ಶ್ರೀ ಶಾರದಾ ಮಾತೆ

0
300
Tap to know MORE!

ನಮಸ್ತೆ ಶಾರದಾದೇವಿ
ವೀಣಾ ಪುಸ್ತಕ ಧಾರಿಣಿ
ವಿದ್ಯಾರಂಭಂ ಕರಿಷ್ಯಾಮಿ
ಪ್ರಸನ್ನ ಬವ ಸರ್ವದ

ನಮಸ್ತೆ ಶಾರದಾದೇವಿ
ಕಾಶ್ಮೀರ ಪುರವಾಸಿನಿ
ತ್ವಾಮಹಂ ಪ್ರಾರ್ಥಯೇ ನಿತ್ಯಂ
ವಿದ್ಯಾಬುದ್ಧಿ ಚ ದೇಹಿಮೆ

ಶಾರದಾದೇವಿ ವಾಗ್ದೇವತೆ, ವಿದ್ಯಾದ್ಧಿ ದೇವತೆ, ಜ್ಞಾನದೇವತೆ, ತ್ರಿಲೋಕ ಸುಂದರಿ, ವೀಣಾಪಾಣಿ ಹೀಗೆ ಹಲವಾರು ಸ್ವರೂಪಗಳಲ್ಲಿ ಪರಿಚಿತಳು. ಶಾರದಾದೇವಿ ಹಿಂದೂಧರ್ಮದಲ್ಲಿ ಜ್ಞಾನ ಮತ್ತು ಕಲೆಗಳ ಬಂಡಾರ ಅಧಿದೇವತೆ ಬ್ರಹ್ಮನ ರಾಣಿ ಹಾಗೂ ಶ್ವೇತಾ ವಸ್ತ್ರದಾರಿಯೆಂದು ಪ್ರಸಿದ್ಧಿಯಾಗಿ ನಾವೆಲ್ಲರೂ ಶ್ರೀ ಶಾರದೆಯನ್ನು ಆರಾಧಿಸಿಕೊಂಡು ಬರುತ್ತಿದ್ದೇವೆ.

ಶಾರದಾಂಬೆಗೆ ಪ್ರಸಿದ್ಧಿ ಪಡೆದ ಒಂದು ದೇವಾಲಯ ಅಥವಾ ಕ್ಷೇತ್ರವೆಂದರೆ ಅದು ಶೃಂಗೇರಿ ಮಠ. ಶೃಂಗೇರಿ ಶಾರದಾಪೀಠ ಎಂಟನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದು. ಆದಿಶಂಕರರು ಸ್ಥಾಪಿಸಿದ ನಾಲ್ಕು ಪ್ರಮುಖ ಪೀಠಗಳಲ್ಲಿ ಇದನ್ನು ದಕ್ಷಿಣಮ್ಯಾಯ ಪೀಠ
ವೆನ್ನುತ್ತಾರೆ. ಶೃಂಗೇರಿಯ ಮಠವು ಯಜುರ್ವೇದದ ಉಸ್ತುವಾರಿ ಹೊಂದಿದೆ. ನವರಾತ್ರಿ ಸಂದರ್ಭದಲ್ಲಿ ಶಾರದಾ ದೇವಿಗೆ ಚಂಡಿಕಾಹವನ, ರಥೋತ್ಸವ, ಕುಂಕುಮಾರ್ಚನೆ, ಚಿನ್ನದರಥ ಸೇವೆ ಮುಂತಾದ ಸೇವೆಗಳು ನಡೆಯುತ್ತವೆ.

