ಮುಜಾಫರ್ಪುರದಲ್ಲಿ ಒಂದು ಆಪಾದಿತ ಹಗರಣ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಹೆಣ್ಣು ಮಗುವಿಗೆ ಜನ್ಮ ನೀಡಲು ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಕೆಲವು ಹಳ್ಳಿಗಳಲ್ಲಿ ಹೆಣ್ಣು ಮಕ್ಕಳನ್ನು ನಿರಾಕರಿಸುತ್ತಿರುವ ಬಗ್ಗೆ ಸಿಕ್ಕ ದಾಖಲೆಗಳನ್ನು ಗಮನಿಸಿ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ ಅದನ್ನು ದುರ್ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಧಿಕೃತ ದಾಖಲೆಗಳ ಪ್ರಕಾರ, 65 ವರ್ಷದ ಮಹಿಳೆಯೊಬ್ಬಳು 14 ತಿಂಗಳಲ್ಲಿ ಎಂಟು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದಕ್ಕಾಗಿ ಅವಳ ಖಾತೆಗೆ ಹಣವೂ ವರ್ಗಾವಣೆಯಾಗಿದೆ.
“ಜನನಿ ಸುರಕ್ಷಾ ಯೋಜನೆ (ಜೆಎಸ್ವೈ) ಅಡಿಯಲ್ಲಿ ನಿರ್ದಿಷ್ಟ ಮೊತ್ತವನ್ನು ಕೆಲವು ವೃದ್ಧ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷದಲ್ಲಿ ಹಲವು ಬಾರಿ ಜಮಾ ಮಾಡಲಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ನಾವು ಈಗಾಗಲೇ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿದ್ದೇವೆ. ಅದು ಎರಡು ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸುತ್ತದೆ. ಈ ಹಗರಣ ನಿಜವಾಗಿದ್ದರೆ, ನಾವು ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಮುಜಾಫರ್ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಚಂದ್ರಶೇಖರ್ ಸಿಂಗ್ ಹೇಳಿದ್ದಾರೆ.
ಜೆಎಸ್ವೈ ಕೇಂದ್ರ-ಪ್ರಾಯೋಜಿತ ಯೋಜನೆಯಾಗಿದ್ದು, ಇದು ಹೆಣ್ಣು ಹೆತ್ತ ತಾಯಂದಿಯರಿಗೆ ಧನ ಸಹಾಯ ಮತ್ತು ನಂತರದ ದಿನೂ ಆರೈಕೆಯೊಂದಿಗೆ ಸಂಯೋಜಿಸುತ್ತದೆ. ಈ ಯೋಜನೆಯ ಯಶಸ್ಸಿಗೆ, ಸರ್ಕಾರ ಮತ್ತು ಗರ್ಭಿಣಿ ಮಹಿಳೆಯರ ನಡುವಿನ ಪರಿಣಾಮಕಾರಿ ಕೊಂಡಿಯಾಗಿ, ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರನ್ನು (ಆಶಾ) ಗುರುತಿಸಿದೆ.