ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿರುವ ಕಾರಣ ಸಂಕಷ್ಟದಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವ್ಯಾಪ್ತಿಯಡಿ ಕೆಲಸ ನಿರ್ವಹಿಸುವ ಮದ್ಯಾಹ್ನದ ಬಿಸಿಯೂಟ ಯೋಜನೆಯ ಅಡುಗೆ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ.
ಬಿಸಿಯೂಟ ತಯಾರಕರಿಗೆ ರಾಜ್ಯ ಸರ್ಕಾರವು ಮೂರು ತಿಂಗಳ ಸಂಭಾವನೆ ನೀಡಲು ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. 1,17,999 ಅಡುಗೆ ಸಿಬ್ಬಂದಿಗೆ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳ ಸಂಭಾವನೆ ನೀಡಲು 93.46 ಕೋಟಿ ರೂ. ಬಿಡುಗಡೆ ಮಾಡಿದೆ.
ಶಾಲಾ ಮಕ್ಕಳಿಗೆ ಅಕ್ಕಿ, ಬೇಳೆ ಮತ್ತಿತರೆ ಪಡಿತರವನ್ನು ಶಿಕ್ಷಕರೇ ಮನೆಗೆ ತಲುಪಿಸುತ್ತಿದ್ದರು. ಅಡುಗೆಯವರು ಬದುಕಿದ್ದಾರೋ, ಇಲ್ಲವೋ ಎಂದು ಈವರೆಗೆ ಶಿಕ್ಷಕರಾಗಲಿ, ಇಲಾಖೆ ಅಧಿಕಾರಿಗಳಾಗಲಿ, ಜಿಲ್ಲಾಡಳಿತವಾಗಲಿ ಗಮನ ಹರಿಸಿರಲಿಲ್ಲ. ಸರ್ಕಾರದ ಈ ಹೊಸ ಆದೇಶದಿಂದಾಗಿ ಬಿಸಿಯೂಟ ತಯಾರಕರಿಗೆ ಬಹಳ ಸಂತಸ ತಂದಿದೆ.
[…] ಇದನ್ನೂ ನೋಡಿ : ಬಿಸಿಯೂಟ ತಯಾರಕರಿಗೆ ಸಿಹಿ ಸುದ್ದಿ […]
[…] ಇದನ್ನೂ ನೋಡಿ : ಬಿಸಿಯೂಟ ತಯಾರಕರಿಗೆ ಸಿಹಿ ಸುದ್ದಿ […]