ವಿಶ್ವಸಂಸ್ಥೆ: ಪಳೆಯುಳಿಕೆ ಇಂಧನಗಳ ಬಳಕೆಯಿಂದ ಆದಷ್ಟು ಶೀಘ್ರವಾಗಿ ಬೃಹತ್ ಪ್ರಮಾಣದಲ್ಲಿ ನವೀಕರಿಸಬಹುದಾದ ಇಂಧನಗಳ ಕಡೆಗೆ ಜಾಗತಿಕ ಪರಿವರ್ತನೆ ಆಗಬೇಕಿದೆ. ಸದ್ಯ ಹವಾಮಾನ ವೈಪರೀತ್ಯದ ಜತೆಗೆ ಕೊರೊನಾ ಸಾಂಕ್ರಾಮಿಕ ಕೂಡ ಜತೆಯಾಗಿ ವಿಶ್ವಾದ್ಯಂತ ಜನಸಾಮಾನ್ಯರ ಆರೋಗ್ಯ ಸುಧಾರಣೆ ಮತ್ತು ರಕ್ಷಣೆ ಅಗ್ರ ಆದ್ಯತೆಯಾಗಿ ಪರಿಣಮಿಸಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೊನಿಯೊ ಗುಟೇರಸ್ ಹೇಳಿದ್ದಾರೆ.
ಹವಾಮಾನ ವೈಪರೀತ್ಯ ನಿಯಂತ್ರಣದಲ್ಲಿ ಪರಿಣಾಮಕಾರಿ ಕ್ರಮವಾಗಿರುವ ಸ್ವಚ್ಛ ಇಂಧನ ಬಳಕೆ ಸೇರಿದಂತೆ ಹಲವು ರೀತಿಯ ಹೆಜ್ಜೆಗಳಿಗೆ ಜಾಗತಿಕವಾಗಿ ಭಾರತ ನೇತೃತ್ವ ವಹಿಸಬೇಕು ಎಂದು ಕರೆ ನೀಡಿದ್ದಾರೆ.
ದಿಟ್ಟ ಮತ್ತು ಮಹತ್ವಾಕಾಂಕ್ಷಿ ನೇತೃತ್ವವನ್ನು ಹವಾಮಾನ ಬದಲಾವಣೆ ತಡೆಗೆ ಭಾರತವೇ ವಹಿಸಿಕೊಳ್ಳಬೇಕು. ಈಗಾಗಲೇ ಹವಾಮಾನ ವೈಪರೀತ್ಯ ಸುಧಾರಣೆ ಕ್ರಮವಾಗಿ ಭಾರತದಲ್ಲಿ ನವೀಕರಿಸಬಹುದಾದ ಇಂಧನ ಬಳಕೆ ಪ್ರಮಾಣ 17 ರಿಂದ 24%ಗೆ ಹೆಚ್ಚಿರುವುದಾಗಿ ತಿಳಿದುಬಂದಿದೆ. ಇದು ಸಂತಸದ ವಿಚಾರ,” ಎಂದು ಗುಟೆರಸ್ ತಿಳಿಸಿದ್ದಾರೆ.