ಪೆಟ್ರೋಲ್ ದರ ಮತ್ತಷ್ಟು ಏರಿಕೆ | ಎರಡು ವರ್ಷಗಳಲ್ಲೇ ಗರಿಷ್ಠ |

0
174
Tap to know MORE!

ನವದೆಹಲಿ: ಡಿ 7 : ಕಳೆದ ಎರಡು ವಾರದಿಂದ ಪೆಟ್ರೋಲ್ ಬೆಲೆ ಏರುಗತಿಯತ್ತ ಮುಖ ಮಾಡಿದೆ. ತೈಲ ಸಂಸ್ಥೆಗಳು ನಿನ್ನೆ ಮಧ್ಯರಾತ್ರಿಯಿಂದ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಹೆಚ್ಚಳ ಮಾಡಿವೆ. ಪೆಟ್ರೋಲ್ ಪ್ರತಿ ಲೀಟರ್ ಗೆ 30 ಪೈಸೆ ಮತ್ತು ಡೀಸೆಲ್ ದರ ಲೀಟರ್ ಗೆ 27 ಪೈಸೆ ಹೆಚ್ಚಳ ಮಾಡಲಾಗಿದೆ.

ಕಳೆದ ಆರು ದಿನಗಳಿಂದ ಪ್ರತಿ ದಿನ ದರದಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚಳದಿಂದ ದರ ಹೆಚ್ಚಳ ಅನಿವಾರ್ಯ ಎಂದು ತೈಲ ಸಂಸ್ಥೆಗಳು ಹೇಳುತ್ತಿವೆ. ಬೆಂಗಳೂರಿನಲ್ಲಿ ಇಂದಿನ ಪ್ರತಿ ಲೀಟರ್ ಪೆಟ್ರೋಲ್ ದರ ರೂ.86 .20 ಪೈಸೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿಯೇ ಇದು ಅತ್ಯಧಿಕ ದರವಾಗಿದೆ. ಕಳೆದ ಹತ್ತು ದಿನಗಳಲ್ಲಿ ಒಟ್ಟಾರೆಯಾಗಿ ₹1 .57 ನಷ್ಟು ಹೆಚ್ಚಳ ವಾಗಿದೆ

ಡಿಸೇಲ್ ದರದಲ್ಲೂ ತೀವ್ರ ಏರಿಕೆ ಕಂಡು ಬಂದಿದ್ದು ಇಂದಿನ ಬೆಂಗಳೂರಿನ ದರ ಎರಡು ವರ್ಷಗಳ ಸರ್ವಾಧಿಕ 78 ರೂಪಾಯಿಗೆ ತಲುಪಿದೆ.ಕಳೆದ ಹತ್ತು ದಿನದಲ್ಲಿ ಸರಿ ಸುಮಾರು ಎರಡು ರೂಪಾಯಿಯಷ್ಟು ಏರಿಕೆ ಡಿಸೇಲ್ ದರದಲ್ಲಿ ಉಂಟಾಗಿದೆ.

ಒಟ್ಟಾರೆಯಾಗಿ 2018ರ ಸೆಪ್ಟೆಂಬರ್‌ನಿಂದೀಚೆಗೆ ಗರಿಷ್ಠ ಮಟ್ಟಕ್ಕೆ ತೈಲ ದರಗಳು ಏರಿಕೆಯಾಗಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಹೆಚ್ಚಳವೇ ದೇಶಿ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಳಕ್ಕೆ ಕಾರಣವಾಗಿದೆ. ಬ್ರೆಂಟ್‌ ಮಾದರಿಯ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 49.01 ಡಾಲರ್‌ಗೆ ವೃದ್ಧಿಸಿದೆ.

ತೈಲೋತ್ಪಾದಕ ರಾಷ್ಟ್ರಗಳ ಒಕ್ಕೂಟ ಒಪೆಕ್‌ ಹಾಗೂ ರಷ್ಯಾ ತೈಲ ಉತ್ಪಾದನೆಯನ್ನು ಕಡಿತಗೊಳಿಸಲು ನಿರ್ಧರಿಸಿವೆ. ಜನವರಿಯಿಂದ ಪ್ರತಿ ದಿನಕ್ಕೆ 5 ಲಕ್ಷ ಬ್ಯಾರೆಲ್‌ಗೆ ಉತ್ಪಾದನೆಯನ್ನು ಕಡಿತಗೊಳಿಸಲು ನಿರ್ಧರಿಸಿವೆ. ಇದೂ ದರ ಏರಿಕೆ ಮೇಲೆ ಪ್ರಭಾವ ಬೀರಿದೆ.

ನಾನಾ ರಾಷ್ಟ್ರಗಳಲ್ಲಿ ಕೋವಿಡ್‌-19 ನಿರ್ಬಂಧಗಳು ಸಡಿಲವಾಗಿದ್ದು, ಆರ್ಥಿಕ ಚಟುವಟಿಕೆಗಳು ಚುರುಕಾಗುವ ಸಾಧ್ಯತೆ ಇರುವುದೂ ತೈಲಕ್ಕೆ ಬೇಡಿಕೆಯನ್ನು ಹೆಚ್ಚಿಸಲಿದೆ. ಇದೂ ದರದ ಮೇಲೆ ಪ್ರಭಾವ ಬೀರಬಹುದು ಎನ್ನುತ್ತಾರೆ ತಜ್ಞರು.

LEAVE A REPLY

Please enter your comment!
Please enter your name here