ಶೃಂಗೇರಿ ತಾಯಿ ಶಾರದೆ ಯನು ಶೃಂಗೇರಿಯಲ್ಲಿ ಪ್ರತಿಪಾದಿಸಿದ ಮಠದ ಐತಿಹಾಸಿಕತೆಯಲ್ಲಿದೆ. ಒಮ್ಮೆ ತುಂಗೆಯ ತಟಕ್ಕೆ ಶಂಕರಾಚಾರ್ಯರು ಬಂದಾಗ ಜೋರಾಗಿ ಬಿಸಿಲು ಇತ್ತು. ಈ ಸಂದರ್ಭದಲ್ಲಿ ಹಾವೊಂದು ಹೆಡೆಬಿಚ್ಚಿ ಕಪ್ಪೆಯೊಂದಕ್ಕೆ ರಕ್ಷಣೆ ನೀಡುತ್ತಿದ್ದಂತೆ ಶತ್ರುಗಳು ಮಿತ್ರರಾಗಿ ಸಹಕಾರಕ್ಕೆ ನಿಂತ ಈ ಸ್ಥಳದಲ್ಲಿ ಅಭೂತಪೂರ್ವವಾದ ಶಕ್ತಿ ಇದೆ ಎಂಬುದನ್ನು ಮನಗಂಡ ಆಚಾರ್ಯರು ಈ ಪ್ರದೇಶವನ್ನು ಪವಿತ್ರ ಪುಣ್ಯಕ್ಷೇತ್ರ ಮಾಡಿದರು ಎಂದು ಹೇಳಲಾಗುತ್ತಿದೆ.

ಶ್ರೀ ಬಿಕ್ಷು ಲಕ್ಷ್ಮಣಾನಂದ ಸ್ವಾಮೀಜಿಯವರು ರಾಮಕ್ಷತ್ರಿಯ ಗುರುಗಳಾದ ಇವರು ಶ್ರೀಶಾರದಾ ಉಪಾಸಕರಾಗಿದ್ದರು. ಸ್ವಾಮೀಜಿಯವರು ತನ್ನ ಇತರ ಸಹಪಾಠಿಗಳ ಜೊತೆ ಸೇರಿ ಸಾವಿರದ ಒಂಬೈನೂರ ಎಂಟರಲ್ಲಿ ಮದರಾಸಿನ( ಬ್ರಾಡ್ ವೆ) Broad way ಎಂಬಲ್ಲಿ ಸರಸ್ವತಿ ಸಂಘ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಶಾರದೆಯ ಇನ್ನೊಂದು ನಾಮದೇಯ ಸರಸ್ವತಿ ಎಂದಾಗಿದೆ ಸ್ವಾಮೀಜಿಯವರಿಂದ ಸ್ಥಾಪಿಸಲ್ಪಟ್ಟ ಶ್ರೀಶಾರದಾ ಬಜನಾ ಶ್ರಮ ಅಮೃತಮಹೋತ್ಸವ (2007) ಸಂಧರ್ಭದಲ್ಲಿ ಸ್ವಾಮೀಜಿಯವರ ಮೂರ್ತಿ ನಾಗರ ಕಟ್ಟೆ ಯಲ್ಲಿ ಸ್ಥಾಪಿಸಲಾಗಿದೆ. ಅದೇ ರೀತಿ ಶಾರದ ಭಜನಾ ಮಂದಿರ ತ ಲಾಣಿ, ಬೇಕಲ ಇಲ್ಲು ರಾಮ ಕ್ಷತ್ರಿಯ ಯರ ( koteyavara) ಶಾರದ ದೇವಿ ಮಂದಿರ ಪ್ರಸಿದ್ದಿ ಪಡೆದಿದೆ.

