿವ್‌ ಬಂದಿದೆ. ವರುಣ್‌ ಹಾಗೂ ಸಂದೀಪ್‌ರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ತಂಡದ ಇನ್ನಿತರ ಸದಸ್ಯರ ವರದಿ ನೆಗೆಟಿವ್‌ ಬಂದಿದ್ದರೂ, ಎಲ್ಲರನ್ನೂ ಐಸೋಲೇಷನ್‌ಗೆ ಒಳಪಡಿಸಲಾಗಿದೆ. ಬಾಲಾಜಿ ತಂಡದೊಂದಿಗೇ ಡ್ರೆಸ್ಸಿಂಗ್‌ ರೂಂ ಹಾಗೂ ಡಗೌಟ್‌ಗಳಲ್ಲಿ ಇರುತ್ತಿದ್ದ ಕಾರಣ, ಚೆನ್ನೈ ತಂಡ ಸಹ ಐಸೋಲೇಷನ್‌ಗೆ ಒಳಗಾಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here