10 ವರ್ಷದ ಬಾಲಕಿಯನ್ನು ಕೊಂದ 11 ವರ್ಷದ ಬಾಲಕ!!

0
208
Tap to know MORE!

ಇಬ್ಬರು ಅಪ್ರಾಪ್ತ ವಯಸ್ಕರನ್ನು ಒಳಗೊಂಡ ಒಂದು ಅಪರಾಧ ಪ್ರಕರಣದಲ್ಲಿ, 11 ವರ್ಷದ ಬಾಲಕನು, ತನ್ನ ನೆರೆಹೊರೆಯ 10 ವರ್ಷದ ಬಾಲಕಿಯನ್ನು ಕೊಲೆ ಮಾಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಲಕನನ್ನು ಪೋಲೀಸರು ಬಂಧಿಸಿದ್ದಾರೆ.

ಈ ಘಟನೆಯು ಮಧ್ಯಪ್ರದೇಶದ ಇಂದೋರ್‌ನ ಲಾಸುಡಿಯಾ ಪ್ರದೇಶದಲ್ಲಿ ಸೋಮವಾರ ನಡೆದಿದೆ.

ಮೂಡುಬಿದಿರೆ : ಮಾರಕಾಸ್ತ್ರಗಳಿಂದ ಯುವಕನ ಬರ್ಬರ ಹತ್ಯೆ!

ಐದನೇ ತರಗತಿ ವಿದ್ಯಾರ್ಥಿನಿ ಹೂವುಗಳನ್ನು ಕೀಳಲು, ಮಧ್ಯಾಹ್ನ ತನ್ನ ಮನೆಯಿಂದ ಹೊರಟು ಹೋಗಿದ್ದಳು ಎನ್ನಲಾಗಿದೆ. ಅವಳು ಹಿಂತಿರುಗದಿದ್ದಾಗ, ಕುಟುಂಬದವರು ಅವಳನ್ನು ಹುಡುಕಲು ಪ್ರಾರಂಭಿಸಿದರು.

‘ತಲೆಗೆ ಕಲ್ಲಿನಿಂದ ಹೊಡೆಯಲಾಗಿದೆ’

ಕೆಲವು ಸಮಯದ ಹುಡುಕಾಟದ ನಂತರ, ಅವರು ತಮ್ಮ ಮನೆಯ ಸಮೀಪದಲ್ಲಿ ಆಕೆಯ ಮೃತದೇಹವನ್ನು ನೋಡಿದ್ದಾರೆ. ಅವಳ ತಲೆಯನ್ನು ಕಲ್ಲಿನಿಂದ ಪುಡಿಮಾಡಲಾಗಿದೆ ಎಂದು ತಿಳಿದು ಬಂದಿದೆ.

ಸಿಸಿಟಿವಿ ದೃಶ್ಯಾವಳಿಗಳು ಮತ್ತು ಕೆಲವು ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ, 11 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದರು. ಅಪರಾಧದ ಬಳಿಕ,ಆತನು ತನ್ನ ಬಾತ್ರೂಮ್ ಒಳಗೆ ಅಡಗಿಕೊಂಡಿದ್ದ.

ಪೋಲೀಸರು ಪ್ರಶ್ನಿಸಿದ ಬಳಿಕ, ಹುಡುಗ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಮೊಬೈಲ್ ಫೋನ್‌ನಲ್ಲಿ ಆಡುವ ಆಟಗಳಲ್ಲಿ ಆ ಬಾಲಕಿಯು, ಈತನನ್ನು ಸೋಲಿಸುತ್ತಿದ್ದರಿಂದ, ಅವನಿಗೆ ಅವಳ ವಿರುದ್ಧ ದ್ವೇಷವಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here