BREAKING| ಡ್ರಗ್ಸ್ ಪ್ರಕರಣ : ಕರಣ್ ಜೋಹರ್‌ಗೆ NCB ಸಮನ್ಸ್

0
123
Tap to know MORE!

ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ ಕರಣ್​ ಜೋಹರ್​ಗೆ ಮಾದಕದ್ರವ್ಯ ನಿಯಂತ್ರಣ ಮಂಡಳಿ (NCB) ಸಮನ್ಸ್​ ನೀಡಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ಬಾಲಿವುಡ್​ನ ಸಾಕಷ್ಟು ನಟ-ನಟಿಯರಿಗೆ ಕರಣ ಜೋಹರ್​ ಆಪ್ತರಾಗಿದ್ದಾರೆ. ಈಗಾಗಲೇ ಡ್ರಗ್​ ವಿಚಾರಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಿ ಬಂದವರ ಜೊತೆಗೂ ಕರಣ ಸಂಪರ್ಕದಲ್ಲಿದ್ದಾರೆ. ಹೀಗಾಗಿ, ಕೆಲ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುವ ಉದ್ದೇಶದಿಂದ ಕರಣ್​ ಜೋಹರ್​ಗೆ ನೋಟಿಸ್ ನೀಡಲಾಗಿದೆ ಎನ್ನಲಾಗುತ್ತಿದೆ. ಕರಣ್ ಜೋಹರ್​ಗೆ ಎನ್​ಸಿಬಿ ಪ್ರಶ್ನಾವಳಿ ಕಳುಹಿಸಿದೆ. ಪ್ರಶ್ನೆಗಳಿಗೆ ನಾಳೆಯೊಳಗೆ ಉತ್ತರ ಕಳಿಸಲು ಸೂಚಿಸಿದೆ. ಹೀಗಾಗಿ ಅವರು, ಖುದ್ದು ಹಾಜರಾಗುವ ಅವಶ್ಯಕತೆ ಇಲ್ಲ.

ಬಾಲಿವುಡ್​ನಲ್ಲಿ ಸಾಕಷ್ಟು ಸ್ಟಾರ್​ ನಟರ ಮಕ್ಕಳು ಚಿತ್ರರಂಗಕ್ಕೆ ಬರೋಕೆ ವೇದಿಕೆ ಸೃಷ್ಟಿ ಮಾಡಿಕೊಟ್ಟಿರುವ ಖ್ಯಾತಿ ಕರಣ್​ಗೆ ಇದೆ. ಸುಶಾಂತ್​ ಸಿಂಗ್​ಗೆ ಸಿನಿಮಾ ಆಫರ್​ ಸಿಗದಂತೆ ಮಾಡುವಲ್ಲಿ ಕರಣ್​ ಪಾತ್ರ ದೊಡ್ಡಿದೆ. ಹೀಗಾಗಿ, ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನುವ ಮಾತು ಕೇಳಿ ಬಂದಿತ್ತಾದರೂ ಯಾವುದೇ ಸಾಕ್ಷ್ಯಗಳು ಇದಕ್ಕೆ ಪೂರಕವಾಗಿರಲಿಲ್ಲ.

ಮಾದಕದ್ರವ್ಯ​ ಕೇಸ್​ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಡ್ರಗ್​ ಪೆಡ್ಲರ್​ಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಿವುಡ್​ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಡ್ರಗ್​ ಕೇಸ್​ನಲ್ಲಿ ವಿಚಾರಣೆ ಎದುರಿಸಿ ಬಂದಿದ್ದಾರೆ. ನಟ ಅರ್ಜುನ್​ ರಾಮ್​ಪಾಲ್​ಗೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಬಂದಿದ್ದು, ಒಂದು ವಾರ ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here