ಮಂಗಳೂರು: ಪದವಿನಂಗಡಿ ಜಂಕ್ಷನ್ ಬಳಿ ಎರಡು ಬೈಕ್ ನಡುವೆ ಅಪಘಾತ | ಓರ್ವ ಸವಾರ ಮೃತ್ಯು!

0
259
Tap to know MORE!

ಮಂಗಳೂರು: ಪದವಿನಂಗಡಿ ಜಂಕ್ಷನ್‍ನಲ್ಲಿ ಎರಡು ಬೈಕ್‍ಗಳು ಅಪಘಾತಕ್ಕೀಡಾಗಿದ್ದು,ಓರ್ವ ಸವಾರ ಮೃತ ಪಟ್ಟ ಘಟನೆ ನಡೆದಿದೆ.ರಸ್ತೆ ದಾಟುವ ಸಂದರ್ಭ ಬೈಕ್ ಸವಾರನೊಬ್ಬ ಬೈಕ್ ನಿಲ್ಲಿಸಿದ್ದು, ಎರಡು ಬೈಕ್‍ಗಳ ಅಪಘಾತಕ್ಕೆ ಕಾರಣವೆನ್ನಲಾಗಿದೆ.

ಈ ಸಂದರ್ಭ ವೇಗವಾಗಿ ಬಂದ ಬೈಕೊಂದು ಇನ್ನೊಂದು ದ್ವಿಚಕ್ರವನ್ನು ತಪ್ಪಿಸುವ ಭರದಲ್ಲಿ ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದು ಬೇರೊಂದು ಬೈಕಿಗೆ ಡಿಕ್ಕಿ ಹೊಡೆದು ಹಾರಿ ಬಿದ್ದಿದ್ದಾರೆ.

ಒಂದು ಬೈಕಿನವ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದರೆ ಅಂಗಡಿಗೆ ಡಿಕ್ಕಿ ಹೊಡೆದ ಬೈಕ್ ಸವಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಶಾಂತ್ ಎಂಬಾತ ಸಾವಿಗೀಡಾಗಿದ್ದಾನೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ನಗರ ಸಂಚಾರಿ ಪೊಲೀಸರು ಕೇಸು ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ..

LEAVE A REPLY

Please enter your comment!
Please enter your name here