24 ಘಂಟೆಗಳಲ್ಲಿ ಇಡೀ ವಿಶ್ವದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ: ವಿಶ್ವ ಆರೋಗ್ಯ ಸಂಸ್ಥೆ

0
186
Tap to know MORE!

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತನ್ನ ಇದುವರೆಗಿನ ಲೆಕ್ಕಗಳ ಪ್ರಕಾರ, 24 ಘಂಟೆಯ ಅವಧಿಯಲ್ಲಿ ಅತೀ ಹೆಚ್ಚು ಸೋಂಕಿತರ ಸಂಖ್ಯೆಯನ್ನು ಭಾನುವಾರ (ಜೂನ್ 21)ವರದಿ ಮಾಡಿದೆ. 24 ಗಂಟೆಗಳಲ್ಲಿ 1,83,000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ಇಡೀ ವಿಶ್ವದಲ್ಲಿ ದಾಖಲಾಗಿವೆ.

ಇವುಗಳ ಪೈಕಿ, ಬ್ರೆಜಿಲ್ 54,771 ನಲ್ಲಿ ಪ್ರಕರಣಗಳು ಹೆಚ್ಚಿದೆ ಮತ್ತು ಎರಡನೇ ಸ್ಥಾನದಲ್ಲಿ ಅಮೇರಿಕಾ 36,617 ಹೊಸ ಸೋಂಕಿತರ ಪತ್ತೆಯಾಗಿದೆ. ಭಾರತದಲ್ಲಿ ಸುಮಾರು 15,400 ಹೊಸ ಪ್ರಕರಣಗಳು ದಾಖಲಾದವು .

ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆಯು, ವ್ಯಾಪಕವಾದ ಪರೀಕ್ಷೆ ಮತ್ತು ವಿಶಾಲವಾಗಿ ಹರಡಿರುವ ಸೋಂಕು, ಸೇರಿದಂತೆ ಅನೇಕ ಅಂಶಗಳನ್ನು ಪ್ರತಿಬಿಂಬಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಸಾಂಕ್ರಾಮಿಕ ರೋಗದಲ್ಲಿ ಒಟ್ಟಾರೆ, ವಿಶ್ವ ಸಂಸ್ಥೆಯು 87,08,008 ಪ್ರಕರಣಗಳನ್ನು ವರದಿ ಮಾಡಿದೆ. ವಿಶ್ವಾದ್ಯಂತ 4,61,715 ಸಾವುಗಳು ಸಂಭವಿಸಿವೆ.

ಒಟ್ಟು ಮರಣ ಹೊಂದಿದವರ ಪೈಕಿ, ಶೇ.25 ರಷ್ಟು ಅಮೆರಿಕ ರಾಷ್ಟ್ರ ಒಂದರಲ್ಲೇ ವರದಿಯಾಗಿದೆ.

LEAVE A REPLY

Please enter your comment!
Please enter your name here