ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಕಲ್ಲರಿಗೆ ಧರ್ಣಪ್ಪ ಗೌಡ ಎಂಬವರಿಗೆ ಸೇರಿದ ಒಂದು ವರ್ಷದ ಕರುವೊಂದು ಕಳೆದ ದಿನ ರಾತ್ರಿ ಚಿರತೆ ದಾಳಿಗೆ ತುತ್ತಾಗಿದೆ. ದನದ ಕೊಟ್ಟಿಗೆಗೆ ಚಿರತೆ ದಾಳಿ ಮಾಡಿದ ಸಂದರ್ಭದಲ್ಲಿ ಜಾನುವಾರುಗಳು ಕೂಗಿಕೊಂಡಾಗ, ಮನೆಮಂದಿ ಎಚ್ಚರಗೊಂಡು ಧಾವಿಸುವಷ್ಟರಲ್ಲಿ ಕರುವನ್ನು ಕೊಂದು ಹಾಕಿದ್ದ ಚಿರತೆ ಕಾಡಿನ ಕಡೆ ಓಡಿದೆ.
ಈ ಪ್ರದೇಶದ ಮನೆಗಳ ಸುತ್ತ-ಮುತ್ತ ಕಳೆದ ಕೆಲವು ದಿನಗಳಿಂದ ಹಲವಾರು ನಾಯಿಗಳು ಕೂಡ ಚಿರತೆ ದಾಳಿಗೆ ಬಲಿಯಾಗಿರುವ ಬಗ್ಗೆ ಅವರು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಚಿರತೆಯ ಹಾವಳಿಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.