ಮಂಗಳೂರು: ದ.ಕ. ಜಿಲ್ಲೆಯ ಪ್ರವಾಸೋದ್ಯಮದ ವೈಶಿಷ್ಟವನ್ನು ಬಿಂಬಿಸಲು ವಿಶಿಷ್ಟ ಲಾಂಛನ (ಲೋಗೋ) ವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಆಸಕ್ತ ವಿನ್ಯಾಸಕಾರರು, ಕ್ರಿಯಾತ್ಮಕ ವ್ಯಕ್ತಿಗಳು, ಸಾರ್ವಜನಿಕರು, ಪ್ರವಾಸೋದ್ಯಮ ಪಾಲುದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಲೋಗೋ ವಿನ ಡಿಸೈನ್ ಹಾಗೂ ಧ್ಯೇಯ ವಾಕ್ಯ ಚಿತ್ರಿಸಿ ಅಕ್ಟೋಬರ್ 31ರೊಳಗೆ ಪ್ರವಾಸೋದ್ಯಮ ಇಲಾಖೆ ಕಚೇರಿಗೆ ಅಥವಾ ಇಮೇಲ್: adtourismmangalore@gmail.com ಗೆ ಅರ್ಜಿಯೊಂದಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೆಶಕರು, ಪ್ರವಾಸೋದ್ಯಮ ಇಲಾಖೆ, ದ.ಕ., ನಂ: 02, ಒಂದನೇ ಮಹಡಿ, ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣ, ಲಾಲ್ಬಾಗ್, ಮಂಗಳೂರು ದೂ.ಸಂ.: 0824-2453926ನ್ನು ಸಂಪರ್ಕಿಸಲು ಪ್ರಕಟಣಿಯಲ್ಲಿ ತಿಳಿಸಲಾಗಿದೆ