ಎಂಡೋ ಸಲ್ಫಾನ್ ಮಾರಕ ರೋಗಕ್ಕೆ ಬಲಿಯಾದ 1 ವರ್ಷದ ಮಗು

0
163
Tap to know MORE!

ಕಾಸರಗೋಡು: ಎಂಡೋ ಸಲ್ಫಾನ್ ಮಾರಕ ರೋಗಕ್ಕೆ ತುತ್ತಾಗಿದ್ದ ಮಗುವೊಂದು ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟ ಘಟನೆ ಬದಿಯಡ್ಕದಲ್ಲಿ ನಡೆದಿದೆ. ಬದಿಯಡ್ಕ ಪಿಲಿತ್ತಡ್ಕ ಕಾಲನಿಯ ಸುಂದರ ರವರ ಪುತ್ರ ಒಂದು ವರ್ಷದ ನವಜೀತ್ ಮೃತಪಟ್ಟ ಮಗು.

ಹುಟ್ಟಿನಿಂದಲೇ ತಲೆ ಬೆಳೆಯುವ ರೋಗ ಕಂಡುಬಂದಿದ್ದ ನವಜೀತ್ ಗೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಗುಣಮುಖವಾಗಲಿಲ್ಲ. ಈ ಹಿನ್ನೆಲೆ ಕಣ್ಣೂರು, ಕಾಸರಗೋಡು ಹಾಗೂ ಮಂಗಳೂರಿನ ಆಸ್ಪತ್ರೆಗಳಲ್ಲೂ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ನಡುವೆ ವೈದ್ಯರ ಸಲಹೆಯಂತೆ ಶಸ್ತ್ರ ಚಿಕಿತ್ಸೆಗೆ ಸಿದ್ಧತೆ ನಡೆಸಲಾಗಿತ್ತು. ಕಳೆದ ಮೂರು ವಾರಗಳಿಂದ ಕಲ್ಲಿಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಮಗುವನ್ನು ದಾಖಲಿಸಲಾಗಿತ್ತು. ಆದರೆ, ದುರಾದೃಷ್ಟವಶಾತ್ ಬುಧವಾರದಂದು ಮಗು ಸಾವನಪ್ಪಿದೆ.

LEAVE A REPLY

Please enter your comment!
Please enter your name here