ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಬದಲಾವಣೆ: ಮನೆಯಲ್ಲೇ ಮದುವೆ – 40 ಜನರಿಗೆ ಸೀಮಿತ!

0
265
Tap to know MORE!

ಬೆಂಗಳೂರು: ಲಾಕ್ ಡೌನ್ ಘೋಷಣೆ ಮಾಡಿದೆ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.

ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ ಮದುವೆಯಲ್ಲಿ 40 ಜನರು ಭಾಗವಹಿಸಬಹುದು. ಮೊದಲು ವಿವಾಹ ಕಾರ್ಯಕ್ರಮದಲ್ಲಿ 50 ಜನರು ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಮಾರ್ಗಸೂಚಿ:

  • ಮದುವೆಗೆ 40 ಜನರಿಗೆ ಮಾತ್ರ ಅವಕಾಶ
  • ಮದುವೆಗೆ ಹಾಜರಾಗುವವರಿಗೆ ಪಾಸ್‌ ಕಡ್ಡಾಯ
  • ಮದುವೆ ಸಮಾರಂಭವನ್ನು ಅವರ ಮನೆಗಳಲ್ಲೇ ಮಾಡಬೇಕು
  • ಮದುವೆ ಕಾರ್ಯಕ್ರಮಕ್ಕೆ, ಆಹ್ವಾನ ಪತ್ರಿಕೆ ತೋರಿಸಿ ಅಧಿಕಾರಿಗಳ ಅನುಮತಿ ಅಗತ್ಯ
  • ಬಿಬಿಎಂಪಿ ಅಥವಾ ತಹಶೀಲ್ದಾರ್‌ಗಳಿಂದ ಪಾಸ್ ಪಡೆದಿರಬೇಕು
  • ಮದುವೆಯಲ್ಲಿ ಭಾಗಿಯಾಗುವ 40 ಅತಿಥಿಗಳಿಗೂ ಪಾಸ್ ನೀಡಬೇಕು.
  • ಷರತ್ತು ಉಲ್ಲಂಘಿಸಿದ್ರೆ ಮದುವೆ ಆಯೋಜಕರ ವಿರುದ್ಧ ಕ್ರಮ
  • ಯಾವುದೇ ಕಾರಣಕ್ಕೂ ಪಾಸ್ ವರ್ಗಾಯಿಸುವಂತಿಲ್ಲ. ಪಾಸ್ ವರ್ಗಾಯಿಸಿದ್ರೆ ಕಠಿಣ ಕ್ರಮ

ಲಾಕ್ ಡೌನ್ ಜಾರಿಯಲ್ಲಿರುವ ಅವಧಿಯಲ್ಲಿ ಈಗಾಗಲೇ ನಿಗದಿಯಾಗಿರುವ ವಿವಾಹಗಳನ್ನು ಮನೆಯಲ್ಲಿ ನಡೆಸಬಹುದು ಮತ್ತು ಅದರಲ್ಲಿ 40 ಜನರು ಪಾಲ್ಗೊಳ್ಳಬಹುದು. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪರಿಷ್ಕೃತ ಆದೇಶದಲ್ಲಿ ತಿಳಿಸಲಾಗಿದೆ.

ಈಗಾಗಲೇ ನಿಗದಿಯಾಗಿರುವ ವಿವಾಹಗಳನ್ನು ಕಲ್ಯಾಣ ಮಂಟಪದಲ್ಲಿ ನಡೆಸಲು ಸಾಧ್ಯವಿಲ್ಲ. ಹಿಂದೆ ಇದ್ದ ನಿಯಮದಂತೆ ಸ್ಥಳೀಯ ಆಡಳಿವು ವಿವಾಹದಲ್ಲಿ ಪಾಲ್ಗೊಳ್ಳುವ ಜನರಿಗೆ ಪಾಸ್ ವಿತರಣೆ ಮಾಡಲಿದೆ.

LEAVE A REPLY

Please enter your comment!
Please enter your name here