ಕೊರೋನಾ ಹಿನ್ನೆಲೆಯಲ್ಲಿ ವಾಹನಗಳ ಡಿಎಲ್ ಸೇರಿದಂತೆ ಇತರೆ ದಾಖಲೆಗಳ ಮಾನ್ಯತಾ ಅವಧಿಯನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ.
ಕೇಂದ್ರ ಸಾರಿಗೆ ಮಂತ್ರಾಲಯ ಈ ಕುರಿತು ಆದೇಶ ಹೊರಡಿಸಿದ್ದು ಎಲ್ಲಾ ಮಾದರಿಯ ವಾಹನಗಳ ಪರವಾನಿಗೆ, ಡಿಎಲ್, ನೋಂದಣಿ ದಾಖಲೆ ಮೊದಲಾದ ದಾಖಲೆಗಳನ್ನು ಡಿಸೆಂಬರ್ 31 ರವರೆಗೆ ಮಾನ್ಯವಾಗಿರುವಂತೆ ವಿಸ್ತರಿಸಲಾಗಿದೆ ಎಂದು ಹೇಳಲಾಗಿದೆ.
ಸೆಪ್ಟಂಬರ್ ಕೊನೆಯವರೆಗೆ ಚಾಲನಾ ಪರವಾನಿಗೆ ಸೇರಿದಂತೆ ಇತರೆ ದಾಖಲೆಗಳ ಮಾನ್ಯತೆ ಅವಧಿಯನ್ನು ವಿಸ್ತರಿಸಲಾಗಿತ್ತು. ಈಗ ಮತ್ತೆ ಮೂರು ತಿಂಗಳು ವಿಸ್ತರಣೆ ಮಾಡಲಾಗಿದೆ.