ಅಮ್ಮನ ಅಂತರಂಗದ ಕಾಳಜಿಯನ್ನು ಅರಿಯಲೇ ಇಲ್ಲ

0
548
Tap to know MORE!

ಕಲಿಯುಗದ ರಾಕ್ಷಸಿ, ಚೀನಾದ ಕೋರೋನಾ ಭಾರತಕ್ಕೆ ಬಂದ ಕಾಲ‌. ನಿಖರವಾಗಿ ಹೇಳುವುದೆಂದರೆ ಕಳೆದ ವರ್ಷದ ಫೆಬ್ರವರಿ-ಮಾರ್ಚ್‌ ತಿಂಗಳು. ಇಡೀ ದೇಶದ ಜನರು ಸಾಂಕ್ರಾಮಿಕದ ಅಬ್ಬರಕ್ಕೆ ಶರಣಾಗಿ ಲಾಕ್‌ಡೌನ್‌ ಹೆಸರಲ್ಲಿ ಕುಟುಂಬದವರೊಂದಿಗೆ ಕಾಲ ಕಳೆದ ದಿನಗಳವು.

ಆ ದಿನಗಳಲ್ಲಿ ಹಗಲಿಡೀ ಮನೆಯವರೊಂದಿಗೆ ಕಾಲ ಕಳೆಯುತ್ತಿದ್ದ ನಾನು ಅಂದೊಂದು ದಿನ ಸಂಜೆ ಗೆಳತಿಯನ್ನು ಜೊತೆಮಾಡಿಕೊಂಡು ಹೊಳೆಯ ಕಡೆಗೆ ಹೋಗಿದ್ದೆ. “ಬಡವಿ ಉಟ್ಟ ಸೀರೆಯಂತೆ” ಮನೆಯಿಂದ ಹೊರಗಡೆ ಹೋಗಬಾರದೆಂಬುದು ಅಮ್ಮನ‌ ನಿತ್ಯದ ಮಾತಾಗಿತ್ತು. ಹೊಳೆಯ ಕಡೆ ಹೋದರಂತೂ ಅಮ್ಮ ಸುಮ್ಮನಿರುತ್ತಿರಲಿಲ್ಲ ಎಂದು ತಿಳಿದಿದ್ದ ನಾನು ಆ ದಿನ ಸಂಜೆ ಕಳ್ಳ ಬೆಕ್ಕಿನಂತೆ ಹೊಳೆಯತ್ತ ಹೆಜ್ಜೆ ಹಾಕಿದ್ದೆ. ವಿಷಯ ತಿಳಿದ ಅಮ್ಮ ನನ್ನ ಮೇಲೆ ಎಂದಿಗಿಂತ ಜಾಸ್ತಿಯೇ ಕೋಪಗೊಂಡಿದ್ದಳು. ಮಾತ್ರವಲ್ಲದೇ, ಮನೆಗೆ ಬಂದಾಗ ಅದರ ಸಲುವಾಗಿ ʼಮಂಗಳಾರತಿʼ ಯನ್ನೂ ಮಾಡಿದ್ದಳು!

“ಒಂದು ದಿನ ಹೊಳೆಗೆ ಹೋದರೆ ಏನಾಗುತ್ತದೆ? ” ಎಂಬುದೇ ನನ್ನ ಪ್ರಶ್ನೆಯಾಗಿತ್ತು. ಆದರೆ ಆ ದಿನ ನೇತ್ರಾವತಿ ನದಿಯಲ್ಲಿ ಮಕ್ಕಳಿಬ್ಬರು ನೀರು ಪಾಲಾಗಿದ್ದಾರೆಂಬ ಸುದ್ದಿ ತಿಳಿದ ಮೇಲೆ ನನ್ನ ಪ್ರಶ್ನೆಯನ್ನು ನಾನೇ ಅಳಿಸಿದ್ದೆ. “ಗೊತ್ತಾನಗ ಪೊರ್ತಾಂಡ್” ಎಂಬ ಮಾತಿನಂತೆ ನನ್ನಾಕೆಯ ಅಂತರಂಗದ ಕಾಳಜಿಯನ್ನು ನಾ ಅರಿಯಲೇ ಇಲ್ಲ. ಅಮ್ಮನ ಕೋಪ ಹಾಗೂ ಹಿಡಿತದ ಹಿಂದಿದ್ದಿದೂ ಕಾಳಜಿ, ಅಕ್ಕರೆ ಎಂದು ನನಗೆ ತಿಳಿಯುವ ವೇಳೆಗೆ ಬಾನ ಚಂದಿರ ಪೂರ್ವದಿಂದ ಪಶ್ಚಿಮಕ್ಕೆ ಜಾರಿದ್ದ .

ವಿಧಿಶ್ರೀ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here