ಉಪ್ಪಳ: ಕಾವ್ಯಗಳು ಜನಸಾಮಾನ್ಯರ ಧ್ವನಿಯಾಗಿ ಅಂತರಂಗದಲ್ಲಿ ಹುಟ್ಟಿ ಅಕ್ಷರಗಳಲ್ಲಿ ದಾಖಲಾಗುತ್ತದೆ. ಕವಿತೆಯನ್ನು ಕೇಳಿ ಅನುಭವಿಸುವುದು ಮುಖ್ಯ. ಕವಿತೆಗಳು ಅಂತರಾತ್ಮದ ಭಾವನೆಯಾಗಿ ಮೂಡಿಬರುತ್ತದೆ ಎಂದು ಗಡಿನಾಡಿನ ಹೆಸರಾಂತ ಹಿರಿಯ ಸಾಹಿತಿ ಶ್ರೀ ರಾಧಾಕೃಷ್ಣ ಉಳಿಯತ್ತಡ್ಕ ಹೇಳಿದರು.
ಕವಿ ಇಂಚರ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಬೇಕೂರಿನ ಸುಭಾಷ್ ನಗರದಲ್ಲಿ ನಡೆದ ಕವಿಗೋಷ್ಠಿ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪಂಚಾಯತ್ ಸದಸ್ಯರಾದ ಉಮೇಶ್ ಶೆಟ್ಟಿ ಬೊಳ್ಳಾರು ಸಮಾರಂಭದ ಅಧ್ಯಕ್ಷತೆ ವಹಿಸಿದರು. ದಾಮೋದರ ಬೊಳ್ಳಾರು ಅತಿಥಿಗಳಾಗಿದ್ದರು.
ಹಿರಿಯ ಯಕ್ಷಗಾನ ಕಲಾವಿದರಾದ ಯಕ್ಷಗುರು ಶ್ರೀಯುತ ರಾಮ ಸಾಲ್ಯಾನ್ ಮಂಗಲ್ಪಾಡಿ ಮತ್ತು ವಿಶಿಷ್ಟ ಪ್ರತಿಭೆ ಕುಮಾರಿ ಭಾಗ್ಯಶ್ರೀ ಇವರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಶಿಕ್ಷಕಿ ಸಾಹಿತಿ ವನಿತಾ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕವಿ ಇಂಚರದ ಸಂಸ್ಥಾಪನಾ ಅಧ್ಯಕ್ಷರಾದ ಶ್ರೀಯುತ ಬಾಲಕೃಷ್ಣ ಬೇಕೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಕುಮಾರಿ ನೇಹಾ ಪ್ರಾರ್ಥನೆ ಹಾಡಿದರು. ಉದಯೋನ್ಮುಖ ಸಾಹಿತಿ ರಿತೇಶ್ ಕಿರಣ್ ಕಾಟುಕುಕ್ಕೆ ಸ್ವಾಗತಿಸಿದರು. ಸುರೇಶ್ ಕುಮಾರ್ ಮಂಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸುಜಿತ್ ಕುಮಾರ್ ಬೇಕೂರು ಹಾಗೂ ಕುಮಾರಿ ಪ್ರಿಯ ಬಾಯಾರ್ ಸನ್ಮಾನ ಪತ್ರ ವಾಚಿಸಿದರು, ನಾರಾಯಣ ಸುಭಾಷ್ ನಗರ್ ವಂದಿಸಿದರು.