25 ವಿವಿಧ ಯೋಜನೆಗಳು ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ್ ಅಡಿಯಲ್ಲಿ ಸೇರ್ಪಡೆ

0
202
Tap to know MORE!

2020 ರ ಜೂನ್ 20 ರಂದು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು, ಗರೀಬ್ ಕಲ್ಯಾಣ್ ರೋಜರ್ ಅಭಿಯಾನ್ ಎಂಬ ಬೃಹತ್ ಗ್ರಾಮೀಣ ಲೋಕೋಪಯೋಗಿ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಗುರಿ

ಈ ಯೋಜನೆಯಡಿ, ಗ್ರಾಮೀಣ ನಾಗರಿಕರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರಿಗೆ ಜೀವನೋಪಾಯದ ಬೆಂಬಲವನ್ನು ನೀಡುವ ಮೂಲಕ ರಾಷ್ಟ್ರವ್ಯಾಪಿ ಲಾಕ್ಡೌನ್ ನಿಂದ ದೇಶದ ಗ್ರಾಮೀಣ ಭಾಗಗಳು ಎದುರಿಸುತ್ತಿರುವ ಆರ್ಥಿಕ ಪರಿಣಾಮವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನದ ಅಡಿಯಲ್ಲಿ ಸುಮಾರು 25 ಯೋಜನೆಗಳನ್ನು ಒಟ್ಟುಗೂಡಿಸುವ ಮೂಲಕ, ಆರಂಭಿಕ ಹಂತದಲ್ಲಿ, ದೇಶದ 116 ಜಿಲ್ಲೆಗಳಲ್ಲಿ ಗುರಿ ಸಾಧಿಸಲು ಕೇಂದ್ರ ಸರ್ಕಾರವು ಯೋಜನೆಯನ್ನು ರೂಪಿಸಿದೆ.

ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ?

6 ರಾಜ್ಯಗಳ (ಒಡಿಶಾ, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್, ರಾಜಸ್ಥಾನ, ಮತ್ತು ಉತ್ತರ ಪ್ರದೇಶ) 116 ಜಿಲ್ಲೆಗಳಿಂದ ಒಟ್ಟು 67 ಲಕ್ಷ ವಲಸೆ ಕಾರ್ಮಿಕರನ್ನು (ಅಂದರೆ ಲಾಕ್ಡೌನ್ ಸಮಯದಲ್ಲಿ ಹಿಂದಿರುಗಿದ ವಲಸೆ ಕಾರ್ಮಿಕರಲ್ಲಿ ಮೂರನೇ ಎರಡರಷ್ಟು) ತಲುಪುವ ಗುರಿ ಹಾಕಲಾಗಿದೆ. ನಿರ್ದಿಷ್ಟ ರಾಜ್ಯ ಸರ್ಕಾರಗಳ ಸಹಾಯದಿಂದ ಕೇಂದ್ರ ಸರ್ಕಾರವು ಅವರ ಕೌಶಲ್ಯದ ಪ್ರಕಾರ, ಉದ್ಯೋಗ ನೀಡಲು ಸಜ್ಜಾಗಿದೆ. ಆಯ್ದ ಎಲ್ಲಾ ಜಿಲ್ಲೆಗಳಲ್ಲಿ ಕನಿಷ್ಠ 25 ಸಾವಿರ ವಲಸೆ ಕಾರ್ಮಿಕರು ಮರಳಿದ್ದಾರೆ.

ಯೋಜನೆಯಡಿಯಲ್ಲಿ, ಮನೆ ನಿರ್ಮಾಣ, ಮನೆಗಳಿಗೆ ಟ್ಯಾಪ್ ಸಂಪರ್ಕದ ಮೂಲಕ ಸುರಕ್ಷಿತ ಕುಡಿಯುವ ನೀರು, ರಸ್ತೆ ನಿರ್ಮಾಣ ಇತ್ಯಾದಿ ಯೋಜನೆಗಳು ಒಳಗೊಂಡಿದೆ. ಹಿಂದಿರುಗಿದ ವಲಸೆ ಕಾರ್ಮಿಕರಿಗೆ ಉದ್ಯೋಗದ ಅಗತ್ಯವಿರುವ, ಅವರ ಕೌಶಲ್ಯದ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ.

ಯೋಜನೆಗೆ ಬಜೆಟ್ ಮೂಲ ಯಾವುದು

ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ್, 2020ರ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್‌ನ ಒಂದು ಭಾಗವಾಗಿರಲಿದೆ.

2020-21ನೇ ಸಾಲಿಗೆ ದೇಶದ ಗ್ರಾಮೀಣ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹಣಕಾಸು ಸಚಿವರು 2020 ರ ಫೆಬ್ರವರಿ 1 ರಂದು ಹಣಕಾಸು ಬಜೆಟ್‌ನಲ್ಲಿ ಒಟ್ಟು 61,500 ಕೋಟಿ ರೂ. ಮೀಸಲಿಟ್ಟಿದ್ದರು. ಕೇಂದ್ರ ಬಜೆಟ್‌ನಿಂದ ಈಗಾಗಲೇ ಅನುಮೋದನೆ ಪಡೆದು, ಅದರಲ್ಲಿ ಒಟ್ಟು 50,000 ಕೋಟಿ ರೂಪಾಯಿಗಳನ್ನು ಗರಿಬ್ ಕಲ್ಯಾಣ್ ರೋಜರ್ ಅಭಿಯಾನಕ್ಕೆ ಸೇರಿಸಲಾಗುತ್ತದೆ.

ದೇಶಾದ್ಯಂತ ಗ್ರಾಮೀಣ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಸಲು ಕಳೆದ ತಿಂಗಳು ಪ್ರತ್ಯೇಕ 40,000 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಅನುಮೋದಿಸಿತ್ತು, ಈ ಮೊತ್ತವು 61,500 ಕೋಟಿ ರೂ.ಗಳ ಕೇಂದ್ರ ಬಜೆಟ್ ಅಡಿಯಲ್ಲಿ ಅನುಮೋದಿಸಲಾದ ಮೊತ್ತದ ಭಾಗವಾಗಿರಲಿಲ್ಲ.

LEAVE A REPLY

Please enter your comment!
Please enter your name here