ಬೆಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ವಿಮಾನಗಳ ಹಾರಾಟ ರದ್ದು!

0
433
Tap to know MORE!

ಬೆಂಗಳೂರು: ರಾಜ್ಯ ಸರ್ಕಾರ ಇಂದಿನಿಂದ (ಮೇ 10) ರಾಜ್ಯದಲ್ಲಿ ಲಾಕ್​ಡೌನ್​ ಜಾರಿಗೊಳಿಸಿದೆ. ಕೊರೊನಾ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮವನ್ನು ಪಾಲಿಸಬೇಕೆಂದು ತಿಳಿಸಿದೆ. ವಿಧಿಸಿದ ಕಠಿಣ ನಿಯಮಗಳ ಬಿಸಿ ಕೆಂಪೇಗೌಡ ಏರ್​ಪೋರ್ಟ್​ಗೂ ತಟ್ಟಿದೆ. ಕೊರೊನಾ ತಡೆಗಟ್ಟಲು ಲಾಕ್​ಡೌನ್​ ಕಠಿಣ ನಿಯಮಗಳು ಜಾರಿಯಾದ ಹಿನ್ನೆಲೆ ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸುವ ಮತ್ತು ಬೆಂಗಳೂರಿನಿಂದ ನಿರ್ಗಮಿಸುವ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಬದಲಾವಣೆ: ಮನೆಯಲ್ಲೇ ಮದುವೆ – 40 ಜನರಿಗೆ ಸೀಮಿತ!

ಪ್ರಯಾಣಿಕರು ಇಲ್ಲದ ಕಾರಣ ವಿಮಾನ ಸಂಸ್ಥೆಗಳು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಬೆಂಗಳೂರಿಗೆ ಬರಬೇಕಿದ್ದ ಮತ್ತು ಬೆಂಗಳೂರಿನಿಂದ ಹೊರಡಬೇಕಿದ್ದ ಸುಮಾರು ಒಟ್ಟು 53 ವಿಮಾನಗಳ ಹಾರಾಟವನ್ನು ವಿಮಾನ ಸಂಸ್ಥೆಗಳು ರದ್ದುಗೊಳಿಸಿದೆ.

ಬೆಡ್ ಬ್ಲಾಕಿಂಗ್ : ಕೇವಲ ಮುಸ್ಲಿಂ ಯುವಕರ ಹೆಸರು ಓದಿದ್ದಕ್ಕೆ ಕ್ಷಮೆಯಾಚಿಸಿದ ಸಂಸದ ತೇಜಸ್ವಿ ಸೂರ್ಯ?

ಕೊರೊನಾ ಲಾಕ್​ಡೌನ್​ ಭಯದಿಂದ ಜನರು ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸುತ್ತಿಲ್ಲ. ಹೀಗಾಗಿ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಸದ್ಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಲಾಕ್​ಡೌನ್​ನಿಂದಾಗಿ‌ ನಗರ ಬಿಟ್ಟು ತಮ್ಮ ರಾಜ್ಯಗಳತ್ತ ಜನ ಮುಖ ಮಾಡುತ್ತಿರುವ ಸಂಖ್ಯೆ ಇಂದು ಮುಂದುವರೆದಿದೆ. ಜೊತೆಗೆ ನಗರದಲ್ಲಿ ಟ್ಯಾಕ್ಸಿ ಕ್ಯಾಬ್​ಗಳು ಸಿಗುತ್ತೋ ಇಲ್ಲವೂ ಅಂತಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರಯಾಣಿಕರು ಕಾಲಹರಣ ಮಾಡುತ್ತಿದ್ದು, ಮಧ್ಯಾಹ್ನದ ವಿಮಾನಗಳಿಗೂ ಬೆಳಗ್ಗೆಯೇ ಆಗಮಿಸಿದ್ದಾರೆ. ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ವಿಮಾನಗಳ ಮೂಲಕ ತಮ್ಮ ರಾಜ್ಯಗಳತ್ತ ಜನ ಗುಳೆ ಹೊರಟಿದ್ದಾರೆ.

LEAVE A REPLY

Please enter your comment!
Please enter your name here