ತೋಕೂರು: ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಗೋಡೆ ಬರಹ ಮೂಲಕ ಕೊರೋನಾ ಮಾಹಿತಿ – ಜನ ಜಾಗೃತಿ

0
504
Tap to know MORE!

ಜಿಲ್ಲಾ, ರಾಜ್ಯ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್
ತೋಕೂರು ಹಳೆಯಂಗಡಿ ಇದರ ಆಶ್ರಯದಲ್ಲಿ, ಸಂಸ್ಥೆಯ ಗೌರವ ಅಧ್ಯಕ್ಷರಾದ ಶ್ರೀ ನಾರಾಯಣ್. ಜಿ. ಕೆ ಅವರ ಸಹಕಾರದಲ್ಲಿ ಕೊರೊನಾ ಸಾಂಕ್ರಾಮಿಕ ರೋಗವನ್ನು ನಿರ್ಲಕ್ಷಿಸದಿರಿ, ನೀವೂ ಸುರಕ್ಷಿತವಾಗಿರಿ, ಇತರರೂ ಸುರಕ್ಷಿತವಾಗಿರಲು ಜಾಗೃತಿ ಮೂಡಿಸಿ, ಸರಿಯಾಗಿ ಮಾಸ್ಕ್ ಧರಿಸಿ, ಆಗಾಗ ಸೋಪ್ ನಿಂದ ಕೈ ತೊಳೆಯಿರಿ, ಲಸಿಕೆ ಪಡೆಯೋಣ, ಕೊರೊನಾ ವಿರುದ್ಧ ಸಮರವನ್ನು ಗೆಲ್ಲೋಣ ಎಂಬ ಶೀರ್ಷಿಕೆಯನ್ನು ಒಳಗೊಂಡ ಗೋಡೆ ಬರಹವನ್ನು ಗ್ರಾಮಸ್ಥರಿಗೆ ಅರಿವು ಮೂಡಿಸುವ ಸಲುವಾಗಿ ಸರಕಾರಿ ಹಿರಿಯ ಪ್ರಾಥಮಿಕ ಹಿಂದುಸ್ತಾನಿ ಶಾಲೆ, ತೋಕೂರು ಇದರ ಹೊರಾಂಗಣದಲ್ಲಿ ಅನಾವರಣಗೊಳಿಸಲಾಯಿತು.

ತೋಕೂರು: ಪರಿಸರ ದಿನಾಚರಣೆಯಂದು ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಲಿ

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯರು ವಿನೋದ್ ಕುಮಾರ್ ಬೊಳ್ಳುರು ಅವರು “ಕೊರೊನಾ ನಿಯಂತ್ರಣಕ್ಕೆ ಜಾಗೃತಿ ಚಟುವಟಿಕೆಗಳನ್ನು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಂಘ ಸಂಸ್ಥೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿವೆ. ಅದರಂತೆ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 10ನೇ ತೋಕೂರು ಗ್ರಾಮದಲ್ಲಿ ಗೋಡೆ ಬರಹದ ಮೂಲಕ ಜನ ಜಾಗೃತಿ ಮೂಡಿಸುತ್ತಿರುವುದು ಗಮನ ಸೆಳೆದಿದೆ ಎಂದು ಹೇಳಿದರು.

ಗೋಡೆ ಬರಹ ಅನಾವರಣದ ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಅಭಿವೃದ್ಧಿ ಅಧಿಕಾರಿ ಅನಿತಾ ಕ್ಯಾಥರಿನ್, ಸದಸ್ಯರಾದ ಮೋಹನ್ ದಾಸ್, ಹೇಮನಾಥ್ ಅಮೀನ್, ಸಂತೋಷ್ ಕುಮಾರ್, ಪಡುಪಣಂಬೂರು ವ್ಯವಸಾಯಿಕ ಸಹಕಾರಿ ಬ್ಯಾಂಕ್ ಇದರ ನಿರ್ದೇಶಕರು ಮುಕೇಶ್ ಸುವರ್ಣ, ತೋಕೂರು ಯುವಕ ಸಂಘದ ಅಧ್ಯಕ್ಷರು ವಿನೋದ್ ಸುವರ್ಣ, ಸ್ಪೋರ್ಟ್ಸ್ ಕ್ಲಬ್ ನ ಗೌರವ ಅಧ್ಯಕ್ಷರು ನಾರಾಯಣ್ ಜಿ. ಕೆ,ಅಧ್ಯಕ್ಷರು ಸಂತೋಷ್ ದೇವಾಡಿಗ, ಕಾರ್ಯಾಧ್ಯಕ್ಷರು ಸುರೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಸಂತೋಷ್ ದೇವಾಡಿಗ ಸ್ವಾಗತಿಸಿದರು, ಜಗದೀಶ್ ಕುಲಾಲ್ ವಂದಿಸಿದರು, ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here