ಧ್ಯೇಯಕ್ಕೆ ಆದ್ಯತೆ ನೀಡುವ ಪ್ರಧಾನಿ

0
315
Tap to know MORE!

“ಜನ ಸೇವೆಯೇ ಜನಾರ್ಧನನ ಸೇವೆ” ಎಂಬ ಧ್ಯೆಯವಿಟ್ಟು ಜೀವನ ಸಾಗಿಸುತಿರುವ ನಾನು ಭಾರತದ ಪ್ರಧಾನಿಯಾದರೆ ಬಡವರನ್ನು , ಆಶಕ್ತರನ್ನು ರಕ್ಷಿಸಿ, ಸಾಮಾನ್ಯ ಜನರೊಂದಿಗೆ ಸಾಮಾನ್ಯಳಾಗಿದ್ದುಕೊಂಡು, ಅಂತರಂಗದಲ್ಲಿ ಜಾಗ್ರತೆ ವಹಿಸಿ, ದೇಶದ ಹಿತರಕ್ಷಣೆಯೊಂದಿಗೆ ಜಗತ್ತಿನ ಸರ್ವ ಮನುಕುಲದೊಂದಿಗೆ ಶಾಂತಿ ಸೌಹಾರ್ದತೆಯ ಹಸ್ತ ಚಾಚಿ ಮನಃ ಪೂರ್ವಕವಾಗಿ ಸೇವೆಗೈದು, ಪ್ರಜೆಗ ಳೊಂದಿಗೆ ಪ್ರೀತಿ ಮಮತೆಯಿಂದ ವ್ಯವಹರಿಸಿ ಜನಸೇವೆಯೇ ನನ್ನ ಕಾಯಕವಾಗಿಕೊಂಡು ಜಾತಿ ಭೇಧ ಪಂಥ ಮರೆತು ಎಲ್ಲರೊಳಗೊಂದಲ ದಾಗು ಮಂಕುತಿಮ್ಮ ಎಂಬ ಕಗ್ಗವನ್ನು ಕಾಯಾ ವಾಚಾ ಮನಸಾ ಕಾರ್ಯರೂಪಕ್ಕಿಳಿಸುತ್ತೆನೆ.

ಸ್ವಚ್ಛತೆಗೆ ಆದ್ಯತೆ, ಪರಿಸರ ಸ್ನೇಹಿಯಾಗಿ, ನಾಗರೀಕರೆಲ್ಲ ಯೋಗ, ಧ್ಯಾನದೊಂದಿಗೆ ತಮ್ಮ ದೇಹ ರಕ್ಷಣೆ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ನಿಗಾ ವಹಿಸಲು ಕ್ರಮ ಕೈಗೊಂಡು ಸರ್ವರೂ ಆರೋಗ್ಯವಂತರಾಗಿರುವಂತೆ ನೋಡಿಕೊಳ್ಳುತ್ತೇನೆ. ಪೋಷಕರು ಮಕ್ಕಳ ಕಡೆ ಗಮನ ಹರಿಸುವ ಯತ್ನ , ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಸಮ ದೃಷ್ಟಿಯಿಂದ ನೋಡಿಕೊಳ್ಳುವೆ, ಭಾರತದ ಜನತೆಯಲ್ಲಿ ತಾರತಮ್ಯವಿಲ್ಲದ ಹಾಗೆ, ಸಾಮರಸ್ಯ ಕಾಪಾಡುವುದು.
ಜನರಲ್ಲಿನ ವೈಮನಸ್ಸು ಹೋಗಲಾಡಿಸಿ, ಪ್ರೀತಿ, ಸ್ನೇಹ, ನೆಲೆಗೊಂಡು ಭಾರತದ ನವೀಕರಣ, ಹೊಸ ರಾಜ್ಯ ಸೃಷ್ಟಿಯಾಗುವಲ್ಲಿ ಸಾಧನೆಗೆ ಮುಂದಾಗಿ, ಯುವಜನತೆಗೆ ಪ್ರೋತ್ಸಾಹ, ಹೆಚ್ಚು ಹೆಚ್ಚು ದೇವಾಲಯ, ಕ್ಷೇತ್ರದ ನಿರ್ಮಾಣ, ಮಕ್ಕಳಿಗೆ ಹೊಸಹೊಸ ತಂತ್ರಜ್ಞಾನಗಳ ಮೂಲಕ ಮಕ್ಕಳ ಏಳಿಗೆಗೆ ಶ್ರಮಿಸಿ, ಕೃಷಿಕನಿಗೆ ಕೃಷಿಗೆ ಪ್ರೋತ್ಸಾಹ, ಸೈನಿಕರು, ಇಂಜಿನಿಯರ್, ಡಾಕ್ಟರ್, ಅದೇ ರೀತಿ ಖಾಸಗಿ ಮತ್ತು ಸರಕಾರಿ ಉದ್ಯೋಗಿ ಇವರೆಲ್ಲರಿಗೂ ಸಮಾನತೆ ಒದಗಿಸಿ, ವೇತನದಲ್ಲೂ ಸಮಾನತೆ, ವಿದ್ಯಾಭ್ಯಾಸಕ್ಕೆ ಸುರಿಸುವ ಹಣ, ವರದಕ್ಷಿಣೆ ಪೆಂಡಂಬೂತಳನ್ನು ಒದ್ದೋಡಿಸಿ, ಉದ್ಯೋಗ ಅವಕಾಶಕ್ಕೆ ಹೆಚ್ಚಿನ ಒತ್ತು ನೀಡಿ, ದೇಶ ರಕ್ಷಣೆ, ಜನ ರಕ್ಷಣೆ ಮಾಡುತ್ತೇನೆ.

