ಲೈನ್ ಮ್ಯಾನ್‌ಗಳಿಗೆ ಶಾಪ ಹಾಕುವ ಮುನ್ನ…

0
378
Tap to know MORE!

ಕೆಟ್ಟದ್ದನ್ನು ಕೇಳಬಾರದು,ಕೆಟ್ಟದ್ದನ್ನು ಮಾಡಬಾರದು,ಕೆಟ್ಟದ್ದನ್ನು ಮಾತಾಡಬಾರದು ಎಂಬುದು ಗೊತ್ತಿರುವ ವಿಷಯವೇ.ಮತ್ತೊಬ್ಬರಿಗೆ ಉಪದೇಶ ನೀಡುವ ಸಲುವಾಗಿ ನಾವು ತಪ್ಪಿರುವ ಹಾದಿ ತಿಳಿಯುತ್ತಿ ಲ್ಲ.ನಿರಾಳವಾಗಿ ಜೀವನ ಸಾಗಿಸುತ್ತಿದ್ದ ಜನರಿಗೆ ಕೋವಿಡ್ ಮಹಾಮಾರಿ ಮನೆಯೊಳಗೆ ಕಟ್ಟಿಹಾಕಿದೆ.ಇನ್ನೇನು ಮನೆಯಲ್ಲಿ ಹಾಯಾಗಿ ಜೇವನ ಸಾಗಿಸುತಿರುವಂತೆಯೆ ಯಾರೂ ಊಹಿಸದೆ ಬಂದೆರಗಿತು ತೌಖ್ತೆ ಚಂಡಮಾರುತ.

ಕರೋನದಿಂದ ಬಳಲುತ್ತಿರುವ ಜನರಿಗೆ ಅದರಿಂದ ಇನ್ನು ಮುಕ್ತಿ ದೊರಕಲಿಲ್ಲ. ಅದರ ನಡುವೆ ಇದೊಂದು ಚಂಡಮಾರುತ ಜನರಿಗೆ ಎಷ್ಟೋ ನಷ್ಟವನ್ನು ಉಂಟುಮಾಡಿತು. ಗಾಳಿ, ಮಳೆಗೆ ಎಷ್ಟೋ ಬೆಳೆಗಳು ನಾಶವಾದವು ಗಿಡ, ಮರಗಳಿಗೆ ಹಾನಿ ಉಂಟಾದವು. ಗಾಳಿ ಮಳೆಯಿಂದಾಗಿ ಎಷ್ಟೋ ಮನೆಗಳು, ಕಟ್ಟಡಗಳು ಬಿದ್ದು ನಾಶವಾದವು. ಪರಿಸರ ನಾಶದಿಂದಾಗಿ ಮತ್ತು ಪ್ರಾಣಿ, ಪಕ್ಷಿಗಳನ್ನು ಕೊಂದು ಹಿಂಸಿಸುವುದರಿಂದಾಗಿ ಚಂಡಮಾರುತಗಳು, ಕರೋನದಂತಹ ವೈರಸ್ ಗಳು ಬಂದವು. ಪರಿಸರ ನಾಶ ಮಾಡಿದ್ದರಿಂದ ಈಗ ಅದರ ಪರಿಣಾಮ ಬೀರುತ್ತಿದೆ. ಜನರು ಮರ, ಗಿಡ, ಪ್ರಾಣಿ, ಪಕ್ಷಿಗಳು ನಾಶಮಾಡಿದ್ದರಿಂದ ಈಗ ನಮ್ಮದೇ ಪ್ರಾಣ ಸಾವಿನ ಅಂಚಿನಲ್ಲಿದೆ..!

