ರಾಜ್ಯ ಸರ್ಕಾರದಿಂದ ‘ದಸರಾ, ದೀಪಾವಳಿ’ ಹಬ್ಬ ಆಚರಣೆಗೆ ಮಾರ್ಗಸೂಚಿ ರಿಲೀಸ್

0
177
Tap to know MORE!

ಬೆಂಗಳೂರು : ರಾಜ್ಯದಲ್ಲಿ ದಿನಾಂಕ 17-10-2020ರ ಶನಿವಾರದಿಂದ ದಿನಾಂಕ 26-10-2020ರ ಮಂಗಳವಾರದವರೆಗೆ ಒಟ್ಟು 9 ದಿನಗಳ ಕಾಲ ನಾಡ ಹಬ್ಬ ದಸರಾವನ್ನು ಆಚರಿಸಲಾಗಿತ್ತಿದೆ. ದೀಪಾವಳಿ ಹಬ್ಬವನ್ನು ದಿನಾಂಕ 14-11-2020ರಿಂದ ದಿನಾಂಕ 17-11-2020ರವರೆಗೆ ಆಚರಣೆ ಮಾಡಲಾಗುತ್ತಿದೆ. ನವೆಂಬರ್ 14 ನರಕ ಚತುರ್ದಶಿ, ನ.15ರಂದು ದೀಪಾವಳಿ ಮತ್ತು ನ.16ರಂದು ಬಲಿಪಾಡ್ಯಮಿ ಆಚರಿಸಲಾಗುತ್ತದೆ. ಇಂತಹ ನಾಡ ಹಬ್ಬ ದಸರಾ ಹಾಗೂ ದೀಪಾವಳಿ ಹಬ್ಬಗಳನ್ನು ಕೊರೋನಾ ಸೋಂಕಿನ ಸಂದರ್ಭದಲ್ಲಿ ಸರಳ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಜೊತೆ ಜೊತೆಗೆ ಕಡ್ಡಾಯವಾಗಿ ಕೊರೋನಾ ಸೋಂಕಿನ ನಿಯಂತ್ರಣ ಕ್ರಮಗಳನ್ನು ಪಾಲಿಸುವಂತೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಈ ಕುರಿತಂತೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ದಸರಾ ಹಬ್ಬ ಆಚರಣೆಗೆ ಅನುಮತಿ ನೀಡಿದ್ದು, ಅದರೊಂದಿಗೆ ಕೊರೋನಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ದಸರಾ ಹಬ್ಬ ಆಚರಣೆ ಸಂದರ್ಭದಲ್ಲಿ, ದೀಪಾವಳಿ ಹಬ್ಬ ಆಚರಣೆಯ ವೇಳೆಯಲ್ಲಿ ಪಾಲಿಸಬೇಕಾದಂತ ಕೊರೋನಾ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಿದ್ದಾರೆ.

ರಾಜ್ಯಾದ್ಯಂತ ಮುಂಬರಲಿರುವ ದಸರಾ ಹಾಗೂ ದೀಪಾವಳಿ ಸರಳ ರೀತಿಯಲ್ಲಿ ಆಚರಿಸಲು ಸೂಚಿಸಿರುವ ಅವರು, ಕೊರೋನಾ ಮಾರ್ಗಸೂಚಿ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿನೊಂದಿಗೆ, ಅನುಮತಿಸಿದೆ. ಈ ಮಾರ್ಗಸೂಚಿಗಳ್ನು ಮಹಾನಗರ ಪಾಲಿಕೆಗಳ ಆಯುಕ್ತರು, ಪೊಲೀಸ್ ಆಯುಕ್ತರು, ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಇತರೆ ಇಲಾಖಾ ಮುಖ್ಯಸ್ಥರುಗಳು, ಇಲಾಖಾ ಪ್ರಾಧಿಕಾರಗಳು ಕಟ್ಟುನಿಟ್ಟಾಗಿ ಅನುಷ್ಠಾನಗಳಿಸುವಂತೆ ಸೂಚಿಸಿದ್ದಾರೆ.

ಪಾಲಿಸಬೇಕಾದ ಮಾರ್ಗಸೂಚಿ ನಿಯಮಗಳು

-ಪ್ರಸಕ್ತ ವರ್ಷದ ನಾಡ ಹಬ್ಬ ದಸರಾವನ್ನು ಅತ್ಯಂತ ಸರಳವಾಗಿ ಆಚರಿಸಿ

-ಮೈಸೂರು ಹೊರತಾಗಿ ರಾಜ್ಯದ ಇತರೆಡೆ ನಡೆಸಲಾಗುವ ದಸರಾ ಆಚರಣೆಯ ಕಾರ್ಯಕ್ರಮಗಳಲ್ಲಿ 10ಕ್ಕಿಂತ ಹೆಚ್ಚು ಜನರು ಒಮ್ಮೆಲೆ ಸೇರುವಂತಿಲ್ಲ. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು

– ನಾಡಹಬ್ಬ ದಸರಾ ಆಚರಣೆಯಲ್ಲಿ ಸಾಮಾಜಿಕ ಅಂತರವಿಲ್ಲದೇ ನಡೆಸುವ ಕಾರ್ಯಕ್ರಮ ನಿಷೇಧ

– ಕೋವಿಡ್-19 ನಿಯಂತ್ರ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು

– ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ದಸರಾ ಹಬ್ಬ ಆಚರಿಸಬೇಕು

ಮೈಸೂರು ದಸರಾ ಕುರಿತು ಮಾರ್ಗಸೂಚಿ

ಅರಮನೆಯ ಆವರಣದಲ್ಲಿ ನಡೆಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮತ್ತು ಸ್ಯಾನಿಟೈಸರ್ ಗಳನ್ನು ಕಡ್ಡಾಯವಾಗಿ ಬಳಸಬೇಕು.

