ವಿಧಿ 370 J, 371 J ಮತ್ತು ಕಲ್ಯಾಣ ಕರ್ನಾಟಕ

0
297
Tap to know MORE!

ಆರ್ಟಿಕಲ್ ೩೭೦ ಜೆ ಬಂದ ನಂತರ ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಕರೆಯಲಾಗುತ್ತಿದೆ. ಆರ್ಟಿಕಲ್ ೩೭೦ ಜೆ ಬಂದ ನಂತರ ಕಲ್ಯಾಣ ಕರ್ನಾಟಕದಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳು ಆಗಿವೆ. ಅಲ್ಲಿಯ ಜನರಿಗೆ ಸ್ವಾತಂತ್ರ್ಯ, ಸಮಾನತೆ, ಉದ್ಯೋಗದಲ್ಲಿ ಮೀಸಲಾತಿ, ನೇಮಕಾತಿಯಲ್ಲಿ ಮೀಸಲಾತಿ ಹಾಗೂ ಜನನ, ಮರಣ, ಸ್ವಗ್ರಾಮ ಪ್ರಮಾಣಪತ್ರ, ಸಿಂಧುತ್ವ ಪ್ರಮಾಣ ಪತ್ರ, ವ್ಯಾಸಂಗ ಪ್ರಮಾಣ ಪತ್ರ ಹೀಗೆ ತಾವು ಇರುವುದಕ್ಕೆ ನಿಖರ ದಾಖಲೆಗಳು ಕೆಲವೊಂದು ಸವಾಲತ್ತುಗಳು ಆ ಭಾಗದ ಜನರಿಗೆಲ್ಲ ಕಲ್ಯಾಣ ಕರ್ನಾಟಕದ ಹೆಸರಲ್ಲಿ ದೊರಕಿದೆ.

ಈ ಕಲ್ಯಾಣ ಕರ್ನಾಟಕದ ಪ್ರಾರಂಭಕ್ಕೆ ಮುನ್ನುಡಿಯಂತೆ ಪ್ರಣವ್ ಮುಖರ್ಜಿ ಸಹಿ ಹಾಕಿ ಅಸ್ತಿತ್ವಕ್ಕೆ ಬಂದಿರುವ `ಸಂವಿಧಾನ (98ನೇ ತಿದ್ದುಪಡಿ) ಮಸೂದೆ- 2012′ ಅನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಇದರೊಂದಿಗೆ ಹೊಸ ತಿದ್ದುಪಡಿ ಕಾಯ್ದೆ ಅನುಷ್ಠಾನ ಈಗ ರಾಜ್ಯ ಸರ್ಕಾರದ ಹೆಗಲಿಗೆ ವರ್ಗಾವಣೆಯಾಗಿದೆ. ಹೊಸ ಕಾಯ್ದೆ ಆರು ಜಿಲ್ಲೆಗಳ ಅಭಿವೃದ್ಧಿಗೆ `ಪ್ರತ್ಯೇಕ ಮಂಡಳಿ’ ರಚನೆಗೆ ಅವಕಾಶ ನೀಡಿದೆ. ರಾಜ್ಯ ಸರ್ಕಾರ ರಾಜ್ಯಪಾಲರ ನೇತೃತ್ವದಲ್ಲಿ `ಅಭಿವೃದ್ಧಿ ಮಂಡಳಿ’ ರಚಿಸಬೇಕು. ಒಟ್ಟಾರೆ ಸಂಪನ್ಮೂಲ ಗಮನದಲ್ಲಿಟ್ಟುಕೊಂಡು ಮಂಡಳಿಗೆ ಪ್ರತ್ಯೇಕ ಅನುದಾನ ನಿಗದಿಪಡಿಸಬೇಕು. ಮಂಡಳಿ ಕಾರ್ಯವೈಖರಿ ಸಂಬಂಧಿಸಿದ ವರದಿಯನ್ನು ಪ್ರತಿವರ್ಷ ವಿಧಾನಸಭೆಯಲ್ಲಿ ಮಂಡಿಸಬೇಕು.