ಭಾರತೀಯ ಸಂಸ್ಕೃತಿಯಲ್ಲಿ ಸರಸ್ವತಿಯ ಪಾತ್ರ ಅತ್ಯಂತ ಮಹತ್ತರವಾದುದು. ನದಿ ದೇವತೆ, ಶಾರದೆ, ವಾಗ್ದೇವತೆ, ವಿದ್ಯಾಧಿದೇವತೆ, ಜ್ಞಾನದೇವತೆ ಹೀಗೂ ಹಲವಾರು ಸ್ವರೂಪಗಳಲ್ಲಿ ಸರಸ್ವತಿಯು ಪರಿಚಿತಳು. ಬ್ರಹ್ಮನ ಮಗಳೆಂದೂ, ಬ್ರಹ್ಮನ ಸೃಷ್ಟಿಯಾದ ವೇದಗಳಿಗೆ ಅಧಿದೇವತೆಯೆಂದೂ, ವೇದಮಾತೆಯೆಂದೂ ಸರಸ್ವತಿಯನ್ನು ಸ್ತುತಿಸಲಾಗಿದೆ. ಬ್ರಹ್ಮನ ಮಗಳು ಎಂಬ ಪರಿಕಲ್ಪನೆಯನ್ನು ಮೀರಿ, ಸರಸ್ವತಿಗೆ ‘ಬ್ರಹ್ಮನ ಶಕ್ತಿ’ ಎಂಬ ಸ್ವರೂಪವೂ ಬೆಳೆದು ಬಂದಿದೆ. ‘ಸರಸ್ವತಿ’ ಎಂದರೆ ಸಾಮಾನ್ಯವಾಗಿ ನಮ್ಮ ಕಣ್ಣಮುಂದೆ ನಿಲ್ಲುವ ರೂಪವೆಂದರೆ, ಚತುರ್ಭುಜಗಳು, ಎರಡು ಕೈಗಳಲ್ಲಿ ವೀಣೆ, ಇನ್ನೊಂದರಲ್ಲಿ ಅಕ್ಷಮಾಲೆ, ನಾಲ್ಕನೆಯದರಲ್ಲಿ ಪುಸ್ತಕ. ಬಿಳಿ ತಾವರೆಯ ಮೇಲೆ ಅಥವ ಬಂಡೆಯ ಮೇಲೆ ಆಸೀನಳಾಗಿರುವ ಶ್ವೇತವಸ್ತ್ರ ಧಾರಿಣಿ, ಶುಭ್ರವರ್ಣದ ಧವಳಕೀರ್ತಿಯ ಸರಸ್ವತಿ ಚಿತ್ರ.

ದೇಶದೆಲ್ಲೆಡೆ ಅತ್ಯುತ್ಸಾಹದಿಂದ ಆಚರಿಸಲ್ಪಡುವ ನವರಾತ್ರಿ ಮಹೋತ್ಸವದಲ್ಲಿ ಶ್ರೀ ಶಾರದಾ ಮಾತೆಯ ಉತ್ಸವಕ್ಕೆ ಎಲ್ಲಿಲ್ಲದ ಮಹತ್ವವಿದೆ. ಊರು ಕೇರಿಗಳಲ್ಲಿ ಶಾರದಾ ಮಹೋತ್ಸವವನ್ನು ಆಚರಿಸಿ ಜನರು ಸಂಭ್ರಮ ಪಡುವುದನ್ನು ನಾವು ಕಾಣುತ್ತೇವೆ. ಮೂಲಾ ನಕ್ಷತ್ರದಲ್ಲಿ ಶ್ರೀ ಶಾರದೆಯನ್ನು ಪ್ರತಿಷ್ಠಾಪಿಸಿ ಶ್ರವಣ ನಕ್ಷತ್ರದಲ್ಲಿ ವಿಸರ್ಜನೆಗೆಗೈದು ದಿವ್ಯ ಭವ್ಯ ಮೆರವಣಿಗೆ ಮೂಲಕ ಸಾಗುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲೂ ವಿಶೇಷವಾಗಿ ಮಂಗಳೂರು ದಸರಾ, ಕಾರ್ ಸ್ಟ್ರೀಟ್ ಶ್ರೀ ವೆಂಕಟ್ರಮಣ ದೇವಳದಲ್ಲಿ ಸಂಭ್ರಮದ ಮಹೋತ್ಸವವನ್ನು ಕಣ್ತುಂಬಿಕೊಳ್ಳುವ ಕ್ಷಣ ಅವಿಸ್ಮರಣೀಯ. ವಿವಿಧ ವೇಷ ಭೂಷಣಗಳು, ಸ್ಥಭ್ದ ಚಿತ್ರಗಳು, ವಾದ್ಯ ತಾಳ ಮೇಳಗಳಿಂದ ಕೂಡಿದ ವೈಭವದ ಶೋಭಾಯಾತ್ರೆ ಸಹಸ್ರಾರು ಭಕ್ತಾದಿಗಳನ್ನು ವರ್ಷ ವರ್ಷವೂ ಕೈ ಬೀಸಿ ಕರೆಯುತ್ತದೆ. ಇದೇ ನವರಾತ್ರಿ ಸಂಧರ್ಭದಲ್ಲಿ ಮಕ್ಕಳಿಗೆ ವಿದ್ಯಾರಂಭ ಶ್ರೀ ಮಾತೆಯ ಸನ್ನಿಧಿಯಲ್ಲಿ ಮಾಡಿ ಪಾಲಕರು ಕೃತಾರ್ತೆಯನ್ನು ಕಾಣುತ್ತಾರೆ.