ಈ ಬಾರಿಯ ದಸರಾ ಹಬ್ಬ ಆಚರಣೆಯನ್ನು ದೃಶ್ಯ ಸಂವಹನ ಮೂಲಕ, ಸಾರ್ವಜನಿಕರು ವೀಕ್ಷಿಸಲು ಅವಕಾಶ ಮಾಡಬೇಕು. ಈ ಸಮಾರಂಭಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದೆ.

ಮೈಸೂರು ದಸರಾ ಹಬ್ಬದ ಆಚರಣೆಗೆ ವ್ಯಕ್ತಿಗಳ ಪಾಲ್ಗೊಳ್ಳುವಿಕೆಯ ಸಂಖ್ಯೆಯಲ್ಲಿ ಸೀಮಿತಗೊಳಿಸಿದ್ದು, ಕಡ್ಡಾಯವಾಗಿ ಈ ಕೆಳಗಿನಷ್ಟು ಜನರು ಪಾಲ್ಗೊಳ್ಳಬೇಕು.

-ಚಾಮುಂಡಿ ಬೆಟ್ಟದಲ್ಲಿ – 200 ಜನರಿಗೆ ಮಾತ್ರ

-ಮೈಸೂರು ಅರಮನೆ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 50 ಜನರು ಮೀರದಂತೆ ಜನರು ಭಾಗವಹಿಸಬೇಕು

-ಜಂಬೂ ಸವಾರಿಯಲ್ಲಿ 300 ಜನರಿಗೆ ಮಾತ್ರ ಪ್ರವೇಶ

ದೀಪಾವಳಿ ಹಬ್ಬವನ್ನು ದಿನಾಂಕ 14-11-2020ರಿಂದ ದಿನಾಂಕ 17-11-2020ರವರೆಗೆ ಆಚರಣೆ ಮಾಡಲಾಗುತ್ತಿದೆ. ನವೆಂಬರ್ 14 ನರಕ ಚತುರ್ದಶಿ, ನ.15ರಂದು ದೀಪಾವಳಿ ಮತ್ತು ನ.16ರಂದು ಬಲಿಪಾಡ್ಯಮಿ ಆಚರಿಸಲಾಗುತ್ತದೆ. ಇಂತಹ ಹಬ್ಬದಂದು ಪಟಾಕಿ, ಸಿಡಿಮದ್ದುಗಳನ್ನು ಮಾರಾಟ ಮಾಡುವುದು ಮತ್ತು ಸಿಡಿಸುವ ಕುರಿತಂತೆ ಈ ಕೆಳಗಿನಂತೆ ಮಾರ್ಗಸೂಚಿ ನಿಯಮಗಳನ್ನು ಸರ್ಕಾರ ಸೂಚಿಸಿದೆ.

ದೀಪಾವಳಿ ಹಬ್ಬ ಆಚರಣೆಯ ಸಂದರ್ಭದಲ್ಲಿ ಪಾಲಿಸಬೇಕಾದಂತ ಮಾರ್ಗಸೂಚಿ ಕ್ರಮಗಳು

-ಪಟಾಕಿಯನ್ನು ಸಂಬಂಧ ಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಅಧಿಕೃತವಾಗಿ ಪರವಾನಗಿಯನ್ನು ಪಡೆದು, ಮಾರಾಟ ಮಾಡಬೇಕು.

-ಪಟಾಕಿ ಮಾರಾಟದ ಮಳಿಗೆಗಳನ್ನು ದಿನಾಂಕ 01-11-2020ರಿಂದ 17-11-2020ರವರೆಗೆ ಮಾತ್ರ ತೆರೆದಿರಬೇಕು.

-ಪಟಾಕಿ ಮಾರಾಟಕ್ಕಾಗಿ ಪರವಾನಿಗೆ ಪಡೆಯದಂತವರು,  ಇಲಾಖೆ ಪ್ರಾಧಿಕಾರದಿಂದ ಸೂಚಿಸಿದಂತ ಸ್ಥಳದಲ್ಲಿಯೇ ತಾತ್ಕಾಲಿಕ ಅಂಗಡಿಯನ್ನು ತೆರೆಯಬೇಕು.

-ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲು ಸಂಬಂಧಿಸಿದ ಇಲಾಖೆ, ಪ್ರಾಧಿಕಾರಗಳು ಅನುಮತಿಸುವುದು

-ಒಂದು ಪಟಾಕಿ ಅಂಗಡಿಯಿಂದ ಮತ್ತೊಂದು ಮಳಿಗೆಗೆ 6 ಮೀಟರ್ ಅಂತರವಿರಬೇಕು

-ಪ್ರತಿದಿನ ಮಾರಾಟ ಮಳಿಗೆಯ ಸುತ್ತಾ ಮುತ್ತ ಸ್ಯಾನಿಟೈಸೇಷನ್ ಮಾಡಬೇಕು.

-ಪಟಾಕಿ ಖರೀದಿಸುವವರು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಬೇಕು

-ಪಟಾಕಿ ಖರೀದಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಜನದಟ್ಟಣೆಯಾಗದಂತೆ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳಬೇಕು

LEAVE A REPLY

Please enter your comment!
Please enter your name here