UPDATE| ಮೇ 10 ರಿಂದ 14 ದಿನಗಳ ಕಾಲ ಕರ್ನಾಟಕದಲ್ಲಿ ಲಾಕ್‌ಡೌನ್ | ಏನಿರುತ್ತೆ, ಏನಿರಲ್ಲ?

0
485
Tap to know MORE!

ಬೆಂಗಳೂರು, ಮೇ 7: ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ ನಿರ್ಣಾಯಕ ಹೋರಾಟ ನಡೆಸಿದ್ದು, ರಾಜ್ಯವನ್ನು ಸಂಪೂರ್ಣ ಲಾಕ್‌ಡೌನ್ ಮಾಡುವ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶುಕ್ರವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮೇ 10 ರ ಬೆಳಗ್ಗೆ 6ಗಂಟೆಯಿಂದ 24 ರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯಾಾದ್ಯಂತ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗುವುದು ಎಂದರು.

ಇದರ ಬೆನ್ನಲ್ಲೇ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಏನಿರುತ್ತೆ?

 • ಆಹಾರ, ಹಾಲು, ಹಣ್ಣು ಮಾಂಸದ ಅಂಗಡಿ ಮಾರಾಟಕ್ಕೆ ಅವಕಾಶ (ಬೆಳಗ್ಗೆ 6 ರಿಂದ 10 ಗಂಟೆ)
 • ತಳ್ಳುಗಾಡಿಯಲ್ಲಿ ತರಕಾರಿ ಮಾರಾಟ ಮಾಡಲು ಅವಕಾಶ.
 • ಎಲ್ಲಾ ಬಗ್ಗೆ ವೈದ್ಯಕೀಯ ಸೇವೆ, ತುರ್ತು ಚಿಕಿತ್ಸೆಗೆ ತೆರಳಲು ಅವಕಾಶ.
 • ಶೇ 50ರಷ್ಟು ಹಾಜರಾತಿಯೊಂದಿಗೆ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿವೆ
 • ರಸ್ತೆ ಕಾಮಗಾರಿ, ಕಟ್ಟಡ ಕಾಮಗಾರಿ ಯಾವುದೇ ರೀತಿಯ ಅಡ್ಡಿಯಿಲ್ಲ.
 • ವಿವಾಹ/ಶುಭ ಕಾರ್ಯಕ್ರಮದಲ್ಲಿ 50 ಜನ ಮಾತ್ರ ಭಾಗವಹಿಸಲು ಅವಕಾಶ (ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು)
 • ಮದ್ಯ ಮಳಿಗೆಯಲ್ಲಿ ಪಾರ್ಸೆಲ್ ವ್ಯವಸ್ಥೆ,

ಏನಿರಲ್ಲ?

 • ಬಸ್ ಸಂಚಾರ ಇಲ್ಲ: (ಕೆಎಸ್ಸಾರ್ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ ಸೇರಿದಂತೆ ಸಾರಿಗೆ ಸಂಚಾರ )
 • ಅಂತಾರಾಜ್ಯ ಬಸ್ ಸಂಚಾರವೂ ಸ್ಥಗಿತ. ಖಾಸಗಿ ವಾಹನಗಳಲ್ಲಿ ಸಂಚಾರಕ್ಕೂ ನಿರ್ಬಂಧ
 • ಟ್ಯಾಕ್ಸಿ – ಕ್ಯಾಬ್ – ಆಟೋ ಇಲ್ಲ (ತುರ್ತು ಸೇವೆ ಹೊರತು ಪಡಿಸಿ)
 • ಸಿನಿಮಾ ಹಾಲ್, ಜಿಮ್, ಕ್ರೀಡಾಂಗಣ, ಆಡಿಟೋರಿಯಂ, ಈಜುಕೊಳ
 • ಹೋಟೆಲ್, ರೆಸ್ಟೋರೆಂಟ್ ಬಂದ್ ಆಗಿರಲಿದ್ದು, ಟೇಕ್ ಅವೇ, ಪಾರ್ಸೆಲ್ ವ್ಯವಸ್ಥೆಗೆ ಅನುಮತಿ ಇರಲಿದೆ.
 • ಬಾರ್, ರೆಸ್ಟೋರೆಂಟ್ ಬಂದ್, ಟೇಕ್ ಅವೇಗೆ ಮಾತ್ರ ಅನುಮತಿ (ನಿರ್ಬಂಧಿತ ಅವಧಿಯಲ್ಲಿ ಮಾತ್ರ)

LEAVE A REPLY

Please enter your comment!
Please enter your name here