ನಗದು ಠೇವಣಿ, ಹಿಂತೆಗೆತಕ್ಕೆ ಶುಲ್ಕ‌ -‌ ಜನಾಕ್ರೋಶಕ್ಕೆ ಮಣಿದು ನಿರ್ಧಾರ ಹಿಂಪಡೆದ ಬ್ಯಾಂಕ್!

0
56

ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ಸಾರ್ವಜನಿಕರಿಂದ ಎದುರಾದ ಬಂದ ಭಾರೀ ಆಕ್ರೋಶದ ಹಿನ್ನೆಲೆಯಲ್ಲಿ, ನಗದು ಠೇವಣಿ ಮತ್ತು ಖಾತೆಯಿಂದ ಹಣವನ್ನು ಹಿಂಪಡೆಯಲು ಇದ್ದ ಮಿತಿ ಹಾಗೂ ಅದಕ್ಕೆ ಶುಲ್ಕ ವಿಧಿಸುವ ನಿರ್ಧಾರವನ್ನು ಹಿಂತೆಗೆದುಕೊಂಡಿದೆ.

ಬ್ಯಾಂಕುಗಳಲ್ಲಿ ಠೇವಣಿಯಂತಹ ಮೂಲ ವಹಿವಾಟುಗಳಿಗೆ ಮಿತಿಗಳನ್ನು ವಿಧಿಸಿ, ಅದನ್ನು ಮೀರಿದರೆ ಗ್ರಾಹಕರಿಗೆ ಶುಲ್ಕ ವಿಧಿಸಲು ಪ್ರಾರಂಭಿಸುವುದಾಗಿ ಬ್ಯಾಂಕ್ ಹೇಳಿತ್ತು. ಆದರೆ ಈಗ ವಿಧಿಸುವುದಿಲ್ಲ ಎಂದು ಹೊಸ ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ: ಡಿಜಿಟಲ್‌ ಗ್ರಂಥಾಲಯ – ಲಕ್ಷಕ್ಕೂ ಅಧಿಕ ಪುಸ್ತಕಗಳು ಒಂದೇ ಸೂರಿನಡಿ ಲಭ್ಯ!

ಕೋವಿಡ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ, ಸಾರ್ವಜನಿಕ ವಲಯದ ಬ್ಯಾಂಕುಗಳು ಬ್ಯಾಂಕ್ ಸೇವಾ ಶುಲ್ಕವನ್ನು ಹೆಚ್ಚಿಸದಿರಲು ನಿರ್ಧರಿಸಿದೆ ಎಂದು ಹಣಕಾಸು ಸಚಿವಾಲಯವು ಹೇಳಿಕೆ ನೀಡಿದೆ.

ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಆರ್ಥಿಕ ಚಟುವಟಿಕೆಗಳು ನಿಧಾನವಾಗುತ್ತಿರುವುದರಿಂದ ಈಗಾಗಲೇ ಹೊರೆಯಾಗಿರುವ ಬ್ಯಾಂಕಿಂಗ್ ಸೇವೆಗಳ ಸಾಮಾನ್ಯ ಗ್ರಾಹಕರು ಈ ನಿರ್ಧಾರವನ್ನು ಸ್ವಾಗತಿಸುವ ನಿರೀಕ್ಷೆಯಿದೆ.

 

LEAVE A REPLY

Please enter your comment!
Please enter your name here