ತಂಗಿಯ ಬಾಳಿಗೆ ಅಣ್ಣನೇ ಕಾವಲುಗಾರ

0
168
Tap to know MORE!

ಅಣ್ಣ ತಂಗಿಯ ಬಾಂಧವ್ಯವೇ ಸುಂದರ. ಸ್ವಾರ್ಥವಿಲ್ಲದ ಪ್ರೀತಿ, ಸುಖ ದುಃಖಗಳಲ್ಲಿ ಜೊತೆಯಾಗಿ, ಕಷ್ಟದಲ್ಲಿ ಧೈರ್ಯ ತುಂಬುವ ಒಂದು ಸುಂದರ ಸಂಬಂಧವಾಗಿದೆ.

ಪ್ರತಿಯೊಂದು ತಂಗಿಯ ಬಾಳಿನಲ್ಲಿ ಅಣ್ಣನು ಕಾವಲುಗಾರನಾಗಿ ಇರುತ್ತಾನೆ. ಹಾಗೆಯೇ ನನ್ನ ಜೀವನದಲ್ಲಿಯೂ ನಾಲ್ಕು ಜನ ಕಾವಲುಗಾರರು ಇದ್ದಾರೆ. ಅವರೇ ನನ್ನ ಜೀವನದ ಪುಟ್ಟ ಪ್ರಪಂಚ. ನನ್ನನ್ನು ಚಿಕ್ಕಂದ್ದಿನಿಂದ ಈಗಿನ ತನಕ ಚಿಕ್ಕ ಮಗುವಿನ ಹಾಗೆ ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುತ್ತಾರೆ. ನನಗೆ ಏನಾದರೂ ಕಷ್ಟ ಬಂದರೆ ಅವರಿಗೇ ಆ ಕಷ್ಟ ಎದುರಾಗಿದೆ ಎನ್ನುವ ರೀತಿಯಲ್ಲಿ ಅದನ್ನು ಅದನ್ನು ನಿವಾರಿಸುತ್ತಾರೆ. ನನ್ನ ಪ್ರತಿಯೊಂದು ವಿಷಯದಲ್ಲಿ ಒಟ್ಟಿಗೆ ನಿಲ್ಲುವ ನನ್ನ ಮುದ್ದು ಅಣ್ಣನವರು, ನನ್ನ ಜೀವನದ ಮುತ್ತುಗಳು.

ಸಣ್ಣಪುಟ್ಟ ಜಗಳ, ಸಿಕ್ಕಾಪಟ್ಟೆ ಪ್ರೀತಿ – ಇದು ಅಣ್ಣ ತಂಗಿ ಸಂಬಂಧದ ಸಾರ!

ಅಣ್ಣನ ಸುಖದಲ್ಲಿ ತಂಗಿಯ ಕಾಳಜಿ ಎಷ್ಟು ಮುಖ್ಯವೋ ಹಾಗೆಯೇ ತಂಗಿಯ ಸುಖದಲ್ಲಿ ಅಣ್ಣನ ಪ್ರೀತಿ ಅಷ್ಟೇ ಮುಖ್ಯವಾದದ್ದು ಆಗಿದೆ. ನನಗೆ ಏನು ಬೇಕೋ ಏನು ಬೇಡವೋ ಎಂಬುವುದನ್ನು ಅವರಲ್ಲಿ ಹೇಳದಿದ್ದರೂ, ಅರ್ಥಮಾಡಿಕೊಳ್ಳುತ್ತಾರೆ. ಸಮಾಧಾನದಿಂದ ಬುದ್ಧಿವಾದ ಹೇಳುತ್ತಿದ್ದರು ಮತ್ತು ಮುಂದಿನ ಜೀವನದಲ್ಲಿ ಹೇಗೆ ಎಲ್ಲರಿಗೂ ಸಹಾಯ ಮಾಡಬೇಕೆಂಬುದನ್ನು ಪಾಠ ಮಾಡುತ್ತಿದ್ದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಅಣ್ಣ ಎಲ್ಲಿಗಾದರೂ ಹೋಗಿ ಮನೆಗೆ ಹಿಂತಿರುವಾಗ ತರುವ ಸಿಹಿತಿಂಡಿಗಳು ಬಹಳ ಸಂತೋಷ ಮತ್ತು ತೃಪ್ತಿಯನ್ನು ನೀಡುತ್ತಿತ್ತು. ಅಣ್ಣನ ಪ್ರೀತಿ ನನಗೆ ಯಾವಾಗಲು ಶಾಶ್ವತ. ಅಣ್ಣನಿಗೆ ಏನೇ ಕೆಲಸವಿದ್ದರೂ ನನಗಾಗಿ ಸ್ವಲ್ಪ ಸಮಯವನ್ನು ಮೀಸಲು ಇಡುತ್ತಾರೆ. ಕೋಟಿ ಜನ್ಮ ಇದ್ದರೂ ನೀವೇ ನನಗೆ ಅಣ್ಣನವರಾಗಿ ಇರಬೇಕು. ನಮ್ಮ ಈ ಬಂಧನ ಯಾವಾಗಲೂ ಹೀಗೆ ಚಿರವಾಗಿ ಇರಲಿ ಎಂದು ದೇವರಲ್ಲಿ ಬೇಡುವೆ.

ಸ್ಫೂರ್ತಿ ಕಮಲ್‌

LEAVE A REPLY

Please enter your comment!
Please enter your name here