ವಿಶ್ವ ಮ್ಯೂಸಿಯಂ ದಿನಾಚರಣೆ: ಮಹತ್ವ ಮತ್ತು ಇತಿಹಾಸ

ಅಲ್ಲದೆ, ಈ ಜಿಲ್ಲೆಗಳ ಜನರಿಗೆ ಶಿಕ್ಷಣ, ವೃತ್ತಿಪರ ಶಿಕ್ಷಣದಲ್ಲಿ ಸ್ಥಳೀಯ ಶಾಲಾ- ಕಾಲೇಜು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಸೌಲಭ್ಯ ಒದಗಿಸಲು ಕಾಯ್ದೆ ಅವಕಾಶ ನೀಡಿದೆ. ಸರ್ಕಾರಿ ಮತ್ತು ಸರ್ಕಾರದ ನಿಯಂತ್ರಣದಲ್ಲಿರುವ ಸಂಸ್ಥೆಗಳ ಉದ್ಯೋಗದಲ್ಲಿ ಮೀಸಲಾತಿ ದೊರೆಯಲಿದೆ. ಆದರೆ, ಯಾವ ಪ್ರಮಾಣದಲ್ಲಿ ಮತ್ತು ಯಾವ ದರ್ಜೆವರೆಗೆ ಮೀಸಲಾತಿ ನೀಡಬೇಕೆಂದು ರಾಜ್ಯ ಸರ್ಕಾರ ತೀರ್ಮಾನಿಸಬೇಕು. ಇದಕ್ಕಾಗಿ ಪ್ರತ್ಯೇಕ ನೇಮಕಾತಿ ನಿಯಮಾವಳಿ ರೂಪಿಸಬೇಕಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಅನುದಾನ ನಿಗದಿ ಮತ್ತು ನೇಮಕಾತಿ ನಿಯಮ ರೂಪಿಸಲು ಅಗತ್ಯವಾದರೆ ಸರ್ಕಾರ `ಪರಿಣಿತರ ಸಮಿತಿ’ ರಚಿಸಬಹುದು ಅಥವಾ ನೇರವಾಗಿ ತೀರ್ಮಾನ ಮಾಡಬಹುದು. ಕಾಯ್ದೆಯಡಿ ರೂಪಿಸಿದ ನಿಯಮಗಳನ್ನು ವಿಧಾನಮಂಡಲದಲ್ಲಿ ಮಂಡಿಸಬಹುದು ಅಥವಾ `ಅಧಿಕೃತ ಆದೇಶ’ದ ಮೂಲಕ ಜಾರಿಗೆ ಕೊಡಬಹುದಾಗಿದೆ ಎಂದು ಉನ್ನತ ಮೂಲಗಳು ತಿಳಿಸುತ್ತವೆ. ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ 371 (ಜೆ) ಮಸೂದೆಗೆ ಸರ್ವಾನುಮತದ ಅಂಗೀಕಾರ ನೀಡಿತ್ತು. ಅನಂತರ ಮಸೂದೆ ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಹೋಗಿತ್ತು. ಪ್ರಣವ್ ಮುಖರ್ಜಿ ವಿಳಂಬ ಮಾಡದೆ ಕೆಲವೇ ದಿನಗಳಲ್ಲಿ ಮಸೂದೆಗೆ ಒಪ್ಪಿಗೆ ನೀಡಿದ್ದಾರೆ. ಜನವರಿ ಒಂದರಂದು ಮಸೂದೆಗೆ ಸಹಿ ಹಾಕಿದ್ದಾರೆ. ಎರಡರಂದು ಕೇಂದ್ರ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ರಾಜ್ಯಮಟ್ಟದ ಸಂಸ್ಥೆ ಅಥವಾ ಕಛೇರಿಗಳಲ್ಲಿ ಕಲ್ಯಾಣ-ಕರ್ನಾಟಕದ ಜನರಿಗೆ ಶೇ.8ರಷ್ಟು ಹುದ್ದೆಗಳನ್ನು ಮೀಸಲಿಡಲು ರಾಜ್ಯಪಾಲರು ಕೂಡ ಸಮ್ಮತಿ ಸೂಚಿಸಿದ್ದಾರೆ. ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಈ ಪ್ರದೇಶದ ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು ಪ್ರತಿನಿಧಿಸುವ ಎಂಟು ಶೇಕಡಾ ಮೀಸಲಾತಿಯನ್ನು ಒದಗಿಸಲಾಗಿದೆ. ಹೀಗಾಗಿ, ಹೈ-ಕ ಪ್ರದೇಶದ ಹೊರಗಿನವರಿಗೂ ಅಂದರೆ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ರಾಜ್ಯ ಮಟ್ಟದ ಕಚೇರಿಗಳಲ್ಲಿ ಮೀಸಲಾತಿಯನ್ನು ಒದಗಿಸಲಾಗುವುದು. ಆದೇಶದ 13 ನೇ ಪ್ಯಾರಾಗ್ರಾಫ್‌ನಲ್ಲಿ ಮೀಸಲಾತಿ ನೀಡುವ ಮೂಲಕ ರಾಜ್ಯಪಾಲರು ಅಧಿಕಾರ ಚಲಾಯಿಸುವುದನ್ನು ಸಂವಿಧಾನದ 371 ಜೆ ವಿಧಿ ಸಂಪೂರ್ಣವಾಗಿ ಮತ್ತು ಕಾನೂನುಬದ್ಧವಾಗಿ ಬೆಂಬಲಿಸುತ್ತದೆ.

