ವಿಶ್ವ ಮ್ಯೂಸಿಯಂ ದಿನಾಚರಣೆ: ಮಹತ್ವ ಮತ್ತು ಇತಿಹಾಸ

0
375
Tap to know MORE!

ಮೇ 18 ವಿಶ್ವ ಮ್ಯೂಸಿಯಮ್ ದಿನಾಚರಣೆ ಆಚರಿಸಲಾಗುತ್ತದೆ. ವಸ್ತು ಸಂಗ್ರಹಾಲಯಗಳು ಹಿಂದೆ ಇದ್ದ ಪ್ರಾಚೀನ ಕಾಲದ ವಸ್ತುಗಳ ಮಾದರಿಯನ್ನು ತೋರಿಸಿಕೊಡುತ್ತದೆ. ನಮ್ಮ ಬೌದ್ಧಿಕ ವಿಕಸನಕ್ಕೆ ವಸ್ತು ಸಂಗ್ರಹಾಲಯಗಳು ಸಹಾಯ ಮಾಡುತ್ತದೆ.ಹಿರಿಯರು ಹೇಳಿದಂತೆ “ದೇಶ ಸುತ್ತಿ ನೋಡು,ಕೋಶ ಓದಿ ನೋಡು” ಎಂಬಂತೆ ಮ್ಯೂಸಿಯಮ್ ಗಳಿಗೆ ಭೇಟಿ ನೀಡಿ ಪ್ರಾಚೀನ ವಸ್ತುಗಳ ಅಧ್ಯಯನ ಮಾಡಿದರೆ ನಮ್ಮ ಮನೋಚಿಂತನೆ ವೃದ್ಧಿಯಾಗುತ್ತದೆ.

ಮ್ಯೂಸಿಯಮ್ ಎಂಬ ಪದ ಗ್ರೀಕ್ ನ “ಮ್ಯೂಸಿಯಂ” ನಿಂದ ಬಂದಿದೆ. ಮ್ಯೂಸ್200cಗಳ ಮನೆ.ಆಧುನಿಕ ಅರ್ಥದಲ್ಲಿ ವಸ್ತು ಸಂಗ್ರಹಾಲಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಉದ್ದೇಶಗಳನ್ನು ಅಧ್ಯಯನ ಮಾಡುವ ಮತ್ತು ಸಂರಕ್ಷಿಸುವ ಸಂಸ್ಥೆಗಳಾಗಿವೆ.

ಇದನ್ನೂ ಓದಿ: ನಾ ಕಂಡ ನಮ್ಮವರು.‌..

ಪ್ರಪಂಚದಲ್ಲಿ ಸಾಕಷ್ಟು ಸಂಗ್ರಹಾಲಯಗಳಿವೆ.ಉದಾಹರಣೆ ನೋಡುವುದಾದರೆ ,ಹರ್ಮಿಟೇಜ್ ಮ್ಯೂಸಿಯಮ್, ಟ್ರೆಟ್ಯ ಕೋವ್ ಗ್ಯಾಲರಿ, ಪುಸ್ಕಿನ್ ಮ್ಯೂಸಿಯಮ್,ಜಯಚಾಮರಾಜೇಂದ್ರ ಕಲಾ ಗ್ಯಾಲರಿ,ಮಂಜುಷಾ ವಸ್ತು ಸಂಗ್ರಹಾಲಯ ಧರ್ಮಸ್ಥಳ,ಹಾಗೂ ಎಲ್ಲರನ್ನೂ ತನ್ನತ್ತ ಸೆಳೆಯುವ ಭಾರತದ ಅತೀ ದೊಡ್ಡ ಮತ್ತು ವಿಶ್ವದಲ್ಲಿಯೇ ಅತ್ಯಂತ ಹಳೆಯ ಮ್ಯೂಸಿಯಮ್ ,ಇಂಡಿಯನ್ ಮ್ಯೂಸಿಯಮ್,ಕೊಲ್ಕತ್ತಾ.

ನಮ್ಮ ದೇಶದ ಈ ವಸ್ತು ಸಂಗ್ರಹಾಲಯ ವಿಜ್ಞಾನದಿಂದ ಮಾನವಶಾಸ್ತ್ರದ ವರೆಗೆ ಹಲವಾರು ಯುಗಗಳ ಸಂಗ್ರಹವನ್ನು ಹೊಂದಿದೆ.ವಿದೇಶದ ವಸ್ತುಗಳ ಸಂಗ್ರಹವನ್ನು ಹೊಂದಿದೆ.ಅಷ್ಟೆ ಅಲ್ಲದೆ ಅನೇಕ ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ಈ ಸಂಗ್ರಹಾಲಯದ ವಿಶೇಷತೆ ಅರಿತುಕೊಂಡರೆ ಭೇಟಿ ನೀಡಬೇಕೆಂಬ ಬಯಕೆ ಹೆಚ್ಚಾಗುತ್ತದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಸಂಸ್ಥೆಯಡಿ ಡ್ಯಾನಿಶ್ ಸಸ್ಯ ಶಾಸ್ತ್ರಜ್ಞರಾಗಿದ್ದ ಡಾ.ನಥನೀಲ್ ವಾಲಿಚ್ ಎಂಬುವವರಿಂದ 1814 ರಲ್ಲಿ ಸ್ಥಾಪಿಸಲ್ಪಟ್ಟಿತು.ಈ ಬೃಹತ್ ಸಂಗ್ರಹಾಲಯದಲ್ಲಿ ಅತೀ ಪ್ರಾಚೀನ ಹಾಗೂ ಅಪರೂಪದ ವಸ್ತುಗಳು ,ಆಭರಣಗಳು,ನಾಣ್ಯಗಳು,ಸರೀಸೃಪ ಜೀವಿಗಳ ಮಾದರಿಗಳು,ವರ್ಣಚಿತ್ರಗಳು ಹೀಗೆ ವೈವಿಧ್ಯಮಯ ವಸ್ತುಗಳನ್ನು ಕಾಣಬಹುದಾಗಿದೆ.ಶೈಕ್ಷಣಿಕ ಪ್ರವಾಸಿ ಆಕರ್ಷಣೆಯಾಗಿರುವುದರಿಂದ
ಮಕ್ಕಳ ಬೌದ್ಧಿಕ ವಿಕಸನದ ದೃಷ್ಟಿಯಿಂದ ಇಲ್ಲಿಗೆ ಭೇಟಿ ನೀಡಲೇಬೇಕು.

