RCBಗೆ ಆನೆಬಲ | ತಂಡಕ್ಕೆ ವಿಶ್ವ ನಂ.2 ಬೌಲರ್, ಶ್ರೀಲಂಕಾದ ಸ್ಪಿನ್ನರ್ ವಿ.ಹಸರಂಗ ಸೇರ್ಪಡೆ

0
1578
Tap to know MORE!

ಬೆಂಗಳೂರು: ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ (IPL) ದ್ವಿತೀಯಾರ್ಧದ ಪಂದ್ಯಾವಳಿಯಲ್ಲಿ ಆರ್​ಸಿಬಿ ಪರ ಶ್ರೀಲಂಕಾದ ಗೂಗ್ಲಿ ಸ್ಪಿನ್ನರ್ ವಸುಂದು ಹಸರಂಗ ಕಣಕ್ಕಿಳಿಯಲಿದ್ದಾರೆ. ಆಸ್ಟ್ರೇಲಿಯಾದ ಸ್ಪಿನ್ನರ್ ಆಡಂ ಜಂಪಾ ಬದಲಿಗೆ ಹಸರಂಗ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಮಾಹಿತಿಯನ್ನು ಆರ್​ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಹಿರಂಗಪಡಿಸಿದೆ.

ಭಾರತದ ವಿರುದ್ಧ ಮೂರು ಪಂದ್ಯಗಳ ಟಿ -20 ಸರಣಿಯನ್ನು ಶ್ರೀಲಂಕಾ 2-1ರಿಂದ ಸರಣಿ ಗೆದ್ದುಕೊಂಡಿತು. ಹಸರಂಗ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ. ಈ ಸರಣಿಯಲ್ಲಿ ಹಸರಂಗ ಏಳು ವಿಕೆಟ್ ಪಡೆದರು. ಇದಲ್ಲದೇ, ಅವರು 130 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್​ನಲ್ಲಿ 29 ಪ್ರಮುಖ ರನ್ ಗಳಿಸಿದ್ದರು. ಇಡೀ ಸರಣಿಯಲ್ಲಿ ಅವರ ಇಕಾನಮಿ ಆರಕ್ಕಿಂತ ಕಡಿಮೆ ಇತ್ತು. ಭಾರತೀಯ ಬ್ಯಾಟ್ಸ್‌ಮನ್‌ಗಳು ಅವರ ವಿರುದ್ಧ ಆಡಲು ತೊಂದರೆ ಅನುಭವಿಸುತ್ತಿರುವುದು ಸ್ಪಷ್ಟವಾಗಿತ್ತು. ಸರಣಿಯ ಕೊನೆಯ ಮತ್ತು ನಿರ್ಣಾಯಕ ಪಂದ್ಯದಲ್ಲಿ, ಅವರು ನಾಲ್ಕು ಓವರ್‌ಗಳಲ್ಲಿ ನಾಲ್ಕು ರನ್ ನೀಡಿ 3 ವಿಕೆಟ್ ಪಡೆದರು.

ಐಪಿಎಲ್ 2021ಗೆ ಪುನರ್ಜನ್ಮ! ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ದುಬೈನಲ್ಲಿ ಆಯೋಜಿಸಲು ಬಿಸಿಸಿಐ ಸಿದ್ಧತೆ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಆರ್​ಸಿಬಿ ತಂಡದಲ್ಲಾಗಿರುವ ಪ್ರಮುಖ ಬದಲಾವಣೆಗಳು ಹೀಗಿವೆ

  • ಆಸ್ಟ್ರೇಲಿಯಾದ ಸ್ಪಿನ್ನರ್ ಆಡಂ ಜಂಪಾ ಬದಲಿಗೆ ಶ್ರೀಲಂಕಾದ ಆಲ್​ರೌಂಡರ್ ಹಸರಂಗವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
  • ಕೇನ್ ರಿಚರ್ಡ್​ಸನ್ ಬದಲಿಗೆ ಶ್ರೀಲಂಕಾದ ಮತ್ತೊಬ್ಬ ವೇಗದ ಬೌಲರ್ ಆದ ದುಶ್ಮಂತ್ ಚಮೀರಾ ಅವರನ್ನು ತಂಡಕ್ಕೆ ಕರೆತರಲಾಗಿದೆ.
  • ಫಿನ್ ಅಲೆನ್ ಬದಲಿಗೆ ಟಿಮ್ ಡೇವಿಡ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
  • ತಂಡದ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್​, ಅವರ ಬದಲಿಗೆ ಈಗ ಮೈಕ್ ಹೇಸನ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ಅಲಂಕರಿಸಲಿದ್ದಾರೆ

LEAVE A REPLY

Please enter your comment!
Please enter your name here