ಅಂತ್ಯವಿರದ ಉಡುಗೊರೆಯೇ ನಿಜವಾದ ಗೆಳೆತನ

0
128
Tap to know MORE!

ಕಾಲೇಜಿನ ದಿನಗಳಲ್ಲಂತೂ ಮೊದಲ ದಿನ ಕಾಲೇಜಿನ ಮೆಟ್ಟಿಲು ಹತ್ತುವಾಗ ಹೊಸ ಭರವಸೆ ,ಚೈತನ್ಯ, ಉತ್ಸಾಹ ತುಂಬಿರುತ್ತದೆ. ಅದರಲ್ಲೂ ಮೊದಲ ದಿನ ಕ್ಲಾಸ್‌ಗೆ ಹೋದಾಗ ಅಂಜಿಕೆ , ಭಯ ಇರುತ್ತೆ. ಅರೇ ಇವಳೇನು ಹೇಳ್ತಿದಾಳೆಂದು ಅನ್ಕೊಂಡ್ರಾ, ಹೇಳ್ತಿನಿ ಓದಿ.

ಕಾಲೇಜು ದಿನಗಳಲ್ಲಿ ಹೊಸ ಮುಖಗಳ ಪರಿಚಯ ದಿನಗಳು ಹೋದಂತೆ ಹೆಗಲ ಮೇಲೆ ಕೈ ಹಾಕುವ ಸಂಬಂಧವೇ ನಮ್ಮ ಈ ಗೆಳೆತನ. ನಾವು ಮನೆಯವರ ಜತೆ ಕಳೆಯುವ ಕ್ಷಣಗಳಿಗಿಂತ ಹೆಚ್ಚು ಗೆಳೆಯರ ಜತೆ ಕಳೆಯುತ್ತೇವೆ. ನಮ್ಮ ಭಾವನೆಗಳನ್ನು ಅರ್ಥ ಮಾಡುವ ಗೆಳೆಯರು ಕೆಲವರು. ಜೀವನದಲ್ಲಾಗುವ ಸಿಹಿ ಕಹಿ ಅನುಭವಗಳನ್ನು ತಂದೆ ತಾಯೊಂದಿಗೆ ಹೇಳುತ್ತೇವೆಯೋ ಗೊತ್ತಿಲ್ಲ, ಆದರೆ ನಮ್ಮ ಸ್ನೇಹಿತರಲ್ಲಿ ಚಾಚು ತಪ್ಪದೆ ಹೇಳುತ್ತೇವೆ.

ಸಣ್ಣಪುಟ್ಟ ಜಗಳ, ಸಿಕ್ಕಾಪಟ್ಟೆ ಪ್ರೀತಿ – ಇದು ಅಣ್ಣ ತಂಗಿ ಸಂಬಂಧದ ಸಾರ!

ಕೆಲವು ಸ್ನೇಹಿತರಂತೂ ನಮ್ಮ ಕಷ್ಟಗಳನ್ನು ಅವರ ಕಷ್ಟ ಎಂದು ಭಾವಿಸಿ ಅದಕ್ಕೆ ಸ್ಪಂದಿಸುತ್ತಾರೆ.ಈ ಗೆಳೆತನದಲ್ಲಿ ಜಾತಿ,ಧರ್ಮ, ಸಿರಿವಂತ ಬಡವ ಎಂಬ ಬೇಧ ಭಾವ ಇರುವುದಿಲ್ಲ‌. ನಾವೆಲ್ಲ ಒಬ್ಬರಿಗೊಬ್ಬರು ಹಂಚುತ್ತಾ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತೇವೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಇನ್ನು ಮರೆಯಲಾಗದಂತಹ ಹಲವು ಸಿಹಿ ನೆನಪುಗಳಿವೆ  ರಜಾ ದಿನದಲ್ಲಿ ತಿರುಗಾಡಲು ಹೋದ ಅದ್ಭುತ ಕ್ಷಣಗಳನ್ನಂತೂ ಮರೆಯಲು ಸಾಧ್ಯವಿಲ್ಲ.

ಉಪ್ಪಿನಂತೆ ಕಟು ಮಾತು ಹೇಳುವವನು ನಿಜವಾದ ಸ್ನೇಹಿತ.
ನಮ್ಮ ಈ ಗೆಳೆಯರಲ್ಲಿ ಯಾರಾದರು ತಪ್ಪು ಮಾಡಿದರೆ ನೀನು ತಪ್ಪು ಮಾಡಿದ್ದೀಯ ಎಂದು ನೇರವಾಗಿ ಹೇಳಬೇಕು. ಆಗ ಮಾತ್ರ ಒಬ್ಬ ನಿಜವಾದ ಸ್ನೇಹಿತನಾಗಲು ಸಾಧ್ಯ.

ಪ್ರತೀ ಕ್ಷಣ ಉತ್ಸಾಹದಿಂದ ಇರುವ ಅನುಬಂಧವಿದು .ಒಬ್ಬರ ಕೈ ಇನ್ನೊಬ್ಬರು ಜೊಡಿಸಿ ನಿಂತರೆ ಸಾಕು ಇಡೀ ಜಗತ್ತನ್ನೇ ಭೇಧಿಸುವ ಬಂಧವಿದು. ಆದಿಯೊಂದೇ; ಅಂತ್ಯವಿರದ ಉಡುಗೊರೆಯಿದು. ನಮ್ಮ ಈ ಗೆಳೆಯರ ಅನುಭಂದ ಸಾಗರದಷ್ಟು ಮುಗಿಯದ ಅಮರ ನೆನಪುಗಳು ಸದಾ ನಮ್ಮ ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ನೆನಪಾಗುತ್ತಿರುತ್ತದೆ.

ಪವಿತ್ರ
ಆಳ್ವಾಸ್ ಕಾಲೇಜು ಮೂಡುಬಿದಿರೆ

LEAVE A REPLY

Please enter your comment!
Please enter your name here