1971 ಯುದ್ಧದಲ್ಲಿ ಹುತಾತ್ಮರಾದ ಭಾರತೀಯರ ನೆನಪಿನಲ್ಲಿ ಸ್ಮಾರಕ ನಿರ್ಮಿಸಲಿದೆ ಬಾಂಗ್ಲಾದೇಶ!

0
237
Tap to know MORE!

1971 ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ನೆನಪಿಗಾಗಿ ಬಾಂಗ್ಲಾದೇಶವು ಸ್ಮಾರಕವನ್ನು ನಿರ್ಮಿಸಲಿದ್ದು, ಇದು ದೇಶದ 50 ನೇ ಸ್ವಾತಂತ್ರ್ಯ ವರ್ಷಾಚರಣೆಯೊಂದಿಗೆ ನಡೆಯಲಿದೆ ಎಂದು ವಿಮೋಚನಾ ಯುದ್ಧ ವ್ಯವಹಾರಗಳ ಸಚಿವ ಮೊಜಮ್ಮೆಲ್ ಹಕ್ ಗುರುವಾರ ತಿಳಿಸಿದ್ದಾರೆ.

ಭಾರತೀಯ ಹೈ ಕಮಿಷನರ್ ರಿವಾ ಗಂಗೂಲಿ ಅವರಿಗೆ ವಿದಾಯದ ಭೇಟಿ ನೀಡಿದಾಗ ಅವರು ಈ ಅಭಿಪ್ರಾಯಗಳನ್ನು ನೀಡಿದ್ದಾರೆ. ವಿಮೋಚನಾ ಯುದ್ಧದ ಸಮಯದಲ್ಲಿ ಭಾರತ ಸರ್ಕಾರ ಮತ್ತು ದೇಶದ ಜನರ ಸಹಕಾರವನ್ನು ಸಚಿವರು ಕೃತಜ್ಞತೆಯಿಂದ ನೆನಪಿಸಿಕೊಂಡರು.

ಬಾಂಗ್ಲಾದೇಶ ಮತ್ತು ಭಾರತವು ಒಳ್ಳೆಯ ಸ್ನೇಹಿತರು ಎಂದು ದಾಸ್ ಹೇಳಿದ್ದಾರೆ. “ಕೆಲವು ಜನರು ಪಕ್ಕದ ಮನೆಯ, ನೆರೆಹೊರೆಯವರ ನಡುವಿನ ಸಂಬಂಧವನ್ನು ಹದಗೆಡಿಸಲು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯುವ ಮಾಹಿತಿಯನ್ನು ಹರಡಲು ಹೊರಟಿದ್ದಾರೆ. ಆದರೆ ಬಾಂಗ್ಲಾದೇಶ-ಭಾರತ ನಡುವಿನ ಸಂಬಂಧಗಳು ಅಷ್ಟೊಂದು ದುರ್ಬಲವಾಗಿಲ್ಲ” ಎಂದು ಅವರು ಹೇಳಿದರು.

ಇದೇ ವೇಳೆ, ವಿಮೋಚನಾ ಯುದ್ಧದ ಪುಸ್ತಕಗಳನ್ನು ಹಿಂದಿಯಲ್ಲಿ ಭಾಷಾಂತರಿಸಲು ಉಪಕ್ರಮಗಳನ್ನು ಕೈಗೊಳ್ಳಬೇಕೆಂದು ದಾಸ್ ಸಚಿವರಿಗೆ ಮನವಿ ಮಾಡಿದರು.
ಅದಲ್ಲದೆ, 2021 ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಭಾಗವಾಗಲು ಭಾರತದ ಇಚ್ಛೆಯನ್ನು ದಾಸ್ ವ್ಯಕ್ತಪಡಿಸಿದರು.

ಸ್ಮಾರಕ ಯೋಜನೆಯ ಪರಿಚಯವಿರುವ ಅಧಿಕಾರಿಯೊಬ್ಬರು, “ಅಗರ್ತಲಾ ಗಡಿಯಲ್ಲಿರುವ ಬ್ರಹ್ಮನ್‌ಬಯಾ ಜಿಲ್ಲೆಯ ಗಡಿನಾಡಿನ ಅಶುಗಂಜ್‌ನಲ್ಲಿ 3.5 ಎಕರೆ ಭೂಮಿಯನ್ನು ಸರ್ಕಾರ ಆಯ್ಕೆ ಮಾಡಿದೆ. ಆಯ್ಕೆಯಾದ ಸ್ಥಳವು ಐತಿಹಾಸಿಕ ಮಹತ್ವವನ್ನು ಹೊಂದಿದೆ, ಭಾರತೀಯ ಸೇನೆಯು 1971 ರಲ್ಲಿ ಅಶುಗಂಜ್ನಲ್ಲಿನ ನಮ್ಮ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಪಾಕಿಸ್ತಾನ ವಿರುದ್ಧ ಕೆಲವು ನಿರ್ಣಾಯಕ ಯುದ್ಧಗಳನ್ನು ನಡೆಸಿತು” ಎಂದು ಹೇಳಿದರು.

LEAVE A REPLY

Please enter your comment!
Please enter your name here