ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ಇ) 10ನೇ ಮತ್ತು 12ನೇ ತರಗತಿ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದ್ದಾರೆ. ಸಿಬಿಎಸ್ಇ ಪರೀಕ್ಷೆಯು ಮೇ 4 ರಿಂದ ಜೂನ್ 10 ರವರೆಗೆ ನಡೆಯಲಿದೆ ಎಂದರು. ಆದರೆ, ಸಮಯಸಾರಿಣಿ ಇಂದು ಬಿಡುಗಡೆಯಾಗಿಲ್ಲ.
ಪರೀಕ್ಷೆಯಲ್ಲಿ ಶೇಕಡಾ 33 ರಷ್ಟು ಇಂಟರ್ನಲ್ ಅಂಕಗಳು ಇರುತ್ತದೆ ಮತ್ತು ಒಟ್ಟು ಪಠ್ಯಕ್ರಮದ ಶೇ 30 ರಷ್ಟು ಭಾಗವನ್ನು ಕಡಿತಗೊಳಿಸಲಾಗಿದೆ. ಪ್ರಾಯೋಗಿಕ ಪರೀಕ್ಷೆಗಳಿಗೆ ಪರ್ಯಾಯ ಮಾರ್ಗವನ್ನು ಮಾಡುತ್ತೇವೆ ಎಂದು ಸಚಿವರು ಹೇಳಿದರು. ಪರೀಕ್ಷೆಯು ಎಂದಿನಂತೆ ಆಫ್ಲೈನ್ ಮಾದರಿಯಲ್ಲಿ, ಲಿಖಿತ ಕ್ರಮದಲ್ಲಿ ನಡೆಯಲಿದೆ.
ಇದನ್ನೂ ಓದಿ: ವಿಧಾನಪರಿಷತ್ ಉಪಸಭಾಪತಿ S.L.ಧರ್ಮೇಗೌಡ ಆತ್ಮಹತ್ಯೆ..!
ಪರೀಕ್ಷೆಗಳಿಗೆ ಹಾಜರಾಗುವ ಮೊದಲು ಶಾಲೆಯಲ್ಲಿ ತಮ್ಮ ಶಿಕ್ಷಕರೊಂದಿಗೆ ಕೆಲವು ಆಫ್ಲೈನ್ ತರಗತಿ ನಡೆಸಲು ಅವಕಾಶ ನೀಡುವಂತೆ ರಾಜ್ಯಗಳು, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಮನವಿ ಮಾಡಲಾಗಿದೆ. ಪರೀಕ್ಷೆಯನ್ನು ಮೇ ತಿಂಗಳಲ್ಲಿ ನಡೆಸುವಂತೆ ದೆಹಲಿ ಸರ್ಕಾರವೂ ಮನವಿ ಮಾಡಿತ್ತು.