5 ಲಕ್ಷಕ್ಕೂ ಅಧಿಕ ಭಾರತೀಯರನ್ನು ಮರಳಿಸಿದ ‘ವಂದೇ ಭಾರತ್ ಮಿಷನ್’

0
179
ಸಾಂಧರ್ಭಿಕ ಚಿತ್ರ
Tap to know MORE!

ಕೊರೋನವೈರಸ್ ಸಾಂಕ್ರಾಮಿಕ ರೋಗದ ಭೀತಿಯಿಂದ, ಮೇ 7 ರಂದು ಕೇಂದ್ರ ಸರ್ಕಾರವು “ವಂದೇ ಭಾರತ್” ಮಿಷನ್ ಪ್ರಾರಂಭಿಸಿದ ನಂತರ, 137 ದೇಶಗಳಿಂದ ಐದು ಲಕ್ಷಕ್ಕೂ ಹೆಚ್ಚು ಭಾರತೀಯರು ತಂತಮ್ಮ ಮನೆಗಳಿಗೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.

“ವಿವಿಧ ಕಾರಣದಿಂದ, ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ಮರಳಿ ದೇಶಕ್ಕೆ ಕರೆತರಲು, ಆರಂಭಿಕ ಗುರಿ ಕೇವಲ 2 ಲಕ್ಷ ಇಟ್ಟಿದ್ದೆವು. ಆದರೆ ಈಗ 5 ಲಕ್ಷ ದಾಟಿದ್ದು, ಮಹತ್ವದ ಸಾಧನೆಯಾಗಿದೆ” ಎಂದು ಸಚಿವಾಲಯ ಹೇಳಿದೆ.

ವಿಶೇಷವೆಂದರೆ, ವಂದೇ ಭಾರತ್ ಮಿಷನ್‌ನ ಮೊದಲ ಹಂತವನ್ನು ಮೇ 7 ರಿಂದ 15 ರವರೆಗೆ ಪ್ರಾರಂಭಿಸಲಾಗಿತ್ತು. ಬಳಿಕ, ಎರಡನೇ ಹಂತವನ್ನು ಮೇ 17 ರಿಂದ 22 ರವರೆಗೆ ನಿಗದಿಪಡಿಸಲಾಗಿತ್ತು. ಇದು ಯಶಸ್ವಿಯಾಗಿದ್ದರಿಂದ, ಇದನ್ನು ಜೂನ್ 10 ರವರೆಗೆ ವಿಸ್ತರಿಸಲಾಯಿತು. ಹೆಚ್ಚಿನ ವಿರಾಮ ನೀಡದೆ, ಮೂರನೇ ಹಂತವನ್ನು ಜೂನ್ 11 ರಿಂದ ಜುಲೈ 2 ರವರೆಗೆ ನಿಗದಿಪಡಿಸಲಾಯಿತು.

ವಂದೇ ಭಾರತ್ ಮಿಷನ್ ಅಡಿಯಲ್ಲಿ, ಗರ್ಭಿಣಿಯರು, ವೃದ್ಧರು, ವಿದ್ಯಾರ್ಥಿಗಳು ಮತ್ತು ಇಂತಹ “ಬಲವಾದ ಕಾರಣಗಳನ್ನು” ಹೊಂದಿರುವ ಇತರ ಭಾರತೀಯರನ್ನು ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯ ಮಧ್ಯೆ, ಮೊದಲ ಆದ್ಯತೆ ನೀಡಿ ಮನೆಗೆ ಮರಳಿಸಲಾಗಿದೆ.

LEAVE A REPLY

Please enter your comment!
Please enter your name here