ಮಂಗಳೂರು ವಿವಿ: ತುಳು ಸರಣಿ ಉಪನ್ಯಾಸ ಕಾರ್ಯಕ್ರಮಕ್ಕೆ ಸ್ವರ್ಣ ಸಂಭ್ರಮ

0
344
Tap to know MORE!

ಮಂಗಳೂರು: ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಮತ್ತು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ತುಳು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಸಹಯೋಗದಲ್ಲಿ ನಡೆಯುತ್ತಿದ್ದ ಆನ್‌ಲೈನ್‌ ಸರಣಿ ಉಪನ್ಯಾಸ ಕಾರ್ಯಕ್ರಮದ 50 ನೇ ಸಂಚಿಕೆ ʼಗೇನದ ಪರೆಲ್‌; ಬಂಗಾರ್ದ ಕುರಲ್‌ʼ ಮೇ 15 (ಶನಿವಾರ)ರಂದು ಸಂಜೆ 5 ರಿಂದ 6 ಗಂಟೆಯವರೆಗೆ ʼಗೂಗಲ್‌ ಮೀಟ್‌ʼ ನಲ್ಲಿ ನಡೆಯಲಿದೆ.

ಗೂಗಲ್ ಮೀಟ್ ಲಿಂಕ್:
ʼಗೇನದ ಪರೆಲ್‌; ಬಂಗಾರ್ದ ಕುರಲ್‌

ಸಂಸದ ನಳಿನ್‌ ಕುಮಾರ್‌ ಕಟೀಲ್‌ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಸುವರ್ಣ ನ್ಯೂಸ್‌ನ ʼಕರೆಂಟ್‌ ಅಫೇರ್ಸ್‌ʼ ಸಂಪಾದಕ ಜಯಪ್ರಕಾಶ್‌ ಶೆಟ್ಟಿ ಉಪ್ಪಳ ಉಪನ್ಯಾಸ ನೀಡಲಿದ್ದಾರೆ. ನಟ, ನಿರೂಪಕ ಕೀರ್ತಿ ಕುಮಾರ್‌ (ಕಿರಿಕ್‌ ಕೀರ್ತಿ) ವಿಶೇಷ ಆಹ್ವಾನಿತರಾಗಿರಲಿದ್ದಾರೆ. ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಕಿಶೋರ್‌ ಕುಮಾರ್‌ ಸಿಕೆ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ ಮೊದಲಾದವರು ಉಪಸ್ಥಿತರಿರಲಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಆಮಂತ್ರಣ ಪತ್ರಿಕೆ

ಕೊವಿಡ್‌-19 ಸಾಂಕ್ರಾಮಿಕದ ಕಾರಣದಿಂದ ಬೌತಿಕ ತರಗತಿಗಳು ಅಸಾಧ್ಯವೆನಿಸಿದಾಗ ತುಳು ಬಾಷೆ, ಸಂಸ್ಕೃತಿಗೆ ಸಂಬಂಧಪಟ್ಟ ವಿಚಾರಗಳನ್ನು ಆಧರಿಸಿ ಆನ್‌ಲೈನ್‌ನಲ್ಲಿ ವಿಷಯ ಪರಿಣಿತರಿಂದ ಪ್ರತಿ ವಾರಾಂತ್ಯದಲ್ಲಿ ಉಪನ್ಯಾಸ ಏರ್ಪಡಿಸುವ ಪರಿಪಾಟ ಆರಂಭವಾಗಿತ್ತು. ಈವರೆಗಿನ 49 ಸಂಚಿಕೆಗಳಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಒಳಗೊಂಡಂತೆ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದ ವಿದ್ವಾಂಸರು, ತುಳುನಾಡಿನ ಖ್ಯಾತನಾಮರು ಪಾಲ್ಗೊಂಡಿದ್ದಾರೆ. ವೆಬಿನಾರ್‌ನ 25ನೇ ಕಾರ್ಯಕ್ರಮವು ಬೆಳ್ಳಿ ಸಂಭ್ರಮವಾಗಿ ಸಂಪನ್ನಗೊಂಡು, ಪುಸ್ತಿಕೆಯ ರೂಪ ಪಡೆದುಕೊಳ್ಳುತ್ತಿದೆ. ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಹಾಗೂ ತುಳು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಸಂಯೋಜಕ ಡಾ. ಮಾಧವ ಎಂ. ಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here