ಕಲ್ಯಾಣ-ಕರ್ನಾಟಕ ಪ್ರದೇಶವಾಗಿರುವ ಕಲ್ಬುರ್ಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗೀರಿ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡಿದೆ. 118 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ 2012 ರಲ್ಲಿ ಸಂವಿಧಾನದಲ್ಲಿ 371 ಜೆ ವಿಧಿಯನ್ನು ಸೇರಿಸಲಾಯಿತು. ಇದರ ಆಧಾರದ ಮೇಲೆ 2013 ರಲ್ಲಿ ರಾಜ್ಯಪಾಲರು ಕಲ್ಯಾಣ-ಕರ್ನಾಟಕ ಪ್ರದೇಶದ ವ್ಯಕ್ತಿಗಳಿಗೆ ರಾಜ್ಯಮಟ್ಟದ ಕಚೇರಿಗಳು ಮತ್ತು ಸಂಸ್ಥೆಗಳಲ್ಲಿ ಮೀಸಲಾತಿ ನೀಡುವಂತೆ ಆದೇಶ ಹೊರಡಿಸಿದ್ದಾರೆ.

ಆರ್ಟಿಕಲ್ 371-ಜೆ ಕಲ್ಯಾಣ-ಕರ್ನಾಟಕ ಪ್ರದೇಶ ಮಾತ್ರವಲ್ಲ ಕರ್ನಾಟಕದಾದ್ಯಂತ ಉದ್ಯೋಗಗಳಿಗೆ ಅನ್ವಯವಾಗಿದೆ. ಈ ಆರ್ಟಿಕಲ್ ೩೭೦ ಜೆ ಜಾರಿ ಗೊಳಿಸಿದರಿಂದ ಲಕ್ಷಾಂತರ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಲ್ಯಾಣ ಕರ್ನಾಟಕದ ಹೆಸರಲ್ಲಿ ಒಂದೊಳ್ಳೆಯ ಕೆಲಸ ಆಗಿದೆ ಇದರಿಂದ ಹಲವರು ಉಪಯೋಗ ಪಡುವಂತಾಯಿತು.

ಕು.ಕಾವ್ಯ ಸಾಮಾನಿ (ಮಲಾರ ಬೀಡು)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

LEAVE A REPLY

Please enter your comment!
Please enter your name here