ಕೋವಿಡ್ ‘POSITIVE’ : 110 ವರ್ಷದ ರಮಾನಂದ ತೀರ್ಥ ಸೋಂಕಿನಿಂದ ಗುಣಮುಖ!

0
75
Tap to know MORE!

ಹೈದರಾಬಾದ್: 110 ವರ್ಷದ ರಮಾನಂದ ತೀರ್ಥ ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಕೊರೋನಾ ವೈರಸ್‌ನಿಂದ ಗುಣಮುಖರಾದ ಭಾರತದ ಅತ್ಯಂತ ಹಿರಿಯ ರೋಗಿಗಳಲ್ಲಿ ಒಬ್ಬರು ಎಂದು ವೈದ್ಯರು ತಿಳಿಸಿದ್ದಾರೆ.

ಸೌಮ್ಯವಾದ ಕೋವಿಡ್ ಲಕ್ಷಣಗಳು ಮತ್ತು ಕಡಿಮೆ ಸ್ಯಾಚುರೇಶನ್ ಮಟ್ಟಗಳೊಂದಿಗೆ ರಮಾನಂದ ತೀರ್ಥರನ್ನು ಏಪ್ರಿಲ್ 24 ರಂದು ಇಲ್ಲಿಯ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೊರೋನಾ ಗೆದ್ದ ಶತಾಯುಷಿ – ಸಕಾರಾತ್ಮಕತೆಯೇ ಮದ್ದು!

ವೈದ್ಯರ ಪ್ರಕಾರ, ತೀರ್ಥ ಅವರು ಕೋವಿಡ್‌ ಸೋಂಕಿಗೆ ನೆಗೆಟಿವ್ ಫಲಿತಾಂಶ ಬಂದಿರುತ್ತದೆ. ಆದರೆ ಆಸ್ಪತ್ರೆಯ ಸಾಮಾನ್ಯ ವಾರ್ಡ್‌ನಲ್ಲಿ ಇನ್ನೂ ಕೆಲವು ದಿನಗಳವರೆಗೆ ಅವಲೋಕನದಲ್ಲಿರುತ್ತಾರೆ ಎಂದಿದ್ದಾರೆ. ಅವರು ಯಾವುದೇ ರೋಗ ಲಕ್ಷಣಗಳನ್ನು ಹೊಂದಿರದ ಕಾರಣ ಈ ಶತಾಯುಷಿ ಚೇತರಿಕೆ ಹೊಂದಿದೆ ಎಂದು ಅವರು ಹೇಳಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ತೀರ್ಥರಿಗೆ ಯಾವುದೇ ಸಂಸಾರವಿಲ್ಲ ಮತ್ತು ಹೈದರಾಬಾದ್ ಬಳಿಯ ಕಿಸಾರದಲ್ಲಿರುವ ಆಶ್ರಮದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here