ಹೊಸದಿಲ್ಲಿ: ದೆಹಲಿಯ ಐತಿಹಾಸಿಕ ಜಮಾ ಮಸೀದಿಯನ್ನು ಮತ್ತೊಮ್ಮೆ ಮುಚ್ಚಲು ನಿರ್ಧರಿಸಲಾಗಿದೆ. ಗುರುವಾರ ರಾತ್ರಿ 8ರಿಂದ ಜೂನ್ 30ರ ವರೆಗೂ ಮಸೀದಿಯ ಬಾಗಿಲು ತೆರೆಯುವುದಿಲ್ಲ ಎಂದು ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಘೋಷಿಸಿದ್ದಾರೆ. ದೇಶದಾದ್ಯಂತ ಅನ್ ಲಾಕ್ ಜಾರಿಯಾದ ಕಾರಣ ಮಸೀದಿ ತೆರೆದು ಪ್ರಾರ್ಥನೆಗೆ ಅವಕಾಶ ನೀಡಿದ ಮೂರನೇ ದಿನಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸೋಂಕಿನ ವ್ಯಾಪಿಸುವಿಕೆ ಹೆಚ್ಚುತ್ತಿರುವ ಕಾರಣ ಜೂ. 30ರವರೆಗೂ ಮಸೀದಿ ಪ್ರವೇಶಕ್ಕೆ ಅನುಮತಿ ಇಲ್ಲದೇ ಇರುವ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಇಮಾಮ್ ಹೇಳಿದ್ದಾರೆ. ದೇಶದ ಎಲ್ಲಾ ಮಸೀದಿಗಳು ಇದನ್ನು ಪಾಲಿಸಲಿ ಎಂದು ಸಲಹೆ ನೀಡಿದ್ದಾರೆ.