ಹೊಸ ಭಾಂದವ್ಯ ರೂಪಿಸುವ ಆಟ ಕ್ರಿಕೆಟ್

ಮಳೆಗಾಲದಲ್ಲಂತೂ ಮರ ಬೀಳುವುದು ,ವಿದ್ಯುತ್ ಕಂಬಗಳು ಬೀಳುವುದು ಸರ್ವೇಸಾಮಾನ್ಯ.ದಿನಾಲೂ ಫ್ಯಾನ್ ಹಾಕಿ ಹಾಯಾಗಿ ಮಲಗುತ್ತಿದ್ದ ಜನಕ್ಕೆ ಕರೆಂಟ್ ಹೋಯಿತೆಂದರೆ ಒಂದು ನಿಮಿಷವೂ ವ್ಯವಧಾನವಿರದೆ ,ಜೀವವನ್ನೇ ಪಣಕ್ಕಿಟ್ಟು ದುಡಿಯುವ ಲೈನ್ ಮ್ಯಾನ್ ಗಳಿಗೆ ಶಾಪ ಹಾಕುತ್ತಾರೆ.ಆದರೆ ಅವರ ಕಷ್ಟವನ್ನು ನಾವು ಅರ್ಥ ಮಾಡಿಕೊಳ್ಳಬೇಕಲ್ಲವೆ.ಮನೆಯಲ್ಲಿ ಕುಳಿತು ಟಿ.ವಿ ಸಿರಿಯಲ್ ನೋಡುವುದು, ಮೊಬೈಲ್ನಲ್ಲಿ ಸಾಮಾಜಿಕ ಜಾಲತಾಣವನ್ನು ನೋಡುತ್ತಿರುತ್ತೇವೆ. ಅದರೆ ಕರೆಂಟ್ ಹೋಯಿತೆಂದರೆ ನಾವು ಲೈನ್ ಮ್ಯಾನ್ ಗಳಿಗೆ ಶಾಪ ಹಾಕುತ್ತೇವೆ. ಆದರೆ ಅವರ ಕಷ್ಟ ಅರ್ಥಮಾಡಿಕೊಳ್ಳುವುದಿಲ್ಲ. ಅವರು ತನ್ನ ಪ್ರಾಣವನ್ನು ಒತ್ತೆಯಿಟ್ಟು ಮನೆ, ಮನೆಯವರನ್ನು ಬಿಟ್ಟು ಕೆಲಸ ಮಾಡುತ್ತಾರೆ. ಆದರೆ ಜನರು ಅವರಿಗೆ ಶಾಪ ಹಾಕುತ್ತಾ ಇರುತ್ತಾರೆ ಅವರ ಜಾಗದಲ್ಲಿ ನಾವು ನಿಂತು ಅವರ ಕಷ್ಟವನ್ನು ಅರ್ಥಮಾಡಬೇಕು ಅದನ್ನು ಅರಿಯದೆ ಬೈಯುವುದು ಶಾಪ ಹಾಕುತ್ತೇವೆ. ಮನುಷ್ಯರಾದ ಮೇಲೆ ನಮ್ಮ ಕಷ್ಟವನ್ನು ಮಾತ್ರ ಹೇಳಿಕೊಳ್ಳುವುದು ಅಲ್ಲ, ನಮ್ಮ ಕಷ್ಟ ಸುಖ ಬೇರೆಯವರ ಕಷ್ಟ ಸುಖವನ್ನು ಹಂಚಿಕೊಂಡು ಹೋಗಬೇಕು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಹಗಲು, ರಾತ್ರಿ, ಗಾಳಿ, ಮಳೆ ಯಾವುದನ್ನು ಲೆಕ್ಕಿಸದೆ ಅವರ ಪಾಡಿಗೆ ಅವರ ಕೆಲಸ ಮಾಡುತ್ತಾರೆ. ಮಧ್ಯರಾತ್ರಿ ಎಂದು ನೋಡದೆ ತನ್ನ ಕೆಲಸ ಮಾಡುತ್ತಾರೆ. ಕರೆಂಟ್ ಕಂಬಕ್ಕೆ ಹತ್ತಿ ಕೆಲಸ ಮಾಡುವಾಗ ಕರೆಂಟ್ ಶಾಕ್ ಹೊಡೆದು ಪ್ರಾಣ ಹೋದವರು ಇದ್ದಾರೆ, ಕರೆಂಟ್ ಕಂಬದಿಂದ ಕೈ ಜಾರಿ ಬಿದ್ದವರು ಕೂಡ ಇದ್ದಾರೆ. ಆದರೂ ಅವರು ತನ್ನ ವೃತ್ತಿಯನ್ನು ಬಿಡಲಿಲ್ಲ. ಎಷ್ಟೇ ಕಷ್ಟವಾದರೂ ಕೆಲಸವನ್ನು ಮಾಡುತ್ತಾ ಹೋಗುತ್ತಾರೆ. ಎಷ್ಟೇ ಕಷ್ಟವಾದರು ಲೈನ್ ಮ್ಯಾನ್ ಕೆಲಸ ಬಿಟ್ಟು ಬೇರೆ ಕೆಲಸ ಮಾಡುವವರ ಸಂಖ್ಯೆ ಕಡಿಮೆಯೇ. ಯಾರೊಬ್ಬರ ಕೆಲಸವನ್ನು ನೋಡಿ ನಾವು ಕೀಳಾಗಿ ಕಾಣಬಾರದು. ಗಡಿಯಲ್ಲಿ ತನ್ನ ಪ್ರಾಣವನ್ನು ಒತ್ತೆ ಇಟ್ಟು ನಮ್ಮ ದೇಶವನ್ನು ಕಾಯುತ್ತಿರುವ ಸೈನಿಕರ ಹಾಗೆಯೇ, ಲೈನ್ ಮ್ಯಾನ್ ಗಳು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕೆಲಸ ಮಾಡುತ್ತಾರೆ. ಇಂತಹ ಕೆಲಸ ಮಾಡುವವರು ಹಲವಾರು ಜನರು ಇದ್ದಾರೆ, ವೃತ್ತಿಗಳು ಇವೆ. ಅಂಥವರನ್ನು ಮತ್ತು ಅವರ ಕೆಲಸವನ್ನು ನೋಡಿ ನಾವು ಕೀಳಾಗಿ ಕಾಣಬಾರದು. ಅಂಥವರನ್ನು ನಾವು ಗೌರವಿಸಬೇಕು.

ರಕ್ಷಿತಾ ಕೆ ಕಟ್ಟತ್ತಿಲ ದಾರೆಪಡ್ಪು
ಮಂಗಳೂರು.

LEAVE A REPLY

Please enter your comment!
Please enter your name here