ಆದ್ದರಿಂದಲೇ ಶ್ರೀ ಶಾರದಾ ಮಾತೆಯನ್ನು ಭಕ್ತ ಕುಲ ಕೋಟಿಗಳು ” ನಲಿದಾಡೇ ಎನ್ನ ನಾಲಿಗೆ ಮೇಲೆ ಶ್ರೀ ಶಾರದ ….. ಶಾರದೆ ದಯೆ ತೋರಿದೆ ನಿನ್ನ ಕರುಣೆಯ ಕಡಲಲ್ಲಿ ಮುತ್ತದೆ…. ನಾ ಮುತ್ತಾದೇ……” ಎಂತ ಚೆಂದ ಎಂತ ಅಂದ ಶಾರದಮ್ಮ…”,”…. ಎಂಬಿತ್ಯಾದಿ ಭಜನೆಯ ಹಾಡುಗಳಿಂದ ಶ್ರೀ ಶಾರದೆಯನ್ನು ವರ್ಣನಾತೀತವಾದ ಶಬ್ಧಗಳಿಂದ ಹಾಡಿ ಹೊಗಳಲು ಕಾರಣವಾಗಿದೆ.

ಶಾರದ ಮಾತೆ ಕರುಣೆಯ ಸಾಗರ, ಮತಿಯನ್ನು ಕರುಣಿಸುವಾಕೆ. ಮುಖ್ಯವಾಗಿ ಭಜನೆಯ ಮೂಲಕ ನನ್ನನ್ನ ಬೆಳಕಿಗೆ ತಂದಿರುವುದೇ ಶ್ರೀ ಶಾರದಾ ಮಾತೆಯ ಪೂರ್ಣ ಕೃಪಾಕಟಾಕ್ಷಗಳಿಂದಲೇ ಎಂಬುದರಲ್ಲಿ ಎರಡು ಮಾತಿಲ್ಲ.

ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ” ಗುರುವಂದನಾ” ಕಾರ್ಯಕ್ರಮದಲ್ಲೂ ಶ್ರೀ ಶಾರದಾ ಮಾತೆ ಸನ್ನಿಧಿ ಶೃಂಗೇರಿಯಲ್ಲಿ, ಕ್ಷತ್ರಿಯ ಸಮಾಜ ಬಾಂಧವರಿಂದ ಗುರು ಪಾದಪೂಜೆ ಕೈಕಂಕರ್ಯದಲ್ಲಿ ಸಮಾಜ ಬಾಂಧವರು ಪಾಲ್ಗೊಂಡು, ಗುರುಗಳ ಆಶೀರ್ವಾದ ಹಾಗೂ ಶ್ರೀ ಶಾರದಾ ಮಾತೆ ಅನುಗ್ರಹ ಪಡೆಯುವುದು ರಾಮ ಕ್ಷತ್ರಿಯ ಕುಲದ ಸದಸ್ಯರ ಸಂಪ್ರದಾಯವಾಗಿದೆ. ಶೃಂಗೇರಿ ಶ್ರೀ ಶಾರದ ಮಾತೆ ಸರ್ವರಿಗೂ ಒಳಿತನ್ನುಂಟು ಮಾಡಲಿ.

ಸರ್ವೇ ಜನಾಃ ಸುಖಿನೋ ಭವಂತು, ಲೋಕ ಸಮಸ್ತ ಸುಖಿನೋ ಭವಂತು.

ಶ್ರೀಮತಿ ರೇಖಾ ಸುದೇಶ್ ರಾವ್
 ಸುರತ್ಕಲ್

LEAVE A REPLY

Please enter your comment!
Please enter your name here