ಪರಿಸರ ಸಂರಕ್ಷಣೆ ನಮ್ಮ ಜವಾಬ್ದಾರಿ

0
424
Tap to know MORE!

ಭೂ ಮಂಡಲದ ಪ್ರತಿಯೊಂದು ಜೀವಿಗೂ ಶುದ್ಧ ಗಾಳಿ, ನೀರು ಬೇಕೆ ಬೇಕು.ಮಾನವ ತನ್ನ ಜೀವನದ ಶೇಕಡಾ 99% ಶುದ್ಧ ಪರಿಸರವನ್ನು ಅವಲಂಬಿಸಿರುತ್ತಾನೆ.ತನ್ನ ಮನದಿಚ್ಚೆ ಪೂರೈಸುವ ಸಲುವಾಗಿ ತನ್ನನ್ನು ಹೊತ್ತ ನೆಲಕ್ಕೆ ಪ್ರತಿ ಉಪಕಾರ ತೀರಿಸದೆ ಮೃಗೀಯ ವರ್ತನೆ ತೋರಿಸುತ್ತಾನೆ.ಹಾಗಾಗಿಯೇ ಇಂದು ಈ ಅವಸ್ಥೆ ಆಕ್ಸಿಜನ್ ಗಾಗಿ ಎಲ್ಲೆಲ್ಲೋ ಓಡಬೇಕಾಗಿದೆ.

ಪರಿಸರ ರಕ್ಷಣೆಯೊಂದಿಗೆ ನಮಗೆ ಪರಿಶುದ್ಧವಾದ ಆಮ್ಲಜನಕ ದೊರೆಯುತ್ತದೆ. ಪರಿಸರ ರಕ್ಷಣೆ ಮಾಡಿದರೆ ಶುದ್ಧವಾದ ನೀರು, ಗಾಳಿ, ಆಮ್ಲಜನಕ ಸಿಗುತ್ತದೆ. ಪರಿಸರ ನಾಶ ಮಾಡುವುದರಿಂದ ಅದರಿಂದ ಮಾನವರಿಗೆ ತುಂಬಾ ಹಾನಿ ಉಂಟು ಮಾಡುತ್ತದೆ . ಆದರೆ ಈ ನಮ್ಮ ಜನರಿಗೆ ಯಾವುದು ಅರಿವಾಗುವುದಿಲ್ಲ. ಜನರು ತಮ್ಮ ಅಗತ್ಯಕೋಸ್ಕರ ಮರ, ಗಿಡಗಳನ್ನು ಕಡಿದು ಕಟ್ಟಿಗೆ ಮಾಡುತ್ತಾರೆ. ಪ್ರಾಣಿಗಳು ಕಾಡಿನಲ್ಲಿ ವಾಸಿಸುತ್ತವೆ ಗಿಡ, ಮರಗಳನ್ನು ಕಡಿದಾಗ ಪ್ರಾಣಿಗಳು ಕಾಡಿನಿಂದ ನಾಡಿಗೆ ಬಂದು ನಾಡಿನ ಪರಿಸ್ಥಿತಿಯನ್ನು ಹಾಳುಮಾಡುತ್ತದೆ. ನಾವು ಕಾಡನ್ನು ನಾಶ ಮಾಡಿದರೆ ಮುಂದೊಂದು ದಿನ ಅದರ ಬೆಲೆ ಏನು ಎಂದು ಅದು ನಮಗೆ ತಿಳಿಸಿಕೊಡುತ್ತದೆ. ನಾವು ಕಾಡನ್ನು ನಾಶಮಾಡುವುದರಿಂದ ಮಳೆ ಬಾರದೆ ನೀರಿನ ಅಭಾವ ಉಂಟಾಗುತ್ತದೆ. ಹೀಗೆ ‘ಮನೆಗೊಂದು ಮರ ಊರಿಗೊಂದು ವನ ‘ ಎಂಬ ಗಾದೆಯಂತೆ ನಾವು ಇನ್ನು ಮುಂದಿನ ದಿನಗಳಲ್ಲಿ ನಡೆದುಕೊಳ್ಳಬೇಕು. ನೀರಿಲ್ಲದೆ ಪ್ರಾಣಿ, ಪಕ್ಷಿಗಳು, ಗಿಡ, ಮರಗಳು, ಮನುಷ್ಯರು, ಎಲ್ಲರೂ ಸವಿಗಿಡಾಗುತ್ತದೆ.

