ಸಚಿವ ಸಂಪುಟ ರಚನೆ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಘೋಷಣೆ : ಯಾವ ಜಿಲ್ಲೆಗೆ ಯಾರು ಉಸ್ತುವಾರಿ?

0
248
Tap to know MORE!

ಬೆಂಗಳೂರು: ರಾಜ್ಯದ ನೂತನ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ, ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿಯ ( District Incharge Minister ) ಜವಾಬ್ದಾರಿಯನ್ನು ವಹಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿನ ನೆರೆ, ಪ್ರವಾಹ, ಕೊರೋನಾ 3ನೇ ಅಲೆಯ ( Corona 3rd Wave ) ನಿಯಂತ್ರಣ ಜವಾಬ್ದಾರಿಯನ್ನು ನೀಡಿದ್ದಾರೆ.

ಈ ಕುರಿತಂತೆ ಪಟ್ಟಿಯನ್ನು ಬಿಡುಗಡೆ ಮಾಡಿರುವಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ( Chief Minister Basavaraj Bommai ), ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ( Covid-19 Control ) ಹಾಗೂ ನೆರೆ ಹಾವಳಿ ( Flood Relief Work ) ಪರಿಹಾರ ಕೆಲಸಗಳನ್ನು ತ್ವರಿತವಾಗಿ ಪರಿಶೀಲನೆ ಮಾಡಲು, ಈ ಕೆಳಕಂಡ ಸಚಿವರುಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಜಿಲ್ಲೆಗಳಿಗೆ, ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಹೀಗಿದೆ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ( Karnataka District Incharge Minister List )

  • ಗೋವಿಂದ ಕಾರಜೋಳ – ಬೆಳಗಾವಿ
  • ಕೆ.ಎಸ್.ಈಶ್ವರಪ್ಪ – ಶಿವಮೊಗ್ಗ
  • ಆರ್.ಅಶೋಕ್ – ಬೆಂಗಳೂರು ನಗರ
  • ಬಿ.ಶ್ರೀರಾಮುಲು – ಚಿತ್ರದುರ್ಗ
  • ವಿ.ಸೋಮಣ್ಣ – ರಾಯಚೂರು
  • ಉಮೇಶ್ ಕತ್ತಿ – ಬಾಗಲಕೋಟೆ
  • ಎಸ್ ಅಂಗಾರ – ದಕ್ಷಿಣ ಕನ್ನಡ
  • ಜೆಸಿ ಮಾಧುಸ್ವಾಮಿ – ತುಮಕೂರು
  • ಅರಗ ಜ್ಞಾನೇಂದ್ರ – ಚಿಕ್ಕಮಗಳೂರು
  • ಡಾ.ಸಿಎನ್.ಅಶ್ವತ್ಥನಾರಾಯಣ – ರಾಮನಗರ
  • ಸಿಸಿ ಪಾಟೀಲ್ – ಗದಗ
  • ಆನಂದ್ ಸಿಂಗ್ – ವಿಜಯನಗರ ಮತ್ತು ಬಳ್ಳಾರಿ
  • ಕೋಟಾ ಶ್ರೀನಿವಾಸ ಪೂಜಾರಿ – ಕೊಡಗು
  • ಪ್ರಭು ಚೌಹಾಣ್ – ಬೀದರ್
  • ಮುರುಗೇಶ್ ನಿರಾಣಿ – ಕಲಬುರ್ಗಿ
  • ಶಿವರಾಂ ಹೆಬ್ಬಾರ್ – ಉತ್ತರ ಕನ್ನಡ
  • ಎಸ್.ಟಿ.ಸೋಮಶೇಖರ್ – ಮೈಸೂರು ಮತ್ತು ಚಾಮರಾಜನಗರ
  • ಬಿ.ಸಿ ಪಾಟೀಲ್ – ಹಾವೇರಿ
  • ಬೈರತಿ ಬಸವರಾಜು – ದಾವಣಗೆರೆ
  • ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ
  • ಕೆ.ಗೋಪಾಲಯ್ಯ – ಹಾಸನ
  • ಶಶಿಕಲಾ ಜೊಲ್ಲೆ – ವಿಜಯಪುರ
  • MTB ನಾಗರಾಜು – ಬೆಂಗಳೂರು ಗ್ರಾಮಾಂತರ
  • ಕೆಸಿ ನಾರಾಯಣ್ ಗೌಡ – ಮಂಡ್ಯ
  • ಬಿಸಿ ನಾಗೇಶ್ – ಯಾದಗಿರಿ
  • ಸುನೀಲ್ ಕುಮಾರ್ – ಉಡುಪಿ
  • ಹಾಲಪ್ಪ ಆಚಾರ್ – ಕೊಪ್ಪಳ
  • ಶಂಕರ್ ಪಾಟೀಲ್ ಮುನೇನಕೊಪ್ಪ – ಧಾರವಾಡ
  • ವಿ.ಮುನಿರತ್ನ – ಕೋಲಾರ

LEAVE A REPLY

Please enter your comment!
Please enter your name here