ದ.ಕ ಹಾಗೂ ಉಡುಪಿ ಜಿಲ್ಲಾ ಮಟ್ಟದ ಮುದ್ದು ಕೃಷ್ಣ ವೇಷ ಭಾವಚಿತ್ರ ಸ್ಪರ್ಧೆಗೆ ಆಹ್ವಾನ

0
509
Tap to know MORE!

ಹಳೆಯಂಗಡಿ: ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ ದ.ಕ ಹಾಗೂ ಉಡುಪಿ ಜಿಲ್ಲಾ ಮಟ್ಟದ ಮುದ್ದು ಕೃಷ್ಣವೇಷ ಭಾವಚಿತ್ರ ಸ್ಪರ್ಧೆಗೆ ಆಹ್ವಾನಿಸಲಾಗಿದೆ. ಭಾಗವಹಿಸುವವರು, ಮುದ್ದು ಕೃಷ್ಣ ಭಾವಚಿತ್ರವನ್ನು, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸೆಪ್ಟೆಂಬರ್ 2, 2021ರ ಒಳಗಾಗಿ ಯುವಕ ಮಂಡಲದ ವಿಳಾಸಕ್ಕೆ ಕಳುಹಿಸಬೇಕು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸ್ಪರ್ಧೆ ನಿಯಮಗಳು

 1. ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ ನಡೆಸಲಾಗುತ್ತಿದೆ.
  • 5 ವರ್ಷದೊಳಗಿನ ವಿಭಾಗ
  • 6 ರಿಂದ 10 ವರ್ಷದೊಳಗಿನ ವಿಭಾಗ
 2. ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳ “ಮುದ್ದು ಕೃಷ್ಣ ವೇಷದ” ಮೂಲ ಭಾವಚಿತ್ರಕ್ಕೆ (original photo) ಮಾತ್ರ ಪ್ರಾಶಸ್ತ್ಯ ನೀಡಲಾಗುವುದು.
 3. ವಾಟರ್‌ಮಾರ್ಕ್ ಬಳಸಿದ ಮತ್ತು ಎಡಿಟ್ ಮಾಡಿದ ಭಾವಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
 4. ಪ್ರಸಕ್ತ ವರ್ಷದಲ್ಲಿಯೇ ತೆಗೆದ ಭಾವಚಿತ್ರ ಮಾತ್ರ ಕಳುಹಿಸಿಕೊಡಬೇಕು ಮತ್ತು ಬಹುಮಾನ ವಿಜೇತರು, ಬಹುಮಾನ ವಿತರಣೆಯ ಸಮಯದಲ್ಲಿ ಭಾವಚಿತ್ರದಲ್ಲಿರುವಂತೆ ವೇಷ ಧರಿಸಿಕೊಂಡು ಬರಬೇಕು.
 5. ಭಾವಚಿತ್ರವು ಸ್ಪಷ್ಟವಾಗಿ 5*7 ಅಳತೆಯಲ್ಲಿ ಇರಬೇಕು ಮತ್ತು ಯಾವುದೇ ರೀತಿಯ ಬರಹ, ಲೋಗೋ ಇರಬಾರದು
 6. ಒಬ್ಬ ಸ್ಪರ್ಧಿಗೆ ಕೇವಲ ಒಂದು ಭಾವಚಿತ್ರ ಕಳುಹಿಸಲು ಅವಕಾಶ
 7. ಮಗುವಿನ ಜನನ ಪ್ರಮಾಣ ಪತ್ರದ ಪ್ರತಿ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸುವುದು ಕಡ್ಡಾಯ
 8. ಭಾವಚಿತ್ರದ ಜೊತೆಗೆ, ಮಗುವಿನ ಹೆತ್ತವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಪ್ರತ್ಯೇಕವಾಗಿ ಕಳುಹಿಸಿ ಕೊಡಬೇಕು. (ಪ್ರತ್ಯೇಕ ಹಾಳೆ)

ತಲುಪಿಸಬೇಕಾದ ವಿಳಾಸ :
ಅಂಚೆ ವಿಳಾಸ : ಕಾರ್ಯದರ್ಶಿ, ಶ್ರೀ ವಿದ್ಯಾವಿನಾಯಕ ಯುವಕ ಮಂಡಲ(ರಿ), ಪಂಡಿತ್ ಹರಿ ಭಟ್ ರಸ್ತೆ, ಹಳೆಯಂಗಡಿ – 574146
ಈಮೇಲ್ ವಿಳಾಸ : vidyavinayaka1970@yahoo.com

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 
+91 99807 69762
+91 97419 79491
+91 90081 60198
+91 80506 27181

ಪ್ರತ್ಯೇಕ ವಿಭಾಗಗಳಲ್ಲಿ, ಮೊದಲ ಮೂರು ಸ್ಥಾನ ಪಡೆದ ವಿಜೇತರಿಗೆ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಲಾಗುವುದು. ಅಲ್ಲದೇ ಎರಡೂ ವಿಭಾಗದಲ್ಲಿ 3 ಪ್ರೋತ್ಸಾಹಕ ಬಹುಮಾನಗಳೂ ಇವೆ.

ಬಹುಮಾನ ವಿತರಣೆಯನ್ನು ಸೆಪ್ಟೆಂಬರ್ 5, 2021 ರಂದು ಯುವಕ ಮಂಡಲದ ಸಭಾಂಗಣದಲ್ಲಿ ಮಾಡಲಾಗುವುದು ಎಂದು ಮಂಡಲದ ಅಧಿಕೃತ ಪ್ರಕಟಣೆ ತಿಳಿಸಿದೆ. ವಿಜೇತರನ್ನು ಫೋನ್ ಮುಖಾಂತರ, ಮಾಧ್ಯಮ ಮತ್ತು ಯುವಕ ಮಂಡಲದ ಫೇಸ್‌ಬುಕ್ ಜಾಲತಾಣದ (Sri Vidyavinayaka Yuvaka Mandala Haleangadi) ಮೂಲಕ ತಿಳಿಸಲಾಗುವುದು.

LEAVE A REPLY

Please enter your comment!
Please enter your name here