World Hunger Day| “ಹಣದ ಹಸಿವಿಗಿಂತ, ಜ್ಞಾನದ ಹಸಿವು ಹೆಚ್ಚಾಗಲಿ”

0
69
Tap to know MORE!

ಜಗತ್ತಿನಾದ್ಯಂತ, ಪ್ರತೀ ದಿನ ಒಂದೊಂದು ದಿನವನ್ನು ನಾಮಾಂಕಿತವಾಗಿ ಆಚರಣೆ ಮಾಡುತ್ತಾರೆ. ಕೆಲವೊಂದು ದಿನಗಳು ಮಾತ್ರ ಬಹಳ ಅರ್ಥಪೂರ್ಣವೂ ಆಗಿರುತ್ತದೆ. ಆದರೆ ಈ ನಗುವಿನ ದಿನ, ಅಳುವಿನ ದಿನ, ಇನ್ನೂ ಯಾವ್ಯಾವುದೋ ದಿನಗಳನ್ನು ಯಾವ ಆಧಾರದ ಮೇಲೆ ಆಚರಣೆ ಮಾಡುತ್ತಾರೋ ನನಗಿನ್ನು ತಿಳಿದಿಲ್ಲ. ಅದೇನೇ ಇರಲಿ ಇವತ್ತು ” ಹಸಿವಿನ ದಿನ” ಎಂದು ಬರೆದಿರುವುದನ್ನು ಎಲ್ಲೋ ಗಮನಿಸಿದೆ.

ಈ ದಿನವೂ ಇದೆಯೇ ? ಇದು ಹೇಗೆ ಹುಟ್ಟಿಕೊಂಡಿತು, ಆಧಾರಗಳೇನು ಮುಂತಾದ ಅನೇಕ ವಿಮರ್ಶಾ ಭಾವಗಳು ತಲೆಯಲ್ಲಾಡಿದರೂ ಸೂಕ್ತ ಉತ್ತರ ಎಲ್ಲೂ ಸಿಗಲೇ ಇಲ್ಲ. ಆದರೂ ” ದಿನ” ಅನ್ನುವುದಕ್ಕಿಂತಲೂ ಹಸಿವ ಬಗ್ಗೆ ಏನಾದರೂ ಗೀಚಬೇಕೆಂಬ ಆಸೆಯಾಯಿತು.

ರೋಗಗಳದ್ದೇ ಕಾರುಬಾರು….!

ಎಲ್ಲರೂ ದುಡಿಯುವುದು ಊಟಕ್ಕಾಗಿಯೇ ಅಲ್ಲವೇ…? ಹುಟ್ಟಿ ಬೆಳೆದ ಪ್ರತೀ ಮನುಷ್ಯನಿಗೂ ಈ ಹಸಿವ ಅನುಭವ ಖಂಡಿತವಾಗಿಯೂ ಆಗಿರುತ್ತದೆ. ಈ ಅನುಭವ ಹೇಗೆಂದರೆ ಇದರ ನೀಗಿಸುವಿಕೆಗಾಗಿ ನಾವು ಏನು ಮಾಡಲೂ ಸಿದ್ಧ ಎನ್ನುವಷ್ಟರ ಮಟ್ಟಿಗೆ ನಮ್ಮನ್ನು ಕರೆದೊಯ್ಯುತ್ತದೆ. ಹಸಿದವನಿಗೆ ಊಟ ಕೊಟ್ಟರೆ ಅದು ಆತನಿಗೆ ಸ್ವರ್ಗ ಸಂದ ಫಲ, ನಮಗೆ ಆತ್ಮತೃಪ್ತಿಯಾದ ಭಾವ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಜಗತ್ತು ಕೊರೋನಾದಿಂದ ತತ್ತರಿಸಿ ಹೋಯಿತು. ಜನರು ಆಹಾರವಿಲ್ಲದೆ ಕಕ್ಕಾಬಿಕ್ಕಿಯಾದರು. ಬಹುಶಃ ಹಸಿವು ಎಲ್ಲ ಪಾಠವನ್ನು ಕಲಿಸುತ್ತದೆ ಎಂಬಂಶ ಸತ್ಯ ಅಲ್ವಾ…?

” ಹಸಿವು” ಎಂಬ ಪದಕ್ಕೆ ಅರ್ಥ ಕೊಡುವುದು ಹಸಿದವನು ಹಸಿದಾಗಲೇ. ಅದಕ್ಕೆ ದಿನವೆಂದಿಲ್ಲ, ಹೊಂದಾಣಿಕೆ ಅನ್ನೋದು ಇಲ್ವೇ ಇಲ್ಲ. ಹಸಿವು ನಿಲ್ಲುವುದು ನಾವು ಸತ್ತಾಗ ಮಾತ್ರ. ಆದರೆ ಇನ್ನಾದರೂ ಮನುಷ್ಯ ಹಣದ ಹಸಿವನ್ನು ನಿಯಂತ್ರಿಸಿಕೊಳ್ಳಲೇಬೇಕು. ಜ್ಞಾನದ ಹಸಿವು ಮತ್ತೆ ಮತ್ತೆ ಅನುಭವ ನೀಡುತ್ತಲೇ ಇರಬೇಕು. ಏನಂತೀರಾ…?

ಅರ್ಪಿತಾ ಕುಂದರ್

LEAVE A REPLY

Please enter your comment!
Please enter your name here