ತ್ರಿದಳ- ತ್ರಿನೇತ್ರ

0
694
Tap to know MORE!

ಇತ್ತೀಚೆಗೆ ಎಷ್ಟೋ ಮಂದಿ ಹೇಳ್ತಾರೆ “ನನ್ಗಂತೂ ಈ ಆಫೀಸ್ ಕೆಲಸ, ಮನೆ ಕೆಲಸ, ಬಾಸ್ ಒತ್ತಡ ಎಲ್ಲಾ ಜಂಜಾಟಗಳು ಸೇರಿ depression ಆಗಿದೆ” ಅಂತ. ಅದಕ್ಕೆ ನಮ್ಮ ಪ್ರಕೃತಿಯಲ್ಲೇ antidepressent ಇದೆ.ಆ ಔಷಧವೇ ಈಶ್ವರನಿಗೆ ಪ್ರಿಯವಾಗಿರುವಂತಹ ಬಿಲ್ವ ಪತ್ರೆ.

ಇದಕ್ಕೆ ವೈಜ್ಞಾನಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಬಹಳ ಪ್ರಾಮುಖ್ಯತೆ ಇದೆ. ನಾವು ಸಾಮಾನ್ಯವಾಗಿ ಎಲ್ಲಾ ಶಿವನ ಮಂದಿರದಲ್ಲಿ ಧಾರಾ ಕುಂಭದಿಂದ ನೀರು ಹನಿ ಹನಿಯಾಗಿ ಲಿಂಗದ ಮೇಲೆ ಬೀಳುವುದನ್ನು ನೋಡುತ್ತೇವೆ. ಇದರರ್ಥ ತಲೆ ಯಾವಾಗಲೂ ತಣ್ಣಗಿರಬೇಕೆಂದು ಆಧ್ಯಾತ್ಮಿಕವಾಗಿ ಶಿವ ಸಾರಿದ್ದಾನೆ. ಅದಕ್ಕೆ ನಮ್ ಹಿರೀಕರು ಹೇಳ್ತಾ ಇದ್ರು “ಕಾಲು ಬೆಚ್ಚಗಿರಬೇಕು, ಹೊಟ್ಟೆ ಮೆತ್ತಗಿರಬೇಕು,ತಲೆ ತಂಪಾಗಿರಬೇಕು”ಅಂತ.

ಶಿವಲಿಂಗದ ಮೇಲೆ ಧಾರಾ ಪಾತ್ರೆಯನ್ನು ನೇರವಾಗಿಡದೇ ಅದರ ಮೇಲೆ ಬಿಲ್ವ ದಳವನ್ನು ಇಟ್ಟು ನೀರು ಹನಿ ಹನಿಯಾಗಿ ಬೀಳುವಂತೆ ಮಾಡುತ್ತಿದ್ದರು.ಇದರರ್ಥ ಯಾವುದೇ ಚಿಂತೆ, ಮಾನಸಿಕ ಖಿನ್ನತೆ ಇದ್ದರೂ ಅದನ್ನು ಈ ಬಿಲ್ವ ಪತ್ರೆಯಿಂದ ಗುಣಪಡಿಸಲು ಸಾಧ್ಯವಿದೆ ಎಂದು ಇಡೀ ಮಾನವ ಸಂಕುಲಕ್ಕೆ ತ್ರಿನೇತ್ರಧಾರಿ ಈ ಮೂಲಕ ತಿಳಿಯಪಡಿಸಿದ್ದಾನೆ.
“ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ ತ್ರಿಜನ್ಮ ಪಾಪ ಸಂಹಾರಂ ಏಕಬಿಲ್ವಂ ಶಿವಾರ್ಪಣಂ”.

ಈ ಎಲೆಯು ಮೂರು ದಳದಿಂದ ಕೂಡಿದ್ದು, ಸಾತ್ವಿಕ,ರಾಜಸ ಹಾಗೂ ತಾಮಸ ಎಂಬ ಮೂರು ಗುಣಗಳನ್ನು ಸೂಚಿಸುತ್ತದೆ.ಆರ್ಯುವೇದದಲ್ಲಿ ಇದರ ಪಾತ್ರ ಹಿರಿದಾದದ್ದು.ಇದರ ಕಷಾಯ ಮಾಡಿ ಕುಡಿಯುವುದರಿಂದ ಯಾ ನೇರವಾಗಿ 2-3 ದಳವನ್ನು ಸೇವಿಸುವುದರಿಂದ ಮಾನಸಿಕ ಅಸ್ವಸ್ಥತೆಯನ್ನು ಗುಣಪಡಿಸಲು ಸಾಧ್ಯವಿದೆ.ದೇವಸ್ಥಾನದಲ್ಲಿ ಶಿವನಿಗೆ ಅರ್ಪಿಸಿದಂತಹ ಎಲೆಯನ್ನು ತಂದು ನೆರಳಲ್ಲಿ ಒಣಗಿಸಿ ಆ ಚೂರ್ಣವನ್ನು ಸೇವಿಸಬಹುದಾಗಿದೆ. ದೈಹಿಕವಾಗಿ ಆರೋಗ್ಯವಾಗಿದ್ದರೆ ಸಾಲದು ಮನಸ್ಸಿನ ಆರೋಗ್ಯ ಚೆನ್ನಾಗಿರಬೇಕಲ್ಲವೇ?.

ಜಪ
ಕುಂದಾಪುರ

LEAVE A REPLY

Please enter your comment!
Please enter your name here