ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ₹4 ಲಕ್ಷ ಪರಿಹಾರ ನೀಡಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರ

0
200
Tap to know MORE!

ಹೊಸದಿಲ್ಲಿ: ಕೇಂದ್ರದ ಪರಿಹಾರಗಳು ನೈಸರ್ಗಿಕ ವಿಕೋಪಗಳಿಗೆ ಮಾತ್ರ ಅನ್ವಯವಾಗುವುದರಿಂದ ಕೋವಿಡ್ 19 ಸೋಂಕಿನಿಂದ ಮೃತಪಟ್ಟವರ ಕುಟುಂಬದವರಿಗೆ 4 ಲಕ್ಷ ರೂ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರಕಾರ ತಿಳಿಸಿದೆ. 183 ಪುಟಗಳ ಅಫಿಡವಿಟ್ ಸಲ್ಲಿಸಿರುವ ಕೇಂದ್ರ, ಪ್ರತಿ ಮೃತ ವ್ಯಕ್ತಿಯ ಕುಟುಂಬಕ್ಕೂ ಪರಿಹಾರ ಪಾವತಿಸುವಷ್ಟು ಸಾಮರ್ಥ್ಯ ರಾಜ್ಯಗಳಿಗೆ ಇಲ್ಲ ಎಂದು ಹೇಳಿದೆ. ಹಾಗೆಯೇ ಕೋವಿಡ್ ಅಲ್ಲದ ಕಾಯಿಲೆಗಳಿಂದ ಸಾವಿಗೀಡಾದವರಿಗೆ ಪರಿಹಾರ ನಿರಾಕರಿಸುವುದು ಅನ್ಯಾಯವಾಗುತ್ತದೆ ಎಂದು ತಿಳಿಸಿದೆ.

ಭೂಕಂಪ ಅಥವಾ ನೆರೆಯಂತಹ ನೈಸರ್ಗಿಕ ವಿಪತ್ತು ಘಟನೆಗಳಿಗೆ ಮಾತ್ರವೇ ಪರಿಹಾರ ಅನ್ವಯವಾಗುತ್ತದೆ ಎಂದು ವಿಪತ್ತು ನಿರ್ವಹಣಾ ಕಾನೂನು ಉಲ್ಲೇಖಿಸಿದೆ. ಸಾಂಕ್ರಾಮಿಕದ ಬೃಹತ್ ಪ್ರಮಾಣದ ಕಾರಣದಿಂದ ಅದನ್ನು ಕೊರೊನಾ ವೈರಸ್ ಸಂಬಂಧಿ ಮರಣಕ್ಕೂ ಅನ್ವಯಿಸುವುದು ಸೂಕ್ತವಾಗಲಾರದು ಎಂದು ಸುಪ್ರೀಂಕೋರ್ಟ್ ಮುಂದೆ ಕೇಂದ್ರ ವಾದಿಸಿದೆ.

ದ್ವಿತೀಯ ಪಿಯುಸಿ ಫಲಿತಾಂಶ| ಗ್ರೇಡ್ ಅಲ್ಲ, ಅಂಕಗಳನ್ನೇ ಪ್ರಕಟಿಸಲಾಗುವುದು: ಪ. ಪೂ. ಶಿಕ್ಷಣ ಇಲಾಖೆ

ಆರೋಗ್ಯ ವೆಚ್ಚದ ಏರಿಕೆ ಹಾಗೂ ಕಡಿಮೆ ತೆರಿಗೆ ಸಂಗ್ರಹಗಳ ಕಾರಣದಿಂದ ರಾಜ್ಯಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಕೋವಿಡ್‌ನಿಂದ ಮೃತಪಟ್ಟ ಸಾವಿರಾರು ರೋಗಿಗಳಿಗೆ ಪರಿಹಾರ ಪಾವತಿಸುವುದು ಅವುಗಳ ಬಜೆಟ್ ಆದಾಯವನ್ನೂ ಮೀರುತ್ತದೆ ಎಂದು ತಿಳಿಸಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಪರಿಹಾರಗಳನ್ನು ಒದಗಿಸಲು ಇರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು ಸಾಂಕ್ರಾಮಿಕದ ನಿರ್ವಹಣೆ ಹಾಗೂ ಆರೋಗ್ಯ ವೆಚ್ಚದ ಮೇಲೆ ಪರಿಣಾಮ ಬೀರಬಹುದು ಮತ್ತು ಒಳಿತಿಗಿಂತಲೂ ಹೆಚ್ಚು ಹಾನಿಯನ್ನೇ ಉಂಟುಮಾಡಬಹುದು ಎಂದಿರುವ ಕೇಂದ್ರ, ಮೃತಪಟ್ಟ ಪ್ರತಿ ವ್ಯಕ್ತಿಯ ಮರಣ ಪ್ರಮಾಣಪತ್ರದಲ್ಲಿ ‘ಕೋವಿಡ್ ಮರಣ’ ಎಂಬುದಾಗಿ ಉಲ್ಲೇಖಿಸಲಾಗುವುದು ಎಂದು ತಿಳಿಸಿದೆ.

LEAVE A REPLY

Please enter your comment!
Please enter your name here