ಹಳೆಯಂಗಡಿಯಲ್ಲಿ ಸಸಿ ನೆಡುವ – ವಿತರಿಸುವ ಪರಿಸರ ಜಾಗೃತಿ ಕಾರ್ಯಕ್ರಮ

0
134
Tap to know MORE!

ಹಳೆಯಂಗಡಿ: ಯುವ ಕಾರ್ಯ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ಗ್ರಾಮ ಪಂಚಾಯತ್ ಹಳೆಯಂಗಡಿ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ ಮತ್ತು ಇದರ ಜಂಟಿ ಆಶ್ರಯದಲ್ಲಿ ಮಾತಾ ಅಮೃತಾನಂದಮಯಿ ಮಠ, ಬೋಳೂರು ಮಂಗಳೂರು, ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್ (ರಿ), ಸುವರ್ಣ ಮಹೋತ್ಸವ ಸಮಿತಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ), ಜಿಲ್ಲಾ ಪ್ರಶಸ್ತಿ ವಿಜೇತ ಯುವತಿ ಮತ್ತು ಮಹಿಳಾ ಮಂಡಲ (ರಿ) ಹಳೆಯಂಗಡಿ ಇದರ ಸಹಕಾರದಲ್ಲಿ “ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ” “ಸಸಿ ನೆಡುವ ಕಾರ್ಯಕ್ರಮ, ಸಸಿ ವಿತರಣೆ, ವ್ಯಕ್ಷ ಸಂರಕ್ಷಣೆ, ಪರಿಸರ ಜಾಗೃತಿ ಕಾರ್ಯಕ್ರಮವ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕದಿಕೆ – ಸಸಿಹಿತ್ಲು ಸೇತುವೆ ಬಳಿ ಸಸಿ ನೆಟ್ಟು ವಿತರಿಸುವ ಮೂಲಕ ಚಾಲನೆ ನೀಡಲಾಯಿತು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ವಿನೋದ್ ಕುಮಾರ್ ಬೊಳ್ಳೂರು, ಗ್ರಾಮ ಪಂಚಾಯತ್ ಹಳೆಯಂಗಡಿ ಇದರ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ, ಉಪಾಧ್ಯಕ್ಷರಾದ ಶ್ರೀ ಅಶೋಕ್ ಬಂಗೇರ ಸಸಿಹಿತ್ಲು, ಗ್ರಾಮ ಪಂಚಾಯತ್ ಹಳೆಯಂಗಡಿ ಇದರ ಪಂಚಾಯತ್ ಕಾರ್ಯದರ್ಶಿ ಶ್ರೀ ಶ್ರೀಶೈಲ ಗಿಡ ನೆಟ್ಟು ಹಾಗೂ ಗಿಡ ವಿತರಿಸುವ ಮೂಲಕ ಚಾಲನೆ ನೀಡಿದರು.

ಹಳೆಯಂಗಡಿ: “ಬದಲಾದ ಸಮಾಜದಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆ ಹಾಗೂ ಪೋಷಕರ ಪಾತ್ರ” ಮಾಹಿತಿ ಕಾರ್ಯಕ್ರಮ

ರಸ್ತೆಯ ಇಕ್ಕೆಲಗಳಲ್ಲಿ ಸಸಿ ನೆಡಲಾಯಿತು ಮತ್ತು ಕಳೆದ ವರ್ಷ ನೆಟ್ಟಿರುವ ಗಿಡಗಳನ್ನು ಪೂರೈಕೆ ಮಾಡಲಾಯಿತು. ಸಂಸ್ಥೆಯ ಸದಸ್ಯರುಗಳಿಗೆ ಸಸಿ ವಿತರಿಸಲಾಯಿತು ಹಾಗೂ ಸದಸ್ಯರು ಈ ಗಿಡಗಳನ್ನು ತಮ್ಮ ತಮ್ಮ ಮನೆಯ ಹಿತ್ತಲಿನಲ್ಲಿ ನೆಡಲು ಪ್ರೇರೇಪಿಸಲಾಯಿತು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ವಿನೋದ್ ಕುಮಾರ್ ಕೊಳುವೈಲು, ಶ್ರೀ ನಾಗರಾಜ ಪೂಜಾರಿ, ಶ್ರೀಮತಿ ಚಂದ್ರಿಕಾ ಪ್ರವೀಣ್, ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್, ಉಪಾಧ್ಯಕ್ಷರಾದ ಶ್ರೀ ನಾಗೇಶ್ ಟಿ.ಜಿ, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯದ್ಯಕ್ಷರದ ಶ್ರೀ ಸುಧಾಕರ ಆರ್ ಅಮೀನ್, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಅಶ್ರಫ್, ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್, ಪ್ರದಾನ ಕಾರ್ಯದರ್ಶಿ ಕುಮಾರಿ ರಕ್ಷಿತಾ, ಯುವಕ ಮಂಡಲದ ಸದಸ್ಯರುಗಳಾದ ಶ್ರೀ ರಾಮಚಂದ್ರ ಶೆಣೈ, ಶ್ರೀ ಹಿಮಕರ ಕದಿಕೆ, ಶ್ರೀ ನಾರಾಯಣ ರಾವ್, ಶ್ರೀ ತಾರಾನಾಥ ಕೊಳುವೈಲು, ಶ್ರೀ ಮೋಹನ್ ಬಂಗೇರ, ಶ್ರೀ ಯೋಗೀಶ್ ಪಾವಂಜೆ, ಶ್ರೀ ನಿಶಾಂತ್ ಕೊಪ್ಪಲ, ಶ್ರೀ ಹಿತೇಶ್ ಕುಮಾರ್, ಶ್ರೀ ರಾಜಿಕ್ ಗೋಳಿದಡಿ, ಶ್ರೀ ಸುಹಾಸ್ ಗೋಳಿದಡಿ, ಶ್ರೀ ಸಾತ್ವಿಕ್ ಗೋಳಿದಡಿ, ಶ್ರೀ ಯತೀಶ್ ಕೊಪ್ಪಳ, ಮಹಿಳಾ ಮಂಡಲದ ಹಿರಿಯ ಸದಸ್ಯರಾದ ಶ್ರೀಮತಿ ನ್ಯಾನ್ಸಿ ಕರ್ಕಡ, ಶ್ರೀಮತಿ ನೇಫಿಸಾ ಹಂಝ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here