5 ರಾಜ್ಯಗಳಿಗೆ ಪ್ರಾಯೋಗಿಕ ಕೊರೋನಾ ಔಷಧಿ!

0
206
Tap to know MORE!

ಹೊಸದಿಲ್ಲಿ: ಮಹಾರಾಷ್ಟ್ರ ದೆಹಲಿ ಸೇರಿದಂತೆ 5 ರಾಜ್ಯಗಳಿಗೆ ರೆಮ್ ಡಿಸಿವಿಆರ್ ಜೆನೆರಿಕ್ ಆವೃತ್ತಿಯ 20 ಸಾವಿರ ಬಾಟಲ್ ಗಳನ್ನು ಹೈದರಾಬಾದ್ ಮೂಲದ ಹೆಟೆರೊ ಲ್ಯಾಬ್ಸ್ ಲಿಮಿಟೆಡ್ ಕಳುಹಿಸಿದೆ. ಈ ಔಷಧಿಯ ಮೂಲ ತಯಾರಕರು ಅಮೆರಿಕಾ ಮೂಲದ ಬಯೋಫಾರ್ಮಸುಟಿಕಲ್ ಕಂಪೆನಿ ಗಿಲ್ಯಾಡ್ ಸೈನ್ಸ್ ಇಂಕ್ ಆಗಿದೆ

ಪ್ರಾಯೋಗಿಕ ಕೋವಿಡ್ 19 ಔಷಧಿಯಾಗಿರುವ ರೆಮ್ ಡಿಸಿವಿಆರ್ ಜೆನೆರಿಕ್ ಆವೃತ್ತಿಯನ್ನು ಭಾರತದಲ್ಲಿ ತಯಾರಿಸಿ ಮಾರಾಟ ಮಾಡಲು ಹೆಟೆರೊ ಲ್ಯಾಬ್ಸ್ ಗೆ ಅದು ಅನುಮತಿ ನೀಡಿದೆ. 100ಮಿ. ಗ್ರಾ. ಬಾಟಲಿಯ ಬೆಲೆ 5,400 ರೂ. ಗಳಾಗಿದೆ. ಪಿತ್ತ ಜನಕಾಂಗ ಖಾಯಿಲೆ, ಮೂತ್ರಪಿಂಡ ವೈಫಲ್ಯ, ಗರ್ಭಿಣಿಯರು ಮತ್ತು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದನ್ನು ನೀಡಲಾಗುವುದಿಲ್ಲ ಎಂದು ಕಂಪೆನಿ ತಿಳಿಸಿದೆ.

LEAVE A REPLY

Please enter your comment!
Please enter your name here