ಹೊಸಕೋಟೆ ಶಾಸಕರಿಗೆ ಕೊರೋನಾ ದೃಢ!

0
594
Tap to know MORE!

ಸಾಮಾನ್ಯ ಜನರಿಂದ ಹಿಡಿದು ಜನಪ್ರತಿನಿಧಿಗಳಿಗೂ ಕೊರೋನಾ ವಕ್ಕರಿಸುತ್ತಿದ್ದು, ಇದೀಗ ರಾಜ್ಯದ ಮತ್ತೊಬ್ಬ ಶಾಸಕರಿಗೆ ಸೋಂಕು ಇರುವುದು ಖಚಿತ ಪಟ್ಟಿದ್ದು, ಅವರ ಸಂಪರ್ಕಿತರವ್ವಿ ಆತಂಕವನ್ನುಂಟು ಮಾಡಿದೆ.

ಸಂಸದ ಬಿಎನ್ ಬಚ್ಚೇಗೌಡ ಅವರ ಪುತ್ರ, ಹೊಸಕೋಟೆಯ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರಿಗೆ ಕೊರೋನಾ ಸೋಂಕು ತಗುಲಿರುವವುದು ಇಂದು ದೃಢಪಟ್ಟಿದೆ. ಈ ಬಗ್ಗೆ ಅವರೇ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಶರತ್ ಬಚ್ಚೇಗೌಡ ಮತ್ತು ಅವರ ಪತ್ನಿ ಇಬ್ಬರು ಕೊರೋನಾ ಪರೀಕ್ಷೆಗೆ ಒಳಗಾಗಿದ್ದರು. ಅದರ ವರದಿ ಇಂದು (ಬುಧವಾರ) ಸಂಜೆ ಬಂದಿದ್ದು, ಶರತ್ ಮತ್ತು ಅವರ ಹೆಂಡತಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಅವರು ಮನೆಯಲ್ಲಿಯೇ ಕ್ವಾರಂಟೈನ್‌ ಆಗಿದ್ದಾರೆ.

LEAVE A REPLY

Please enter your comment!
Please enter your name here