ದೇಶದಲ್ಲಿ ಕ್ಯಾನ್ಸರ್ ನಂತೆ ಕಾಡುತ್ತಿರುವ ಮತಿಯ ಕಲಹಗಳು ಉದ್ಭವಿಸದಂತೆ ಕೋಮು ಸೌಹಾರ್ದತೆ ಕಾಪಾಡಿಕೊಂಡು ಸರ್ವರ ರಕ್ಷಣೆ ಮಾಡುವುದು, ಭಾರತೀಯರು ಸ್ವದೇಶದಲ್ಲೇ ಇದ್ದು ಉದ್ಯೋಗ ನಡೆಸಿ ನೆಮ್ಮದಿಯ ಜೀವನ ನಡೆಸುವಂತೆ ಭಾರತದಲ್ಲೇ ಸ್ವದೇಶೀ ವಸ್ತು ತಯಾರಿ, ಅದರ ಬಳಕೆಗೆ ಒತ್ತು ನೀಡುವುದು. ಬೃಹತ್ ಕೈಗಾರಿಕೆಗಳು, ಕಂಪನಿ ಹಾಗೂ ಉದ್ಯಮ, ವ್ಯಾಪಾರ, ವ್ಯವಹಾರಗಳನ್ನು ಭಾರತದಲ್ಲಿ ನಿರ್ಮಾಣವಾಗುವಂತೆ ಪೂರಕ ಕ್ರಮ ಕೈಗೊಳ್ಳುವುದು, ವಿದೇಶಿ ವಸ್ತುಗಳ ಬಳಕೆ ಸಂಪೂರ್ಣ ನಿರ್ಮೂಲನ ಮಾಡಿ, ಸ್ವದೇಶೀ ವಸ್ತುಗಳಿಗೆ ಆದ್ಯತೆ, ದೇಶ ರಕ್ಷಣೆ ಮಾಡುವ ನಮ್ಮೆಲ್ಲರ ಜೀವ ಕಾಯುವ ಯೋಧರಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಅವರ ಕುಟುಂಬದ ಏಳಿಗೆ, ಸಾಮಾಜಿಕ ಜೀವನದತ್ತ ಹೆಚ್ಚಿನ ಗಮನ, ವೈದ್ಯಕೀಯ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಬೆಳವಣಿಗೆ, ದೇಶದಲ್ಲಿ ಕಷ್ಟನಷ್ಟಗಳು ಉದ್ಭವವಾಗದಂತೆ ನೋಡಿಕೊಳ್ಳುವುದು, ಆರ್ಥಿಕ ಪರಿಸ್ಥಿತಿಯಲ್ಲಿ ನೊಂದ ಜನತೆಗೆ ಕೂಡಲೇ ಸ್ಪಂದಿಸಿ ಅವರಿಗೆ ಸಹಾಯ ಹಸ್ತ, ಕಾನೂನು ಉಲ್ಲಂಘನೆ ಆಗದ ಹಾಗೆ, ಪ್ರತಿಯೋರ್ವ ವ್ಯಕ್ತಿಗೂ ನ್ಯಾಯ ದೊರಕುವಂತೆ ನೋಡಿಕೊಳ್ಳುವೆನು.

ಹೆಣ್ಣಿನ ಶೋಷಣೆ, ಅನ್ಯಾಯ, ಅವಮಾನ ಆಗದಂತೆ ಸಂಪೂರ್ಣ ರಕ್ಷಣೆ, ಪ್ರಾಣಿಹಿಂಸೆ ಮಾಡದೆ, ಅಭಿವೃದ್ಧಿಯತ್ತ ಗಮನ (ಮುಖ್ಯವಾಗಿ ಗೋವುಗಳು),ಧಾರ್ಮಿಕ ದತ್ತಿ ಇಲಾಖೆ ಜವಾಬ್ದಾರಿಯುತ ಕೈಂಕರ್ಯದಲ್ಲಿ ತೊಡಗಿ, ಅನ್ಯಾಯ ಸಂಭವಿಸದಂತೆ ಅದರ ಕಡೆ ಗಮನ, ಪ್ರತಿಯೋರ್ವ ವ್ಯಕ್ತಿಗೂ ಒಂದು ಸೂರು, ಉದ್ಯೋಗದಲ್ಲೂ ಸಮಾನತೆ, ಮಧ್ಯಪಾನ ಧೂಮಪಾನ ನಿಷೇಧ, ಪರಿಸರ, ಕುಟುಂಬ ಸಂರಕ್ಷಣೆ ಇವೆಲ್ಲ ನನ್ನ ಧ್ಯೇಯ, ಆದ್ಯತೆಯ ಕೆಲಸ.

ನದಿಯು ಸಮುದ್ರವನ್ನು ಸೇರಿ ಅದರೊಡನೆ ಐಕ್ಯವಾಗುವಂತೆ ನಾನು ನನ್ನ ಅಹಂ ತೊರೆದು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂಬುದನ್ನು ಅಕ್ಷರಸಃ ಅನುಷ್ಠಾನಕ್ಕೆ ತಂದು ಜನ ಸೇವೆ, ನಿಸ್ವಾರ್ಥ ಸೇವೆ ಮಾಡ ಬಯಸುವೆ.

ಶ್ರೀಮತಿ ರೇಖಾ ಸುದೇಶ್ ರಾವ್

LEAVE A REPLY

Please enter your comment!
Please enter your name here