ನನ್ನದೊಂದು ಆಶಯ…

ನಮ್ಮ ಮನೆಯ ಅಂಗಳದಲ್ಲಿ ಇಂಟೆರ್ ಲಾಕ್, ಕಾಂಕ್ರೀಟ್, ಹಾಕಿಸುವ ಕೆಲಸ ಮಾಡಿಸುವ ಬದಲು ಗಿಡವನ್ನು ಬೆಳೆಸುವುದು ಉತ್ತಮ. ಏಕೆಂದರೆ ಇಂಟೆರ್ ಲಾಕ್ ಹಾಕುವುದರಿಂದ ನೀರು ಇಂಗುವ ಸಾಮರ್ಥ್ಯ ಕಡಿಮೆಯಾಗಿ, ಅಂತರ್ಜಲಮಟ್ಟ ಕುಸಿಯುತ್ತದೆ. ಮತ್ತು ನಮ್ಮ ಮನೆಯ ಸಮೀಪ ಬಾವಿ ಕೆಲಸ ಮಾಡಿಸುವಾಗ ನೀರು ಸಿಗಬೇಕಾದರೆ ಬಾವಿಯನ್ನು ಆಳವಾಗಿಸಬೇಕಾಗುತ್ತದೆ. ಆದ್ದರಿಂದ ನಾವು ನಮ್ಮ ಮನೆಯ ಅಂಗಳದಲ್ಲಿ ಗಿಡವನ್ನು ನೆಡಬೇಕು ಇದರಿಂದ ಒಳ್ಳೆಯ ಆಮ್ಲಜನಕ ದೊರೆಯುತ್ತದೆ. ಹಾಗೂ ನೀರು ಸರಿಯಾಗಿ ಭೂಮಿಗೆ ಇಂಗಿ ಹೋಗುತ್ತದೆ. ನಮ್ಮ ಮನೆಯ ಸುತ್ತಮತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕಾದರೆ ಕಸ, ಕಡ್ಡಿಗಳನ್ನು ಹೆಕ್ಕಿ ಸ್ವಚ್ಛಮಾಡಿ ಅಂಗಡಿಯಿಂದ ತರುವ ಪ್ಲಾಸ್ಟಿಕ್ ಚೀಲಗಳನ್ನು ಸಂಗ್ರಹಿಸಿಟ್ಟು ನಮ್ಮ ನಮ್ಮ ಗ್ರಾಮ ಪಂಚಾಯಿತಿಗೆ ಕೊಡಬೇಕು. ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಬಿಸಾಡುವುದರಿಂದ ಅದನ್ನು ಪ್ರಾಣಿಗಳು ತಿಂದು ಪ್ರಾಣಿಗಳು ಸಾವಿಗಿಡಾಗುತ್ತದೆ. ಮತ್ತು ಮಣ್ಣಿನಲ್ಲಿ ಸೇರಿಕೊಂಡು ಮಣ್ಣನ್ನು ಮಲಿನ ಮಾಡುತ್ತದೆ ಇದನ್ನು ಬೆಂಕಿಗೆ ಹಾಕಿದರೆ ಇದರ ಹೊಗೆಯೊಂದಿಗೆ ಸೇರಿ ನಮ್ಮ ಸುತ್ತಲಿನ ಉತ್ತಮ ಗಾಳಿಯನ್ನು ಮಲೀನ ಮಾಡಿ ನಾವು ಉಸಿರಾಡುವ ಗಾಳಿಯ ಮೂಲಕ ನಮ್ಮ ದೇಹದ ಮೂಲಕ ನಮ್ಮ ಶ್ವಾಸಕೋಶವನ್ನು ಪ್ರವೇಶಿಸಿ ನಮಗೆ ಕಾಯಿಲೆಯನ್ನು ಉಂಟುಮಾಡುತ್ತದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ನೀರಿಗೆ ಎಸೆದರೆ ಅದನ್ನು ಜಲಚರಗಳು ಅವು ಹಾನಿಗೀಡಾಗುತ್ತದೆ. ಮತ್ತು ನೀರು ಮಲೀನವಾಗುತ್ತದೆ. ಆದ್ದರಿಂದ ನಾವು ಪ್ಲಾಸ್ಟಿಕ್ ನ್ನು ಎಲ್ಲೆಂದರಲ್ಲಿ ಎಸೆಯಬಾರದು ಅದನ್ನು ಸಂಗ್ರಹಿಸಿ ಇಡಬೇಕು. ಇತ್ತೀಚಿನ ದಿನಗಳಲ್ಲಿ ವಾಹನಗಳ ಪ್ರಮಾಣ (ಸಂಖ್ಯೆ ) ಹೆಚ್ಚಾಗಿರುವುದರಿಂದ ಅದರಿಂದ ಬರುವ ಹೊಗೆ ಗಾಳಿಯನ್ನು ಮಲಿನಗೋಳಿಸುತ್ತದೆ. ಇದರಿಂದ ಪರಿಸರ ಮಲಿನವಾಗುತ್ತದೆ. ಇದಲ್ಲದೆ ಫ್ರಿಜ್, ರೆಫರಿಜರೇಟರ್ ಮುಂತಾದ ಉಪಕಾರಣಗಳನ್ನು ಬಳಕೆ ಮಾಡುವುದರಿಂದ ಪರಿಸರ ನಾಶವನ್ನು ಕಡಿಮೆ ಮಾಡಿ ಗಿಡ, ಮರಗಳನ್ನು ಬೆಳೆಸುವುದು ಮತ್ತು ಪರಿಸರ ರಕ್ಷಣೆ ನಮ್ಮ ಹೊಣೆ. ಕಾಡನ್ನು ಬೆಳೆಸಿ ನಾಡನ್ನು ಉಳಿಸಿ.

ರಕ್ಷಿತಾ ಕೆ ಕಟ್ಟತ್ತಿಲ ದಾರೆಪಡ್ಪು
ರಥಬೀಧಿ ಮಂಗಳೂರು

LEAVE A REPLY

Please enter your comment!
Please enter your name here