ದೇಶಬಾಂಧವರೇ ಒಂದಾಗೋಣ
ಈ ರಾಷ್ಟ್ರವ ಉಳಿಸಿ ಬೆಳೆಸೋಣ
ಭಾರತಾಂಬೆಯ ಸ್ಮರಿಸೋಣ
ರಾಷ್ಟ್ರಗೀತೆಯ ಹಾಡೋಣ.
ಇದು ನನ್ನ ಭೂಮಿ,ಇದು ನನ್ನ ಜನ
ಎಂದು ಗರ್ವದಿ ಹೇಳಲಿ ನಮ್ಮೀ ಮನ
ನಾವೆಲ್ಲರೂ ಒಂದಾಗೋಣ
ನಮ್ಮ ದೇಶವ ಪ್ರೀತಿಸೋಣ
ನಮ್ಮೆಲ್ಲರನ್ನು ರಕ್ಷಿಸುವ ಜವಾನ್
ನಮ್ಮ ಹಸಿವ ನೀಗಿಸುವ ಕಿಸಾನ್
ಎಲ್ಲರಿಗಿಂತ ಇವರೇ ಮಹಾನ್.
ಭಾರತವೇ ನನ್ನ ಪುಣ್ಯದ ಮಣ್ಣು
ಭಾರತೀಯರ ಮನಸ್ಸು ಹೊನ್ನು
ಭಾರತಾಂಬೆಗೆ ನಾನೆಂದೂ ಶರಣು.
ಓ ಭಾರತಾಂಬೆ ಕೊನೆವರೆಗೂ
ನಿನ್ನ ಮಡಿಲಲ್ಲಿ ಆಡಿ ಬೆಳೆವೆವು
ಒಂದೇ ತಾಯ ಮಕ್ಕಳ ಹಾಗೆ
ಎಂದೆದೂ ಒಂದಾಗಿರುವೆವು.
ಭಾರತೀಯರೇ ಸುಖವಾಗಿರಿ
ಎಲ್ಲರೂ ಒಂದೇ ಮುಷ್ಟಿಯಾಗಿರಿ
ಭಾರತಾಂಬೆಯನು ಸ್ಮರಿಸಿರಿ
ಸ್ವಾತಂತ್ರ್ಯ ಹೋರಾಟಗಾರರಿಗೆ ನಮಿಸಿರಿ.
✍️…ರಕ್ಷಿತ
10 ಸಿ ತರಗತಿ
ಜಿ. ಎಚ್.ಎಸ್.ಎಸ್.ಕುಂಬಳೆ.