ಮೂಡುಬಿದಿರೆ: ಏಕಕಾಲಕ್ಕೆ ಮೂರು ವಿಶ್ವ ದಾಖಲೆಗಳನ್ನು ಮಾಡುವ ಮೂಲಕ ಸದ್ದು ಮಾಡಿದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಬಿವಿಎ ವಿದ್ಯಾರ್ಥಿಯಾಗಿದ್ದ, ಯುವ ಕಲಾವಿದ ತಿಲಕ್ ಕುಲಾಲ್ ಅವರು ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ವಿಭಿನ್ನವಾದ ಕಲಾಕೃತಿಯನ್ನು ರಚಿಸಿದ್ದಾರೆ.
2 ಗಂಟೆ 30 ನಿಮಿಷ ಸಮಯದಲ್ಲಿ (ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:30 ರವರೆಗೆ) 70 ಕೆ.ಜಿ ಅಕ್ಕಿ ಮತ್ತು 40 ಕೆ.ಜಿ ಇದ್ದಿಲನ್ನು ಬಳಸಿಕೊಂಡು 20 ಅಡಿ ಉದ್ದ ಮತ್ತು 20 ಅಡಿ ಅಗಲವಾದ ಆದಿ ಯೋಗಿಯ ಕಲಾಕೃತಿಯನ್ನು ಮೂಡುಬಿದಿರೆಯ, ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುತ್ತಿಗೆ ದೇವಾಲಯದ ಆವರಣದಲ್ಲಿ ತಮ್ಮ ಸ್ನೇಹಿತರಾದ ಅಕ್ಷಿತ್ ಕುಲಾಲ್ ಹಾಗೂ ರೋಹಿತ್ ನಾಯಕ್ ಅವರ ಜೊತೆಗೂಡಿ ಬೃಹತ್ ಆದಿ ಯೋಗಿಯ ಕಲಾಕೃತಿಯನ್ನು ರಚಿಸಿದ್ದಾರೆ.