ವಸ್ತು ಸಂಗ್ರಹಾಲಯದ ವಿಸ್ಮಯಗಳು

ಕ್ರಿ. ಪೂ.2600-1700 ಸಮಯದಲ್ಲಿ ಹರಪ್ಪಾ ನಾಗರಿಕತೆಯ ಉತ್ಕನನದ ಸಂಧರ್ಭದಲ್ಲಿ ದೊರೆತಿರುವ ಆ ಸಮಯದ ಮಾನವನ ತಲೆ ಬುರುಡೆ.ಮಾನವನ ದೈಹಿಕ ವಿಕಸನವನ್ನು ಬಿಂಬಿಸುವ ಅಧ್ಬುತ ಮಾದರಿ.ಪ್ರತಿ ಹಂತದಲ್ಲೂ ಆದ ಶಾರೀರಿಕ ಬದಲಾವಣೆಗಳ ಕುರಿತು ಸಮರ್ಪಕವಾಗಿ ಇಲ್ಲಿ ತಿಳಿಸಲಾಗಿದೆ.ಪ್ರಪಂಚದ ಮೂಲೆ ಮೂಲೆಗಳಿಂದ ಯಾವೆಲ್ಲ ಪಕ್ಷಿಗಳು ಭಾರತಕ್ಕೆ ವಲಸೆ ಬರುತ್ತವೆ ಎಂಬುವುದನ್ನು ತಿಳಿಸುವ ಸರಳ ಮಾದರಿ.ಆಗ್ನೇಯ ಭಾರತ ಹಾಗೂ ಚೀನಾ ಪ್ರಾಂತ್ಯದ ಪಕ್ಷಿಗಳ ಮಾದರಿಗಳು.ಹಿಂದೆ ಈಜಿಪ್ಟ್ ಪ್ರಾಂತ್ಯಗಳಲ್ಲಿ ಮಾಡಲಾಗುತ್ತಿದ್ದ” ಮಮ್ಮಿಗಳ ” ಮಾದರಿ.ಪುರಾತನ ಸಮಯದಲ್ಲಿದ್ದ ದೃಢ ಕಾಯ ಆನೆಗಳ ಅಸ್ತಿ ಪಂಜರಗಳ ಕರಾರುವಕ್ಕಾದ ಜೋಡಣೆ,ಪ್ರಾಚೀನ ಸಮಯದ ಚಿಪ್ಪುಗಳು,ತಾಮ್ರದ ನಾಣ್ಯಗಳು.ಮೈಸೂರು ಪ್ರಾಂತ್ಯದಲ್ಲಿ ,1782-99 ರ ಸಮಯದಲ್ಲಿನ ನಾಣ್ಯದ ಮಾದರಿ.ಪ್ರಾಚೀನ ಶಿಲಾ ಯುಗದಲ್ಲಿ ಮಾನವನು ತುಂಡರಿಸಲು ಬಳಸುತ್ತಿದ್ದ ಕಲ್ಲಿನ ಆಯುಧ.ಇವೆಲ್ಲವೂ ಇಂಡಿಯನ್ ಮ್ಯೂಸಿಯಮ್ ಕೊಲ್ಕತ್ತಾ ದಲ್ಲಿ ಸಂಗ್ರಹಿತಗೊಂಡಿವೆ.
ಪ್ರವಾಸಕ್ಕೆ ತೆರಳಿದ ಸಂಧರ್ಭದಲ್ಲಿ ನಾವು ವಸ್ತು ಸಂಗ್ರಹಾಲಯ ಗಳಿಗೆ ಭೇಟಿ ನೀಡಿದೆವು ಎಂದಾದರೆ ಅದೊಂದು ಜೀವನದ ಅಧ್ಬುತ ಕ್ಷಣಗಳಲ್ಲಿ ಒಂದಾಗುವುದರಲ್ಲಿ ಸಂದೇಹವಿಲ್ಲ.

ಶಿವಪ್ರಸಾದ್ ಬೋಳಂತೂರು
ವಿವಿ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here