2028ರ ಒಲಿಂಪಿಕ್ಸ್ ಪದಕ ವಿಜೇತ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರ-೧೦ ರಲ್ಲಿ ಭಾರತ : ಕ್ರೀಡಾ ಸಚಿವ ಆಶಯ

0
137
Tap to know MORE!

2028 ರಲ್ಲಿ ಲಾಸ್ ಏಂಜಲೀಸ್ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರ ಪಟ್ಟಿಯಲ್ಲಿ ಅಗ್ರ -10 ರಾಷ್ಟ್ರಗಳ ಪೈಕಿ ಭಾರತ ಒಂದಾಗಲಿದೆ ಎಂದು ಕ್ರೀಡಾ ಸಚಿವ ಕಿರೆನ್ ರಿಜಿಜು ಆಶಿಸಿದ್ದಾರೆ.

ಒಲಿಂಪಿಕ್ಸ್‌ನತ್ತ ಗಮನ ಹರಿಸಿ ಭಾರತವನ್ನು ಉನ್ನತ ಕ್ರೀಡಾ ರಾಷ್ಟ್ರವನ್ನಾಗಿ ಮಾಡಲು ತಳಮಟ್ಟದ ಕೆಲಸಗಳು ನಡೆಯುತ್ತಿವೆ ಎಂದು ರಿಜಿಜು ಮತ್ತೆ ಮತ್ತೆ ಪುನರುಚ್ಚರಿಸಿದರು.

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಇದುವರೆಗಿನ ಅತ್ಯುತ್ತಮ ಪ್ರದರ್ಶನವು 2012ರಲ್ಲಿ, ಲಂಡನ್ನಲ್ಲಿ ದಾಖಲಾಗಿತ್ತು. ಅಂದು ಭಾರತವು ಆರು ಪದಕಗಳನ್ನು ಜಯಿಸಿತ್ತು .

“ಮುಂದಿನ ದಿನಗಳಲ್ಲಿ, ನಮ್ಮ (ಭಾರತದ) ಭಾಗವಹಿಸುವಿಕೆ ಮಾತ್ರವಲ್ಲ, ನಮ್ಮ ಯಶಸ್ಸಿನ ಪ್ರಮಾಣವೂ (ಒಲಿಂಪಿಕ್ ಕ್ರೀಡಾಕೂಟದಲ್ಲಿ) ತುಂಬಾ ಹೆಚ್ಚಿರಬೇಕು ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ” ಎಂದು ರಿಜಿಜು ಶುಕ್ರವಾರ ಹೇಳಿದರು.

LEAVE A REPLY

Please enter your comment!
Please enter your name here