ಕೊರೋನಾ : ದೇಶಾದ್ಯಂತ ಸುಮಾರು 200 ವೈದ್ಯರು ಬಲಿ – ಐಎಂಎ ವರದಿ!

0
207
Tap to know MORE!

ದೇಶದಲ್ಲಿ ಇದುವರೆಗೆ ಸುಮಾರು 196 ವೈದ್ಯರು, ಬಹುತೇಕರು ಸಾಮಾನ್ಯ ವೈದ್ಯರು ಕೋವಿಡ್-19 ಗೆ ಬಲಿಯಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶನಿವಾರ ತಿಳಿಸಿದೆ.

“ಐಎಂಎ ಸಂಗ್ರಹಿಸಿದ ಇತ್ತೀಚಿನ ಮಾಹಿತಿಯ ಪ್ರಕಾರ, ನಮ್ಮ ರಾಷ್ಟ್ರವು 196 ವೈದ್ಯರನ್ನು ಕಳೆದುಕೊಂಡಿದೆ. ಅವರಲ್ಲಿ 170 ಮಂದಿ 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ ಎಂದು ಐಎಂಎ ವರದಿ ಸಲ್ಲಿಸಿದೆ. ಕೋವಿಡ್-19 ಸೋಂಕಿನ ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ವೈದ್ಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

“ಪ್ರತಿದಿನ ಹೆಚ್ಚಿನ ಸಂಖ್ಯೆಯ ವೈದ್ಯರು ಸೋಂಕಿಗೆ ಒಳಗಾಗುತ್ತಿದ್ದಾರೆ ಮತ್ತು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಗಣನೀಯ ಸಂಖ್ಯೆಯ ಜನರು ಸಾಮಾನ್ಯ ವೈದ್ಯರು ಎಂದು ಕಂಡುಬಂದಿದೆ.  ಎಂದಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ, ವಿಶೇಷ ಮತ್ತು ಅಪಾಯದ ಗುಂಪಿನಲ್ಲಿರುವ ವೈದ್ಯರು ಮತ್ತು ಅವರ ಕುಟುಂಬಗಳಿಗೆ ಸಮರ್ಪಕ ಆರೈಕೆ ನೀಡುವಂತೆ ಮತ್ತು ಎಲ್ಲಾ ಕ್ಷೇತ್ರಗಳ ವೈದ್ಯರಿಗೆ ರಾಜ್ಯ ಪ್ರಾಯೋಜಿತ ವೈದ್ಯಕೀಯ ಮತ್ತು ಜೀವ ವಿಮಾ ಸೌಲಭ್ಯಗಳನ್ನು ವಿಸ್ತರಿಸುವಂತೆ ಐಎಂಎ ಕೋರಿದೆ.

LEAVE A REPLY

Please enter your comment!
Please enter your name here