ಬೆಂಗಳೂರು ಗಲಭೆ: ಇನ್ನೂ 60 ಮಂದಿಯ ಬಂಧನ!

0
37
bangalore riots

ಕಳೆದ ಎರಡು ದಿನಗಳ ಹಿಂದಷ್ಟೇ ನಡೆದ ಬೆಂಗಳೂರು ಗಲಭೆ ಸಂಬಂಧಿಸಿದಂತೆ ೬೦ ಜನರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಹೇಳಿದ್ದಾರೆ. ಇದರಿಂದಾಗಿ, ಒಟ್ಟು ಬಂಧನದಲ್ಲಿ ಇರುವವರ ಸಂಖ್ಯೆ ೨೦೬ಕ್ಕೆ ಏರಿದೆ.

ಬಂಧನಕ್ಕೊಳಗಾದವರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಾಗ್ವಾರ ವಾರ್ಡ್‌ನ ಕಾರ್ಪೊರೇಟರ್ ಇರ್ಷಾದ್ ಬೇಗಂ ಅವರ ಪತಿ ಕಲೀಮ್ ಪಾಷಾನೂ ಸೇರಿದ್ದಾರೆ.

ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸೋದರಳಿಯ ನವೀನ್ ಅವರು ಸಾಮಾಜಿಕ ಮಾಧ್ಯಮ ಹಾಕಿದ ಒಂದು ಅವಹೇಳನಕಾರಿ ಪೋಸ್ಟ್‌ ಒಂದಕ್ಕೆ ಪ್ರತಿಕ್ರಿಯೆಯಾಗಿ ಭೂಗಿಲೆದ್ದ ಗಲಭೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಪೋಲೀಸರರೂ ಸೇರಿದಂತೆ, ಹಲವಾರು ಮಂದಿ ಗಾಯಗೊಂಡಿದ್ದಾರೆ. ಆರೋಪಿ ನವೀನ್ ಅವರನ್ನೂ ಬಂಧಿಸಲಾಗಿದೆ.

ಹಿಂಸಾಚಾರದ ಬಗ್ಗೆ ಜಿಲ್ಲಾಧಿಕಾರಿಯೊಬ್ಬರು ತನಿಖೆ ನಡೆಸಲಿದ್ದಾರೆ ಎಂದು ಕರ್ನಾಟಕ ಗೃಹ ಸಚಿವ ಬಸವರಾಜ್ ಬೊಮ್ಮೈ ಹೇಳಿದ್ದಾರೆ.

LEAVE A REPLY

Please enter your comment!
Please enter your name here